ADVERTISEMENT

Viral Video: ವಾಹನ ಸಿಗದೇ ಮೃತದೇಹವನ್ನು ಮಂಚದಲ್ಲಿ ಹೊತ್ತು ಸಾಗಿದ ಮಹಿಳೆಯರು!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಮಾರ್ಚ್ 2022, 13:08 IST
Last Updated 30 ಮಾರ್ಚ್ 2022, 13:08 IST
ವಾಹನ ಸಿಗದೇ ಮೃತದೇಹವನ್ನು ಮಂಚದಲ್ಲಿ ಹೊತ್ತು ಸಾಗಿದ ಮಹಿಳೆಯರು!
ವಾಹನ ಸಿಗದೇ ಮೃತದೇಹವನ್ನು ಮಂಚದಲ್ಲಿ ಹೊತ್ತು ಸಾಗಿದ ಮಹಿಳೆಯರು!   

ರೇವಾ: ಆಸ್ಪತ್ರೆಯಲ್ಲಿ ಮೃತಪಟ್ಟ ತಮ್ಮ ಸಂಬಂಧಿ ಮಹಿಳೆಯ ಮೃತದೇಹವನ್ಬು ಸಾಗಿಸಲು ಆ್ಯಂಬುಲೆನ್ಸ್ ಸಿಗದೆ, ನಾಲ್ವರು ಮಹಿಳೆಯರು ಮಂಚದಲ್ಲೇ ಹೊತ್ತುಕೊಂಡು ಹೋಗಿರುವ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ.

ನಾಲ್ವರು ಮಹಿಳೆಯರು ಮೃತದೇಹವನ್ನು ಹೊತ್ತುಕೊಂಡು ಹೋಗುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.

ಜಿಲ್ಲೆಯ ರಾಯ್‌ಪುರ್ ಎಂಬ ಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಫಲಿಸದೇ ಮಹಿಳೆಯೊಬ್ಬರು ಕಳೆದ ಮಂಗಳವಾರ ಮೃತಪಟ್ಟಿದ್ದರು. ಅವರ ಮೃತದೇಹ ಸಾಗಿಸಲು ಸಂಬಂಧಿಕರು ಅಂಬುಲೆನ್ಸ್ ಕೇಳಿದರೂ ಆಸ್ಪತ್ರೆಯವರು ಒದಗಿಸಲಿಲ್ಲ ಎಂದು ಆರೋಪಿಸಲಾಗಿದೆ.

ADVERTISEMENT

ಇದರಿಂದ ಮನನೊಂದ ಮೃತ ಸಂಬಂಧಿಯ ನಾಲ್ವರು ಮಹಿಳೆಯರು ಮೃತದೇಹವನ್ನು ಮಂಚದಲ್ಲಿ ಹೊತ್ತುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಿದ್ದಾರೆ.

ಆದರೆ, ಮಹಿಳೆಯರ ಆರೋಪವನ್ನು ಆಸ್ಪತ್ರೆಯ ವೈದ್ಯಾಧಿಕಾರಿಗಳು ನಿರಾಕರಿಸಿದ್ದು, ‘ನಾವು ವಾಹನ ವ್ಯವಸ್ಥೆ ಮಾಡುತ್ತೇವೆ ಎಂದರೂ ಮಹಿಳೆಯರು ಮಂಚದಲ್ಲೇ ಶವ ಸಾಗಿಸಿದ್ದಾರೆ ಎಂದು ಮುಖ್ಯ ವೈದ್ಯಾಧಿಕಾರಿ ಬಿ.ಎಲ್. ಮಿಶ್ರಾ ಹೇಳಿದ್ದಾರೆ.

ಈ ಕುರಿತು ಜಿಲ್ಲಾ ಆರೋಗ್ಯ ಕೇಂದ್ರ ವಿಚಾರಣೆ ನಡೆಸಿದ್ದು, ಗ್ರಾಮದಲ್ಲಿ ವಾಹನಗಳ ಕೊರತೆಯೇ ಈ ಸಮಸ್ಯೆಗೆ ಕಾರಣ ಎಂದು ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.