ADVERTISEMENT

ಪ್ರಜಾವಾಣಿ ಸಾಧಕಿಯರು: ‘ಸ್ವಚ್ಛ ವಾಹಿನಿ’ಯ ಸಾರಥಿ ಈ ಪಂಚಾಯಿತಿ ಅಧ್ಯಕ್ಷೆ

ಪ್ರಜಾವಾಣಿ ವಿಶೇಷ
Published 29 ಮಾರ್ಚ್ 2025, 9:33 IST
Last Updated 29 ಮಾರ್ಚ್ 2025, 9:33 IST

ದಕ್ಷಿಣ ಕನ್ನಡ (Dakshina Kannada) ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಪೆರುವಾಯಿ (Peruvai) ಪುಟ್ಟ ಗ್ರಾಮ. ಸುಮಾರು 3,000 ಜನಸಂಖ್ಯೆ ಇರುವ ಗ್ರಾಮದಲ್ಲಿ 600 ಮನೆಗಳು ಇವೆ. ಈ ಗ್ರಾಮದಲ್ಲಿ ಸ್ವಚ್ಛತೆಯ ಅರಿವಿನ ತೇರನ್ನು ಎಳೆದವರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಫೀಸಾ ಪೆರುವಾಯಿ (Nafisa Peruvai) . ‘ಸ್ವಚ್ಛತೆ ನಮ್ಮ ಕರ್ತವ್ಯವಲ್ಲವೇ? ಕಸದ ಗಾಡಿ (Swachavahini) ಓಡಿಸಿದರೆ ತಪ್ಪೇನಿದೆ? ಎಂಬ ಪ್ರಶ್ನೆಗಳನ್ನು ತಮಗೆ ತಾವೇ ಕೇಳಿಕೊಂಡ ನಫೀಸಾ, ಈ ಎಲ್ಲದಕ್ಕೂ ಸಾಧನೆಯೇ ಉತ್ತರವಾಗಬೇಕೆಂದು ನಿಶ್ಚಯಿಸಿ, ಕಸದ ಗಾಡಿಯ ಸಾರಥ್ಯ ವಹಿಸಿಕೊಂಡರು. ಕೊಂಕು ಮಾತನಾಡಿದವರೇ ಕೊಂಡಾಡುವಂತೆ ಮಾಡಿದ ನಫೀಸಾರವರ ಸ್ಫೂರ್ತಿದಾಯಕ ಕಥನ (Inspiring Story) ಈ ವಿಡಿಯೊದಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.