ಚಳಿಗಾಲ ಬಂತೆಂದರೆ ಸಾಕು, ಶಾಲು, ಸ್ವೆಟರ್, ಜಾಕೆಟ್, ಟೋಪಿಗಳು ಎಲ್ಲರ ಮೈಮೇಲೆ ರಾರಾಜಿಸುತ್ತವೆ. ಆದರೆ ಇವು ಕೂಡ ಈಗ ಫ್ಯಾಷನ್ ಸ್ಪರ್ಶ ಪಡೆದಿವೆ. ಹೊಸ ಶೈಲಿಯ ಉಣ್ಣೆಯ ಉಡುಪುಗಳು, ಜಾಕೆಟ್, ಕಾಲುಚೀಲ, ಗ್ಲವ್ಸ್ ಮೊದಲಾದವುಗಳು ಚಳಿಗಾಲದ ಫ್ಯಾಷನ್ ಟ್ರೆಂಡ್ ಅನ್ನೇ ಬದಲಾಯಿಸಿಬಿಟ್ಟಿವೆ. ಉಡುಪು ವಿನ್ಯಾಸಕರು ಕೂಡ ಇದರ ಲಾಭ ಪಡೆಯುತ್ತಿದ್ದಾರೆ. ಇಡೀ ಫ್ಯಾಷನ್ ಉದ್ಯಮ ಪ್ರತಿಯೊಂದು ಕಾಲಕ್ಕೆ ಅನುಗುಣವಾಗಿ ಹೊಸ ಹೊಸ ವಿನ್ಯಾಸಕ್ಕೆ ತೆರೆದುಕೊಂಡು ಗ್ರಾಹಕರನ್ನು ಮೋಡಿ ಮಾಡುತ್ತಿದೆ. ಇದೇ ರೀತಿ ಚಳಿಗಾಲದಲ್ಲೂ ಅವರು ಹೊಸ ಬಗೆಯ ಪ್ರಯೋಗ ಮಾಡಿ ಮಾರುಕಟ್ಟೆಗೆ ಬಿಟ್ಟಿದ್ದಾರೆ.
ಗಿಡ್ಡನೆಯ ಜಾಕೆಟ್
ಗಿಡ್ಡನೆಯ ಜಾಕೆಟ್ ಅನ್ನು ತೊಡುವುದು ಇದೀಗ ಫ್ಯಾಷನ್ ಎನಿಸಿದೆ. ಅದರಲ್ಲೂ ಯುವತಿಯರು ಜೀನ್ಸ್, ಕುರ್ತಾ, ಸ್ಕರ್ಟ್ ಮೇಲೆ ಇದನ್ನು ತೊಟ್ಟು ಮೆರೆಯುತ್ತಿದ್ದಾರೆ. ಗಾಢ ರಂಗಿನ ಈ ಜಾಕೆಟ್‌ಗಳು ಸ್ಲೀವ್‌ಲೆಸ್, ಅರೆ ತೋಳು, ತುಂಬು ತೋಳಿನಲ್ಲಿ ರಾರಾಜಿಸುತ್ತವೆ.
ಹೂಡ್ ಜಾಕೆಟ್
ಟೋಪಿ ಸಮೇತ ಇರುವ ಹೂಡ್ ಜಾಕೆಟ್ ಚಳಿಗಾಲದಲ್ಲಿ ಯುವಕ/ ಯುವತಿಯರ ಅಚ್ಚುಮೆಚ್ಚಿನ ಉಡುಪು. ಈ ಜಾಕೆಟ್‌ನ ಆಕರ್ಷಣೆಯೆಂದರೆ ಕತ್ತಿನ ಹಿಂದೆ ಬೀಳುವ ಟೋಪಿಯ ವಿನ್ಯಾಸ. ಹೀಗಾಗಿ ಪ್ರತ್ಯೇಕವಾಗಿ ಟೋಪಿ ತೆಗೆದುಕೊಳ್ಳುವ ಅಗತ್ಯ ಬೀಳುವುದಿಲ್ಲ.
ಇದನ್ನೂ ಓದಿ:ಚಳಿಗಾಲದ ಫ್ಯಾಷನ್ ಸ್ಯಾಟಿನ್ ಉಡುಪು
ಸ್ಕರ್ಟ್ ಮತ್ತು ಲೆಗ್ಗಿಂಗ್
ಸ್ಕರ್ಟ್ ಆಕರ್ಷಣೆ ನಿತ್ಯ ನೂತನ. ಹುಡುಗಿಯರ ಬಳಿ ಒಂದಾದರೂ ಸ್ಕರ್ಟ್ ಇರಲೇಬೇಕು. ಈ ಚಳಿಗಾಲದಲ್ಲಿ ಸ್ಕರ್ಟ್‌ಗೆ ಹೊಸ ವಿನ್ಯಾಸ ನೀಡಲಾಗಿದೆ. ಅಂದರೆ ಸ್ಕರ್ಟ್ ಜೊತೆ ಲೆಗ್ಗಿಂಗ್ ಧರಿಸುವ ಟ್ರೆಂಡ್ ಶುರುವಾಗಿದೆ. ನೆರಿಗೆಯುಳ್ಳ ಸ್ಕರ್ಟ್, ಫಿಶ್ ಕಟ್, ರ‍್ಯಾಪ್ ಅರೌಂಡ್, ಪ್ಲೀಟೆಡ್, ಪೆನ್ಸಿಲ್... ಹೀಗೆ ವಿವಿಧ ವಿನ್ಯಾಸದ ಸ್ಕರ್ಟ್‌ಗಳ ಜೊತೆ ಅದಕ್ಕೆ ಸರಿಯಾಗಿ ಹೊಂದುವ ಲೆಗ್ಗಿಂಗ್ ಧರಿಸಬಹುದು. ಸ್ಕರ್ಟ್ ಜೊತೆಗೂ ಅದಕ್ಕೆ ಸೇರಿಕೊಂಡಿರುವಂತಹ ಸ್ಕರ್ಟ್ ಮಾರುಕಟ್ಟೆ ಪ್ರವೇಶಿಸಿದೆ.
ಮಿಕ್ಸ್ ಮತ್ತು ಮ್ಯಾಚ್
ಈ ಚಳಿಗಾಲದಲ್ಲಿ ಇತರರಿಗಿಂತ ಪ್ರತ್ಯೇಕವಾಗಿ ಕಾಣಲು ನೀವು ಖರೀದಿಸಿದ ಉಡುಪುಗಳಲ್ಲಿ ಮಿಕ್ಸ್ ಮತ್ತು ಮ್ಯಾಚ್ ಮಾಡಿ ಧರಿಸಬಹುದು. ಹೀಗಾಗಿ ಖರೀದಿಸುವಾಗ ಅದಕ್ಕೆ ಬೇರೆ ಯಾವ ಉಡುಪು ಮ್ಯಾಚ್ ಆಗುತ್ತದೆ ಎಂಬ ಚಿಂತೆ ಬೇಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.