ADVERTISEMENT

ಕ್ಯಾಮೆರಾ ಮುಂದೆಯೇ ಬಾಲಕನ ಕೆನ್ನೆಗೆ ಬಾರಿಸಿದ ಪಾಕಿಸ್ತಾನಿ ಟಿವಿ ಪತ್ರಕರ್ತೆ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜುಲೈ 2022, 13:37 IST
Last Updated 12 ಜುಲೈ 2022, 13:37 IST
ಮೈರಾ
ಮೈರಾ   

ಬೆಂಗಳೂರು: ಪಾಕಿಸ್ತಾನದ ಟಿವಿ ವಾಹಿನಿಯೊಂದರ ಪತ್ರಕರ್ತೆಯೊಬ್ಬರ ವರದಿ ನೀಡುವಾಗ ಕ್ಯಾಮೆರಾ ಮುಂದೆಯೇ ಬಾಲಕನೊಬ್ಬನ ಕೆನ್ನೆಗೆ ಟಪಾರ್ ಎಂದು ಬಾರಿಸಿರುವ ಘಟನೆ ನಡೆದಿದೆ.

ಪತ್ರಕರ್ತೆ ಮೈರಾ ಹಾಶ್ಮಿ ಎನ್ನುವವರು ಈದ್ ಅಲ್ ಅದಾ ಹಬ್ಬದ ಪ್ರಯುಕ್ತ ಹಬ್ಬದ ಸಂಭ್ರಮಾಚರಣಗೆ ಬಗ್ಗೆ ಲಾಹೋರ್‌ನಲ್ಲಿ ವರದಿ ಮಾಡುತ್ತಿದ್ದರು. ಈ ವೇಳೆ ಮಕ್ಕಳು ಮಹಿಳೆಯರು ನೆರೆದಿದ್ದರು.

ಬಾಲಕನೊಬ್ಬ ಮೈರಾ ಅವರನ್ನು ರೇಗಿಸಿದ್ದರಿಂದ ಮೈರಾ ಕೂಡಲೇ ಬಾಲಕನ ಕೆನ್ನೆಗೆ ಕ್ಯಾಮೆರಾ ಮುಂದೆಯೇ ಬಾರಿಸಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೊ ವೈರಲ್ ಆಗಿದೆ.

ADVERTISEMENT

ಬಳಿಕ ಸ್ಪಷ್ಟನೆ ನೀಡಿರುವ ಮೈರಾ ಅವರು ಬಾಲಕ ಅವಾಚ್ಯ ಶಬ್ದಗಳನ್ನು ಬಳಸಿ ಗಲಾಟೆ ಮಾಡುತ್ತಿದ್ದ. ಹೀಗಾಗಿ ಕೊಪದಿಂದ ಹೊಡೆದಿದ್ದೇನೆ. ಅವರಿಗೆ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.