
ಸಿಬ್ಬಂದಿ ಜನ್ಮದಿನವನ್ನು ಆಚರಿಸಿದ ನೀತಾ ಅಂಬಾನಿ
ಚಿತ್ರ ಕೃಪೆ: ಇನ್‌ಸ್ಟಾಗ್ರಾಂ
ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ತಮ್ಮ ಸಿಬ್ಬಂದಿಯೊಬ್ಬರ ಹುಟ್ಟುಹಬ್ಬವನ್ನು ಆಚರಿಸಿದ್ದು, ನೆಟ್ಟಿಗರ ಗಮನ ಸೆಳೆದಿದೆ.
ಈ ಬಗ್ಗೆ ‘ಅಂಬಾನಿ ಅಪ್ಡೇಟ್ಸ್’ ಎನ್ನುವ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊ ಹಂಚಿಕೊಳ್ಳಲಾಗಿದೆ.
ವಿಡಿಯೊದಲ್ಲಿ ಸಿಬ್ಬಂದಿ ಕೇಕ್ ಕತ್ತರಿಸುತ್ತಿರುವಾಗ ನೀತಾ ಅವರು ಚಪ್ಪಾಳೆ ತಟ್ಟಿ ಸಂಭ್ರಮಿಸಿ ಮತ್ತು ಕೇಕ್ ತಿನ್ನಿಸಿದ ದೃಶ್ಯವನ್ನು ಕಾಣಬಹುದು.
ನೀತಾ ಅವರ ಈ ನಡೆಗೆ ಅನೇಕರು ಮೆಚ್ಚುಗೆ ವ್ಯಕ್ತಡಿಸಿದ್ದಾರೆ.
ನವೆಂಬರ್ 1 ರಂದು, ನೀತಾ ಅಂಬಾನಿ ಅವರು ತನ್ನ 62 ನೇ ಹುಟ್ಟುಹಬ್ಬವನ್ನು ಜಾಮ್ನಾನಗರದಲ್ಲಿ ತಮ್ಮ ಸಿಬ್ಬಂದಿಯೊಂದಿಗೆ ಆಚರಿಸಿಕೊಂಡಿದ್ದರು. ನೀತಾ ಅವರಿಗಾಗಿ ಸಿಬ್ಬಂದಿ, ಗುಲಾಬಿ ದಳಗಳಿಂದ ಅಲಂಕರಿಸಿ, ಕೇಕ್ ಕತ್ತರಿಸಿ ಆಚರಿಸಿದ್ದರು. ತಮ್ಮ ಜನ್ಮದಿನವನ್ನು ವಿಶೇಷವಾಗಿ ಆಚರಿಸಿದ ಸಿಬ್ಬಂದಿಗೆ ನೀತಾ ಧನ್ಯವಾದ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.