ಚಿಕ್ಕಮಗಳೂರು (Chikkamagaluru) ಜಿಲ್ಲೆ ಮೂಡಿಗೆರೆ (Mudigere) ತಾಲ್ಲೂಕು ಬಾಳೂರು ಸಮೀಪದ ಗುಡ್ನಹಳ್ಳಿಯ ರಕ್ಷಿತಾ ರಾಜು (Rakshita Raju) ಅವರಿಗೆ ಹುಟ್ಟಿನಿಂದಲೇ ಅಂಧತ್ವ (Blindness) ಇತ್ತು. ಹುಟ್ಟಿದ ಎರಡೇ ವರ್ಷಕ್ಕೆ ತಾಯಿ, ಹತ್ತನೇ ವರ್ಷಕ್ಕೆ ತಂದೆಯನ್ನು ಕಳೆದುಕೊಂಡರು. ಮಾತು ಬಾರದ, ಕಿವಿಯೂ ಕೇಳಿಸದ ಅಜ್ಜಿ ಲಲಿತಮ್ಮರೊಂದಿಗೆ ಬೆಳೆದರು. ಆದರೆ, ಇದ್ಯಾವುದಕ್ಕೂ ಎದೆಗುಂದದ ರಕ್ಷಿತಾ, ಪ್ಯಾರಾಲಿಂಪಿಕ್ಸ್‌ನಲ್ಲಿ (Paralympics) ಭಾರತವನ್ನು ಪ್ರತಿನಿಧಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi), ಉದ್ಯಮಿ ಮುಖೇಶ್ ಅಂಬಾನಿ (Mukesh Ambani) ಸೇರಿದಂತೆ ಹಲವರು ರಕ್ಷಿತಾ ಅವರ ಸಾಧನೆಯನ್ನು ಕೊಂಡಾಡಿದ್ದಾರೆ. ಈ ವರ್ಷದ ಖೇಲೊ ಇಂಡಿಯಾದಲ್ಲಿ (Khelo India) ಭಾಗವಹಿಸಲು ಸಜ್ಜಾಗಿರುವ ರಕ್ಷಿತಾ ಅವರ ಸ್ಫೂರ್ತಿಯ ಕಥನ (Inspiring Story) ಈ ವಿಡಿಯೊದಲ್ಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.