ADVERTISEMENT

ಟ್ರೆಂಡ್ ಸೃಷ್ಟಿಸಿದ Gotilo ಹಾಡು ಯಾವ ಭಾಷೆಯದ್ದು ಗೊತ್ತಾ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ನವೆಂಬರ್ 2023, 14:22 IST
Last Updated 22 ನವೆಂಬರ್ 2023, 14:22 IST
<div class="paragraphs"><p>ಆದಿತ್ಯ ಗಾಧ್ವಿ</p></div>

ಆದಿತ್ಯ ಗಾಧ್ವಿ

   

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಕೆಲವು ದಿನಗಳಿಂದ ‘ಗೊತಿಲೊ’(Gotilo) ಅಥವಾ ‘ಖಲಾಸಿ’ ಹಾಡು ಟ್ರೆಂಡ್‌ ಆಗುತ್ತಿದೆ. ಇನ್‌ಸ್ಟಾಗ್ರಾಂ ರೀಲ್ಸ್‌ಗಳಲ್ಲಂತೂ ‘ಗೊತಿಲೊ’ ಹಾಡಿನದ್ದೇ ದರ್ಬಾರ್‌ ಎನ್ನುವಂತಾಗಿದೆ. ಹಾಗಾದರೆ ಈ ಹಾಡಿನ ಮೂಲ ಏನು, ಯಾರು ಹಾಡಿದ್ದು ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ಗುಜರಾತಿ ಭಾಷೆಯಲ್ಲಿರುವ ‘ಗೊತಿಲೊ’ ಯಾವ ಸಿನಿಮಾದ ಹಾಡೂ ಅಲ್ಲ. ಬದಲಾಗಿ ‘ಕೋಕ್‌ ಸ್ಟುಡಿಯೋ ಭಾರತ್‌’ ಎನ್ನುವ ಯುಟ್ಯೂಬ್‌ ಚಾನೆಲ್‌ ಜುಲೈನಲ್ಲಿ ಬಿಡುಗಡೆ ಮಾಡಿದೆ. ಆದಿತ್ಯ ಗಾಧ್ವಿ, ಅಚಿಂತ್‌ ಥಕ್ಕರ್‌ ಹಾಗೂ ಅವರೊಂದಿಗಿನ ಮಹಿಳಾ ತಂಡ ಈ ಹಾಡನ್ನು ಹಾಡಿದೆ. 

ADVERTISEMENT

‘ಈ ಹಾಡು ವ್ಯಕ್ತಿಯೊಬ್ಬನ ಸಾಹಸಮಯ ಪ್ರಯಾಣ, ಸಂತೋಷಕರ ಅನುಭವ ಮತ್ತು ಜೀವನೋತ್ಸಹದ ಬಗ್ಗೆ ಹೇಳುತ್ತದೆ!’ ಎನ್ನಲಾಗಿದೆ.

ಇನ್‌ಸ್ಟಾಗ್ರಾಂನಲ್ಲಿ ಈ ಹಾಡಿಗೆ 13 ಲಕ್ಷಕ್ಕೂ ಹೆಚ್ಚು ಜನ ರೀಲ್ಸ್‌ ವಿಡಿಯೊ, ಡ್ಯಾನ್ಸ್‌ ವಿಡಿಯೊ ಮಾಡಿದ್ದಾರೆ. ಅಲ್ಲದೆ ಜುಲೈನಲ್ಲಿ ಬಿಡುಗಡೆಯಾದ ಈ ಹಾಡು ಯುಟ್ಯೂಬ್‌ ಚಾನೆಲ್‌ನಲ್ಲಿ ಈವರೆಗೆ 7 ಕೋಟಿಗೂ ಹೆಚ್ಚು ವೀಕ್ಷಣೆ ಕಂಡಿದೆ. 

ಪ್ರಧಾನಿ ಮೋದಿಯಿಂದಲೂ ಪ್ರಶಂಸೆ

ಆದಿತ್ಯ ಗಾಧ್ವಿ ಅವರ ‘ಗೊತಿಲೊ’ (ಖಲಾಸಿ) ಹಾಡನ್ನು ಪ್ರಧಾನಿ ನರೇಂದ್ರ ಮೋದಿಯವರೂ ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ನವೆಂಬರ್ 3 ರಂದು ಟ್ವಿಟರ್‌ನಲ್ಲೂ ಹಂಚಿಕೊಂಡಿದ್ದಾರೆ. ‘ಖಲಾಸಿ ಹಾಡು ‌ಅಗ್ರಸ್ಥಾನದಲ್ಲಿದೆ. ಆದಿತ್ಯ ಗಾಧ್ವಿ ತಮ್ಮ ಸಂಗೀತದಿಂದ ಜನರ ಹೃದಯಗಳನ್ನು ಗೆಲ್ಲುತ್ತಿದ್ದಾರೆ. ಈ ವೀಡಿಯೊ ವಿಶೇಷ ಸಂವಾದದಿಂದ ನೆನಪುಗಳನ್ನು ತರುತ್ತದೆ...’ಎಂದು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.