ADVERTISEMENT

ನಳನಳಿಸುವ ಚರ್ಮಕ್ಕೆ: ಆಹಾರ ಕ್ರಮ ಹೀಗಿರಬೇಕು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 23:30 IST
Last Updated 24 ಅಕ್ಟೋಬರ್ 2025, 23:30 IST
   

ಕರುಳು ಆರೋಗ್ಯದಿಂದ ಇದ್ದರೆ ಚರ್ಮವು ನಳನಳಿಸುತ್ತದೆ. ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳು ಸಕ್ರಿಯವಾಗಿದ್ದರೆ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ. ಜೀರ್ಣಕ್ರಿಯೆ ಸರಿಯಾಗಿದ್ದರೆ ಎಲ್ಲ ಅಂಗಾಂಗಗಳು ಸಮರ್ಪಕವಾಗಿ ಕೆಲಸ ಮಾಡುತ್ತವೆ. ವಿಷಕಾರಿ ಆಹಾರ ಸೇವನೆಯನ್ನು ತಪ್ಪಿಸಿದರೆ ರಕ್ತ ಶುದ್ಧಿಯಾಗಿ ಇರುವುದಲ್ಲದೆ ಚರ್ಮದ ಆರೋಗ್ಯದ ಮೇಲೂ ಉತ್ತಮ ಪರಿಣಾಮ ಬೀರುತ್ತದೆ.

ಹಾಗಾಗಿ, ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳು ಸಕ್ರಿಯಗೊಳ್ಳಲು ಪ್ರೊಬಯಾಟಿಕ್‌ ಆಹಾರವನ್ನು ಹೆಚ್ಚು ಸೇವಿಸಬೇಕು. ಗಟ್ಟಿ ಮೊಸರು, ಚೀಸ್, ಮಜ್ಜಿಗೆ, ಯಾವುದೇ ಫ್ಲೇವರ್‌ ಹಾಕದ ಲಸ್ಸಿ, ನೆನೆಸಿಟ್ಟ ಸೋಯಾಬೀನ್‌ ಆಹಾರ ಕ್ರಮದಲ್ಲಿ ಇರುವಂತೆ ನೋಡಿಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT