ಬೀಜಿಂಗ್: ಉದ್ದನೆಯ ಮೇಜಿನ ಮೇಲೆ ಕಂತೆ ಕಂತೆ ಹಣ.. ಸುತ್ತಲೂ ನೌಕರರು... 15 ನಿಮಿಷ ಸಮಯ... ಎಷ್ಟು ಬೇಕೊ ಅಷ್ಟು ಹಣ ಬಾಚಿಕೊಳ್ಳುವ ಅವಕಾಶ... ಚೀನಾದ ಕ್ರೇನ್ ಕಂಪನಿಯೊಂದರ ಬೋನಸ್ ವಿತರಣಾ ಕಾರ್ಯಕ್ರಮದ ದೃಶ್ಯವಿದು.
ಹೆನಾನ್ ಮೈನಿಂಗ್ ಕ್ರೇನ್ ಕಂಪನಿಯ ಬೋನಸ್ ವಿತರಣಾ ಕಾರ್ಯಕ್ರಮದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ತನ್ನ ನೌಕರರಿಗೆ 15 ನಿಮಿಷದಲ್ಲಿ ಎಷ್ಟು ಬೇಕೋ ಅಷ್ಟು ಹಣವನ್ನು ತೆಗೆದುಕೊಂಡು ಹೋಗುವ ಅವಕಾಶವನ್ನು ಕಂಪನಿ ನೀಡಿದೆ.
ಮೇಜಿನ ಮೇಲೆ ಸುಮಾರು 11 ಮಿಲಿಯನ್ ಡಾಲರ್(ಸುಮಾರು ₹70 ಕೋಟಿ) ಹಣವನ್ನು ಹಾಕಲಾಗಿದ್ದು, ನೌಕರರು ನಿಗದಿತ ಸಮಯದಲ್ಲಿ ತಮಗೆ ಸಾಧ್ಯವಾದಷ್ಟು ಹಣವನ್ನು ತೆಗೆದುಕೊಳ್ಳಬಹುದಾಗಿತ್ತು. ಒಬ್ಬ ನೌಕರ ಬರೋಬ್ಬರಿ ₹12.07 ಲಕ್ಷ ಹಣವನ್ನು ಬಾಚಿಕೊಂಡಿದ್ದಾನೆ ಎಂದು ವಿಡಿಯೊದಲ್ಲಿ ಹೇಳಲಾಗಿದೆ.
ಈ ವಿಡಿಯೊಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕಂಪನಿಯ ಉದಾರತೆಯನ್ನು ಶ್ಲಾಘಿಸಿದರೆ, ಇನ್ನು ಕೆಲವರು ಬೋನಸ್ ನೀಡುವ ಕ್ರಮವನ್ನು ಟೀಕಿಸಿದ್ದಾರೆ.
ಕೆಲ ನೆಟ್ಟಿಗರು ತಮ್ಮ ಕಂಪನಿಗಳು ಇಷ್ಟು ಉದಾರತೆ ತೋರಿಸುವುದಿಲ್ಲ ಏಕೆ ಎಂದು ಕೈ ಕೈ ಹಿಚುಕಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.