ADVERTISEMENT

ವಿಡಿಯೊ ನೋಡಿ: ಲೊಕೊ ಪೈಲಟ್‌ ಇಲ್ಲದೆ 70 ಕಿ.ಮೀ.ಗೂ ಹೆಚ್ಚು ದೂರ ಚಲಿಸಿದ ರೈಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಫೆಬ್ರುವರಿ 2024, 12:17 IST
Last Updated 25 ಫೆಬ್ರುವರಿ 2024, 12:17 IST
<div class="paragraphs"><p>ರೈಲು</p></div>

ರೈಲು

   

ಪಂಜಾಬ್‌: ಜಮ್ಮು ಮತ್ತು ಕಾಶ್ಮೀರದ ಕಥುವಾ ಬಳಿ ನಿಲ್ಲಿಸಿದ್ದ ಸರಕು ಸಾಗಣೆ ರೈಲೊಂದು ಲೊಕೊ ಪೈಲಟ್‌ (ಚಾಲಕ) ಇಲ್ಲದೆ 70 ಕಿ.ಮಿಗೂ ಹೆಚ್ಚು ದೂರ ಚಲಿಸಿದ ಘಟನೆ ನಡೆದಿದೆ.

ವರದಿಯ ಪ್ರಕಾರ, 50 ಬೋಗಿಗಳಿರುವ ಸರಕು ಸಾಗಣೆ ರೈಲು ಗಂಟೆಗೆ 70 ರಿಂದ 80 ಕಿ.ಮಿ ವೇಗದಲ್ಲಿ ಸಾಗಿದೆ.

ADVERTISEMENT

ಲೊಕೊ ಪೈಲಟ್‌ ಮತ್ತು ರೈಲು ಅಧಿಕಾರಿಗಳ ಹರಸಾಹಸದಿಂದ ಪಂಜಾಬ್‌ನ ಮುಕೇರಿಯನ್ ಜಿಲ್ಲೆಯ ಉಚಿ ಬಸ್ಸಿ ಬಳಿ ರೈಲನ್ನು ನಿಲ್ಲಿಸಲಾಗಿದೆ. ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ರೈಲ್ವೆ ವಿಭಾಗೀಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ ಎಂದು ಎಎನ್‌ಐ ವರದಿ ತಿಳಿಸಿದೆ.

ಘಟನೆಯ ವಿವರ:

ಜಮ್ಮು ಮತ್ತು ಕಾಶ್ಮೀರದ ಕಥುವಾ ನಿಲ್ದಾಣದಲ್ಲಿ ಸರಕು ಸಾಗಣೆ ರೈಲನ್ನು ಸಿಬ್ಬಂದಿ ಬದಲಾವಣೆಗಾಗಿ ನಿಲ್ಲಿಸಲಾಗಿತ್ತು. ಈ ವೇಳೆ ರೈಲಿನ ಎಂಜಿನ್‌ ಆನ್‌ ಆಗಿತ್ತು. ಅಲ್ಲದೆ ಇಳಿಜಾರಿನ ಮಾರ್ಗವಾಗಿದ್ದ ಪರಿಣಾಮ ರೈಲು ಚಲಿಸಿದೆ. ಚಾಲಕ ಕೆಳಗಿಳಿಯುವ ಮೊದಲು ಹ್ಯಾಂಡ್‌ಬ್ರೇಕ್‌ ಎಳೆಯಲು ಮರೆತಿದ್ದಾನೆ ಈ ಕಾರಣದಿಂದ ರೈಲು ಮುಂದಕ್ಕೆ ಸಾಗಿದೆ ಎಂದು ಹೇಳಲಾಗಿದೆ.

ಘಟನೆಯಿಂದ ಇತರ ಯಾವುದೇ ರೈಲುಗಳಿಗೆ ಹಾನಿಯಾಗಿಲ್ಲ ಮತ್ತು ಯಾವುದೇ ಸಾವು– ನೋವು ಉಂಟಾಗಿಲ್ಲ. ಸಂಭವಿಸಬಹುದಾಗಿದ್ದ ದೊಡ್ಡ ದುರಂತವೊಂದು ತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.