ಪಶ್ಚಿಮ ಬಂಗಾಳದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಹಾಗೂ ಹಿರಿಯ ವಕೀಲ, ಬಿಜೆಡಿ ಪಕ್ಷದ ಮಾಜಿ ಸಂಸದ ಪಿನಾಕಿ ಮಿಶ್ರಾ ಅವರು ಇತ್ತೀಚೆಗೆ ಮದುವೆಯಾಗಿದ್ದಾರೆ.
ಬೆಂಗಳೂರು: ಪಶ್ಚಿಮ ಬಂಗಾಳದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಹಾಗೂ ಹಿರಿಯ ವಕೀಲ, ಬಿಜೆಡಿ ಪಕ್ಷದ ಮಾಜಿ ಸಂಸದ ಪಿನಾಕಿ ಮಿಶ್ರಾ ಅವರು ಇತ್ತೀಚೆಗೆ ಮದುವೆಯಾಗಿದ್ದಾರೆ.
ವಯಸ್ಸಿನ ಅಂತರದಿಂದ ಇವರಿಬ್ಬರ ಮದುವೆ ಗಮನ ಸೆಳೆದಿತ್ತು. ಈ ಜೋಡಿ ಇದೀಗ ಬಾಲಿವುಡ್‌ನ ಶಮ್ಮಿ ಕಪೂರ್, ಶರ್ಮಿಳಾ ಟ್ಯಾಗೋರ್ ಅಭಿನಯದ 'ಆ್ಯನ್ ಇವನಿಂಗ್ ಇನ್ ಪ್ಯಾರಿಸ್' ಸಿನಿಮಾದ ಜನಪ್ರಿಯ ‘ರಾತ್ ಕೆ ಹಮ್ ಸಫರ್’ ಹಾಡಿಗೆ ನೃತ್ಯ ಮಾಡಿ ಈ ವಯಸ್ಸಿನಲ್ಲೂ ನಮ್ಮದು ಭಲೇ ಜೋಡಿ ಎಂದು ಸಾಬೀತುಪಡಿಸಿದೆ.
ವಿಡಿಯೊವನ್ನು ಮಹುವಾ ಮೊಯಿತ್ರಾ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ನೂರ್ಕಾಲ ಹೀಗೆ ಇರಿ ಎಂದು ಹಾರೈಸಿದ್ದಾರೆ.
ಈ ಜೋಡಿ ಜರ್ಮನಿಯಲ್ಲಿ ಇತ್ತೀಚೆಗೆ ಆಪ್ತರ ಸಮ್ಮುಖದಲ್ಲಿ ಮದುವೆಯಾಗಿತ್ತು. ಇಬ್ಬರಿಗೂ ಇದು ಎರಡನೇ ಮದುವೆ.
ಮೊಯಿತ್ರಾ ಅವರು ಪಶ್ಚಿಮ ಬಂಗಾಳದ ಕೃಷ್ಣಾನಗರ ಲೋಕಸಭಾ ಕ್ಷೇತ್ರದಿಂದ ಎರಡನೇ ಬಾರಿ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಮಿಶ್ರಾ ಅವರು ಒಡಿಶಾದ ಪುರಿ ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಸದ್ಯ ಅವರು ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲರಾಗಿದ್ದಾರೆ.
ಮೊಹುವಾ ಅವರು ಈ ಮೊದಲು ಡೆನ್ಮಾರ್ಕ್‌ನ ಲಾರ್ಸ್ ಬ್ರಾಸನ್ ಅವರನ್ನು ಮದುವೆಯಾಗಿದ್ದರು. ಪಿನಾಕಿ ಮಿಶ್ರಾ ಅವರು ಈ ಸಂಗೀತಾ ಮಿಶ್ರಾ ಅವರನ್ನು ಮದುವೆಯಾಗಿದ್ದರು. ಈ ಇಬ್ಬರಿಗೂ ಇಬ್ಬರು ಮಕ್ಕಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.