ADVERTISEMENT

Promise Day 2022: ಪ್ರೇಮಿಗಳ ಪಾಲಿಗೆ ‘ಪ್ರಾಮಿಸ್ ಡೇ’ ಯಾಕಿಷ್ಟು ಮಹತ್ವ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಫೆಬ್ರುವರಿ 2022, 5:29 IST
Last Updated 11 ಫೆಬ್ರುವರಿ 2022, 5:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪ್ರೇಮಿಗಳ ವಾರದ ಐದನೇ ದಿನ ಅಂದರೆ ಫೆಬ್ರುವರಿ 11ರಂದು ‘ಪ್ರಾಮಿಸ್ ಡೇ’ (ಭರವಸೆಯ ದಿನ) ಎಂದು ಆಚರಿಸಲಾಗುತ್ತದೆ. ಈ ದಿನ ಪ್ರೇಮಿಗಳು ಮತ್ತು ದಂಪತಿಗಳು ತಮ್ಮ ಸಂಬಂಧ ಹಾಗೂ ಪ್ರೀತಿಯ ಬಗ್ಗೆ ಭರವಸೆಯನ್ನು ನೀಡುವುದು ವಿಶೇಷ.

ಪ್ರೀತಿ, ಬಾಂಧವ್ಯ ಮತ್ತು ಸಂಬಂಧವನ್ನು ಸಂಭ್ರಮಿಸಲು ನಡೆಸುವ ಹಬ್ಬ ಅಥವಾ ಆಚರಣೆ‌ ವ್ಯಾಲೆಂಟೈನ್ಸ್ ಡೇ. 'ಪ್ರೇಮಿಗಳ ದಿನ' ಎಂದು ಕರೆದರೂ, ಜಗತ್ತಿನಾದ್ಯಂತ ಒಂದು ಇಡೀ ವಾರ ಆಚರಿಸುವ ಪ್ರೀತಿಸುವವರ ಹಬ್ಬವಾಗಿದೆ.

ಪ್ರತಿ ವರ್ಷ ಫೆಬ್ರುವರಿ 7ರಿಂದ 14ರವರೆಗೂ 'ವ್ಯಾಲೆಂಟೈನ್ಸ್ ವೀಕ್‌' ಎಂದು ಆಚರಿಸಲಾಗುತ್ತದೆ. ಪ್ರೇಮಿಗಳಿಗೆ ಈ ವಾರದ ಒಂದೊಂದು ದಿನವೂ ವಿಶೇಷ ದಿನ ಎಂದರೆ ತಪ್ಪಾಗುವುದಿಲ್ಲ. ಎಲ್ಲ ಮನಸ್ಸುಗಳಿಗೂ ಭರವಸೆ ತುಂಬುವ ದಿನ ‘ಪ್ರಾಮಿಸ್ ಡೇ’

ಪ್ರಾಮಿಸ್ (ಭರವಸೆ) ಎನ್ನುವುದು ಸಂಬಂಧಗಳಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ ಎಂದರೆ ತಪ್ಪಲ್ಲ. ಸಂಬಂಧಗಳು ಗಟ್ಟಿಯಾಗಿ ಉಳಿದುಕೊಳ್ಳಲು ಅಗತ್ಯವಾದ ಸಂಗತಿಯೇ ಭರವಸೆ. ನಾನು ನಿನ್ನೊಂದಿಗೆ ಸದಾ ಕಾಲ ಇರುತ್ತೇನೆ ಎಂಬ ಭರವಸೆಯು ಪ್ರೀತಿ ಮತ್ತು ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವುದು. ಈ ಹಿನ್ನೆಲೆಯಲ್ಲಿ ಪ್ರಾಮಿಸ್ ಡೇ ಹೆಚ್ಚು ವಿಶೇಷತೆ ಪಡೆದಿದೆ.

ADVERTISEMENT

ಈ ವಿಶೇಷ ದಿನದಲ್ಲಿ ಯಾವ ರೀತಿಯ ವಿಶೇಷ ವಾಕ್ಯಗಳನ್ನು ಹೇಳಿ ‘ಪ್ರಾಮಿಸ್‌ ಡೇ’ ಆಚರಿಸಬಹುದು ಎಂಬುದನ್ನು ತಿಳಿಯೋಣ ಬನ್ನಿ.

ನಿಮ್ಮ ಭರವಸೆಯ ಮಾತುಗಳು ಹೀಗಿರಲಿ...

* ನಾನು ನಿಮ್ಮೊಂದಿಗೆ ಇರುವಷ್ಟು ದಿನವೂ ಹೆಚ್ಚು ಪ್ರೀತಿಸುತ್ತೇನೆ. ನಿಮ್ಮ ಪ್ರತಿ ದಿನವನ್ನೂ ಸಂತೋಷದ ದಿನವನ್ನಾಗಿಸಲು ಪ್ರಯತ್ನಿಸುತ್ತೇನೆ. ನನ್ನ ಜೀವನದಲ್ಲಿ ಬಂದಿದ್ದಕ್ಕೆ ನಿಮಗೆ ಧನ್ಯವಾದಗಳು.

* ನಿಮಗೆ ಸಂಬಂಧಿಸಿದ ಎಲ್ಲಾ ಸಂಗತಿಗಳನ್ನು ಅರ್ಥಮಾಡಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ.

* ನಮ್ಮ ಸಂಬಂಧಗಳಲ್ಲಿ ಪ್ರಾಮಾಣಿಕನಾಗಿ ಇರುವ ಭರವಸೆ ನೀಡುತ್ತೇನೆ. ಎಂತಹ ಸಮಯ ಎದುರಾದರೂ ಸದಾ ನಿಮ್ಮೊಂದಿಗೆ ನಾನಿರುತ್ತೇನೆ.

* ವರ್ಷಗಳು ಕಳೆದಂತೆ ನಮ್ಮ ರೂಪ ಮತ್ತು ಯೌವನ ಬದಲಾಗುವುದು. ಅಂತಹ ಬದಲಾವಣೆಗಳು ಹೇಗೇ ಇರಲಿ ನಾನು ಸದಾ ನಿನ್ನನ್ನೇ ಪ್ರೀತಿಸುತ್ತೇನೆ ಎಂದು ಭರವಸೆ ನೀಡಬಹುದು.

* ಉತ್ತಮ ಭಾಂದವ್ಯಕ್ಕೆ ಬೇಕಿರುವುದು ಪ್ರೀತಿ, ಹೊಂದಾಣಿಕೆ. ಈ ಸಂಗತಿಗಳನ್ನು ನನ್ನ ಜೀವಿತಾವಧಿಯವರೆಗೂ ಕಾಪಾಡಿಕೊಂಡು ಬರುವೆ.

* ನಿಮ್ಮ ಎಲ್ಲಾ ಸಮಸ್ಯೆಗಳನ್ನು ನಾನು ಪರಿಹರಿಸುತ್ತೇನೆ ಎಂದು ನಾನು ಭರವಸೆ ನೀಡಲಾರೆ. ಆದರೆ, ನಾನು ನಿಮ್ಮೊಂದಿಗೆ ಯಾವಾಗಲೂ ಒಟ್ಟಿಗೆ ವ್ಯವಹರಿಸುತ್ತೇವೆ ಎಂದು ಭರವಸೆ ನೀಡುತ್ತೇನೆ.

* ನಮ್ಮಿಬ್ಬರ ಪ್ರೀತಿಯು ಸದಾ ಕಾಲ ಉತ್ತಮವಾಗಿಡಲು ಪ್ರಯತ್ನಿಸುವೆ. ಜೊತೆಗೆ ನಿನ್ನ ಏಳಿಗೆಗಾಗಿ ಬೆನ್ನೆಲುಬಾಗಿ ನಿಲ್ಲುತ್ತೇನೆ.

ಹೀಗೆ ಅರ್ಥ ಗರ್ಭಿತ ಭರವಸೆಗಳನ್ನು ನಿಮ್ಮ ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.