
ಇತ್ತೀಚೆಗೆ ನಾನು ಕನ್ನಡದ ಟಿ.ವಿ ಚಾನೆಲ್‌ವೊಂದರ ರಿಯಾಲಿಟಿ ಶೋ ನೋಡಿದೆ. ಅದರಲ್ಲಿ ಪಾಲ್ಗೊಂಡಿದ್ದ ಹೆಣ್ಣುಮಕ್ಕಳಿಗೆ ನೀಡಿದ್ದ ಟಾಸ್ಕೊಂದು ಗಮನಸೆಳೆಯಿತು. ಆ ಹೆಣ್ಣುಮಕ್ಕಳು ರಸ್ತೆಯಲ್ಲಿ ಹೋಗುವಾಗ ಕೆಲವು ದುಷ್ಟರು ಹಿಂಬಾಲಿಸಿ ಅವರೊಂದಿಗೆ ಕೆಟ್ಟದಾಗಿ ವರ್ತಿಸುತ್ತಾರೆ. ಆಗ ಅವರು ಸ್ವತಃ ಹೋರಾಡಿ ಆ ವ್ಯಕ್ತಿಗಳಿಂದ ಪಾರಾಗಬೇಕಿರುತ್ತದೆ. ಇಂದಿನ ಹೆಣ್ಣುಮಕ್ಕಳಿಗೆ ಇದು ಒಂದು ಮಾದರಿ ಟಾಸ್ಕ್‌ನಂತೆ ತೋರಿತು.
ಎಲ್ಲಾ ಶಾಲಾ– ಕಾಲೇಜುಗಳಲ್ಲಿ ವಾರದಲ್ಲಿ ಒಂದು ದಿನ ಸರ್ಕಾರದಿಂದ ಅಥವಾ ಯಾವುದೇ ಟ್ರಸ್ಟ್ ವತಿಯಿಂದ ವಿದ್ಯಾರ್ಥಿನಿಯರಿಗೆ ಕಡ್ಡಾಯವಾಗಿ ಕರಾಟೆ ತರಬೇತಿ ನೀಡಬೇಕು. ಅಹಿತಕರ ಸಂದರ್ಭ ಎದುರಾದರೆ, ಪೊಲೀಸರು ಅಥವಾ ಇತರ ವ್ಯಕ್ತಿಗಳ ನೆರವಿಲ್ಲದೆ ಅವರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ. ಇದಕ್ಕಾಗಿ, ಶಾಲಾ–ಕಾಲೇಜುಗಳಲ್ಲಿ ದೈಹಿಕ ಶಿಕ್ಷಕರ ರೀತಿಯಲ್ಲಿ ಕರಾಟೆ ತರಬೇತಿ ಶಿಕ್ಷಕರನ್ನೂ ನೇಮಕ ಮಾಡುವುದು ಸೂಕ್ತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.