ADVERTISEMENT

ಟ್ರೆಂಡ್‌ ಹುಟ್ಟು ಹಾಕಿದ ಖಾದಿ ಫ್ಯಾಶನ್‌!

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 19:45 IST
Last Updated 18 ಫೆಬ್ರುವರಿ 2020, 19:45 IST
ಚಿತ್ರ– ರೈಸಿನ್‌
ಚಿತ್ರ– ರೈಸಿನ್‌   

ಖಾದಿ ಬಟ್ಟೆಗಳೆಂದರೆ ಹಿರಿಯರು ಮತ್ತು ಗಾಂಧಿವಾದಿಗಳು ಅಚ್ಚುಮೆಚ್ಚಿನ ಬಟ್ಟೆಗಳು ಎಂಬ ಸಾಮಾನ್ಯ ನಂಬಿಕೆ ದೂರವಾಗಿದೆ. ಖಾದಿ ಬಟ್ಟೆಯೂ ಫ್ಯಾಶನ್‌ ಮತ್ತು ಯುವ ಸಮೂಹ ಸ್ನೇಹಿಯಾಗಿ ಗುರುತಿಸಿಕೊಳ್ಳುತ್ತಿದೆ.ಆಧುನಿಕ ಸ್ಪರ್ಶದೊಂದಿಗೆ ಖಾದಿ ಕೂಡ ಈಗ ಫ್ಯಾಶನ್‌ ಟ್ರೆಂಡ್‌ ಆಗಿ ಮಾರ್ಪಟ್ಟಿದೆ.

ಕಳೆದ 150 ವರ್ಷಗಳಿಂದ ಖಾದಿ ಬಟ್ಟೆ ಬಳಸುತ್ತಿದ್ದರೂ ಖಾದಿ ಬಗ್ಗೆ ಜನರ ಪ್ರೀತಿ ಕಡಿಮೆಯಾಗಿಲ್ಲ. ವಸ್ತ್ರವಿನ್ಯಾಸಕರು ಸಹ ಖಾದಿ ಬಟ್ಟೆಯೊಂದಿಗೆ ಪ್ರಯೋಗಕ್ಕಿಳಿದಿದ್ದಾರೆ. ಇದರ ಫಲವಾಗಿ ಬದಲಾವಣೆಗೆ ಒಗ್ಗಿಕೊಂಡ ಖಾದಿ ಈಗ ಎಲ್ಲಾ ಮಾದರಿಗಳಲ್ಲಿ ಲಭ್ಯವಿವೆ ಎನ್ನುತ್ತಾರೆ ಸಾಮುದ್ರಿಕಾ ಬ್ರ್ಯಾಂಡ್‌ನ ವಸ್ತ್ರವಿನ್ಯಾಸಕಿ ಮೀನು ಶ್ರೀನಿವಾಸನ್‌.

ದೊಡ್ಡ ಟೆಕ್ಸ್‌ಟೈಲ್‌ ಇಂಡಸ್ಟ್ರಿಗಳು ಖಾದಿ ಉಡುಪುಗಳನ್ನು ಪ್ರೋತ್ಸಾಹಿಸುತ್ತಿವೆ. ರೈಸಿನ್‌ ಸೇರಿದಂತೆ ಅನೇಕ ಬ್ರಾಂಡ್ ಉಡುಪು ಕಂಪನಿಗಳು ಮಹಿಳೆಯರಿಗಾಗಿ ಖಾದಿ ಶಾರ್ಟ್‌ ಟಾಪ್‌, ಸಿಗರೇಟ್‌ ಪ್ಯಾಂಟ್‌,ಕುರ್ತಾ, ಸಲ್ವಾರ್‌, ಖಾದಿ ಕಾಟನ್‌ ಕುರ್ತಾ, ಸೀರೆ, ಲಂಗ ದಾವಣಿ,ಶಾರ್ಟ್‌ ಟಾಪ್‌, ಸ್ಕರ್ಟ್‌, ಶರ್ಟ್‌ಗಳು, ಪೈಜಾಮ, ಕೇಪ್ರಿ ಪ್ಯಾಂಟ್‌, ಶೇರವಾನಿ, ಪಲಾಜೋಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ.

ADVERTISEMENT

ಸಣ್ಣಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದವರಿಗೂ ಬೇಕಾದ ಟ್ರೆಂಡಿ ಫ್ಯಾಷನಬಲ್ ಉಡುಪುಗಳ ವಿನ್ಯಾಸ ಖಾದಿ ಸಂಗ್ರಹದಲ್ಲಿ ದೊರೆಯುತ್ತವೆ. ಖಾದಿ ಕಾಟನ್‌ ಸೀರೆ, ಖಾದಿ ಸಿಲ್ಕ್‌ ಸೀರೆಗಳನ್ನು ಕೋರಲ್‌ ಬ್ಲೌಸ್‌, ಫುಲ್‌ ನೆಕ್ಡ್‌ ಬ್ಲೌಸ್‌ ಜೊತೆಗೆ ಉಡುವುದು ಈಗಿನ ಫ್ಯಾಷನ್‌ ಎನ್ನುತ್ತಾರೆ ಮೀನು.

ಫ್ಯಾಷನ್‌ ಸಂಬಂಧಿ ಇಂಡಸ್ಟ್ರಿಗಳಿಂದ ಮಾಲಿನ್ಯವೇ ಅಧಿಕ. ಆದರೆ ಸಾವಯವ ಬಣ್ಣಗಳಿಂದ ತಯಾರಾಗಿರುವ ಈ ಖಾದಿ ಬಟ್ಟೆಗಳು ಚರ್ಮಕ್ಕೂ ಹಿತಕಾರಿ ಮತ್ತು ಪರಿಸರ ಸ್ನೇಹಿ ಕೂಡ ಹೌದು.

ಚಳಿ, ಬೇಸಿಗೆ ಕಾಲ ಎರಡರಲ್ಲೂ ಖಾದಿ ಬಟ್ಟೆಗಳನ್ನು ತೊಡಲು ಆರಾಮ. ಪಾರ್ಟಿ, ಗೆಟ್‌ಟುಗೆದರ್‌ನಂತಹ ಕಾರ್ಯಕ್ರಮ ಗಳಿಗೆ ಖಾದಿ ಶರ್ಟ್ಸ್‌, ಗೌನ್‌ಗಳಿಗೆ ಹೆಚ್ಚು ಬೇಡಿಕೆಯಿದೆ. ನಾವು ಖಾದಿ ಗೌನ್‌ಗೆ ಕಾಂಚೀಪುರಂ ಬಾರ್ಡರ್‌ನ ಗೌನ್‌ ವಿನ್ಯಾಸ ಮಾಡಿರುವುದು ಹೆಚ್ಚು ಜನಪ್ರಿಯವಾಗಿದೆ.
-ಮೀನು ಶರವಣನ್‌, ವಸ್ತ್ರವಿನ್ಯಾಸಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.