ADVERTISEMENT

ಉಬರ್‌ನಲ್ಲಿ 50,000 ಟ್ರಿಪ್ ಪೂರ್ಣಗೊಳಿಸಿದ ಚಾಲಕ: ತಿಂಗಳ ಗಳಿಕೆ ಎಷ್ಟು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಫೆಬ್ರುವರಿ 2026, 9:00 IST
Last Updated 23 ಫೆಬ್ರುವರಿ 2026, 9:00 IST
<div class="paragraphs"><p>ಉಬರ್‌ ಕ್ಯಾಬ್‌– ಸಾಂದರ್ಭಿಕ ಚಿತ್ರ</p></div>

ಉಬರ್‌ ಕ್ಯಾಬ್‌– ಸಾಂದರ್ಭಿಕ ಚಿತ್ರ

   

ಇಂದು ಮಹಾನಗರಗಳಲ್ಲಿ ಓಲ, ಉಬರ್‌ಗಳನ್ನು ಚಲಾಯಿಸಿಕೊಂಡು ಬದುಕು ಕಟ್ಟಿಕೊಂಡವರ ಸಂಖ್ಯೆ ಹೆಚ್ಚಿದೆ. ಕೆಲವರು ಪಾರ್ಟ್‌ ಟೈಮ್‌ಗಾಗಿ ಓಲ ಮತ್ತು ಉಬರ್ ಓಡಿಸುತ್ತಿರುತ್ತಾರೆ. ಇನ್ನೂ ಅನೇಕರು ಇದನ್ನೇ ವೃತ್ತಿಯಾಗಿ ಆಯ್ಕೆ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ.

ಸದ್ಯ, ದೆಹಲಿ ಮೂಲದ ಉಬರ್ ಚಾಲಕ ಹಜರತ್ ಎಂಬಾತ ಇತ್ತೀಚೆಗೆ ಉಬರ್‌ನಲ್ಲಿ ಬರೋಬ್ಬರಿ 50,000 ಟ್ರಿಪ್‌ಗಳನ್ನು ಪೂರ್ಣಗೊಳಿಸಿರುವುದಾಗಿಯೂ, ಮತ್ತು ಅದರಿಂದ ಬಂದ ಆದಾಯ ಎಷ್ಟು? ಎಂಬುದನ್ನು ಬಹಿರಂಗಪಡಿಸಿದ್ದಾರೆ.

ADVERTISEMENT

ಡ್ರೈವಿಂಗ್ ವಿತ್ ಉಬರ್ ಇಂಡಿಯಾ ತನ್ನ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಈ ಸಾಧನೆಯ ವಿಡಿಯೊ ಅನ್ನು ಹಂಚಿಕೊಂಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ವಿಡಿಯೊದಲ್ಲಿ ಹಜರತ್‌ ಅವರ ಪಯಾಣ ಉಬರ್‌ನೊಂದಿಗಿನ ಹೇಗೆ ಆರಂಭವಾಯಿತು ಎಂಬುದನ್ನು ವಿವರಿಸಿದ್ದಾರೆ.

ಉತ್ತರ ಪ್ರದೇಶ ಮೂಲದ ಹಜರತ್ ಮೊದಲು ಕಂಪನಿಯೊಂದರಲ್ಲಿ ಬಟ್ಟೆ ಹೊಲಿಗೆಯ ಕೆಲಸ ಮಾಡುತ್ತಿದ್ದರು. ಬೇರೆ ಕೆಲಸ ನೋಡುತ್ತಿದ್ದ ಹಜರತ್‌ ಅವರಿಗೆ ಸ್ನೇಹಿತನೊಬ್ಬ ಉಬರ್‌ಗೆ ಸೇರುವಂತೆ ಸಲಹೆ ನೀಡಿದರು. ಆದರೆ, ಈ ಕ್ಷೇತ್ರದಲ್ಲಿ ಅನುಭವ, ಕಾರು ಎರಡೂ ಇಲ್ಲದ ಹಜರತ್, ಸ್ನೇಹಿತನಿಂದಲೇ ಕಾರು ಪಡೆದು ಉಬರ್ ಕೆಲಸ ಆರಂಭಿಸಿರುವುದಾಗಿ ಹೇಳಿಕೊಂಡಿದ್ದಾರೆ. 

ಮೊದಮೊದಲು ಎಲ್ಲಾ ಸ್ಥಳಗಳಿಗೆ ಹೋಗುವುದು ಕಷ್ಟವಾಗುತ್ತಿತ್ತು. ಆದರೆ ಕಂಪನಿ ನಿಯಮದ ಪ್ರಕಾರ ಎಲ್ಲಾ ಸ್ಥಳಗಳಿಗೂ ಪ್ರಯಾಣ ಮಾಡಬೇಕಿತ್ತು. ‘ನೀನು ನಿಧಾನವಾಗಿ ಕೆಲಸ ಮಾಡು, ಅನುಭವದಿಂದ ಎಲ್ಲವನ್ನು ಕಲಿಯುತ್ತೀಯ’ ಎಂದು ಸ್ನೇಹಿತ ಸಲಹೆ ಕೊಟ್ಟಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

‘ನಾನು ಉಬರ್‌ನಲ್ಲಿ 50,000 ಟ್ರಿಪ್‌ಗಳನ್ನು ಪೂರ್ಣಗೊಳಿಸಿದ್ದೇನೆ. ಒಂದು ತಿಂಗಳಲ್ಲಿ ನನ್ನ ಅತ್ಯಧಿಕ ಗಳಿಕೆ ₹1,20,000 ಆಗಿದೆ. ಉಬರ್‌ನಲ್ಲಿ ನನಗೆ ಇಷ್ಟವಾದ ವಿಷಯವೆಂದರೆ ‘ನಾನು ಬಯಸಿದಂತೆ ಕೆಲಸ ಮಾಡಬಹುದು’ ಎಂದು ಹಜರತ್‌ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.

ದೆಹಲಿಯಲ್ಲಿ ಉಬರ್ ಚಾಲಕನೊಬ್ಬನ ಸರಾಸರಿ ಮಾಸಿಕ ವೇತನ ಸುಮಾರು ₹18,883 ಆಗಿದೆ. ಗ್ಲಾಸ್‌ಡೋರ್ ಪ್ರಕಾರ, ಉಬರ್‌ನಲ್ಲಿ ಚಾಲಕರ ಅಂದಾಜು ವೇತನ ಶ್ರೇಣಿ ತಿಂಗಳಿಗೆ ₹16,000 - ₹29,000 ಆಗಿದೆ. ಚಾಲಕ ಯಾವಾಗ, ಎಲ್ಲಿ ಮತ್ತು ಎಷ್ಟು ಬಾರಿ ಚಾಲನೆ ಮಾಡುತ್ತಾನೆ ಎಂಬುದರ ಮೇಲೆ ಗಳಿಕೆ ಅವಲಂಬಿತವಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.