ADVERTISEMENT

‘ಹಿಂದೂ ಹೃದಯ ಸಾಮ್ರಾಟ’ ಹ್ಯಾಷ್‌ಟ್ಯಾಗ್‌ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿದ್ದೇಕೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜೂನ್ 2021, 5:42 IST
Last Updated 5 ಜೂನ್ 2021, 5:42 IST
ಯೋಗಿ ಆದಿತ್ಯನಾಥ್‌ (ಸಂಗ್ರಹ ಚಿತ್ರ–ಎಎಫ್‌ಪಿ)
ಯೋಗಿ ಆದಿತ್ಯನಾಥ್‌ (ಸಂಗ್ರಹ ಚಿತ್ರ–ಎಎಫ್‌ಪಿ)   

ಬೆಂಗಳೂರು: ‘ಹಿಂದೂ ಹೃದಯ ಸಾಮ್ರಾಟ’ ಎಂಬ ಹ್ಯಾಷ್‌ಟ್ಯಾಗ್‌ಟ್ವಿಟರ್‌ನಲ್ಲಿ ಶನಿವಾರ ಬೆಳಗ್ಗೆ ಏಕಾಏಕಿ ಟ್ರೆಂಡ್‌ ಆಯಿತು.

ಸರಿಸುಮಾರು ಹತ್ತು ಸಾವಿರಕ್ಕೂ ಅಧಿಕ ಮಂದಿ‘ಹಿಂದೂ ಹೃದಯ ಸಾಮ್ರಾಟ’ ಟ್ಯಾಗ್‌ ಬಳಸಿ ಟ್ವೀಟ್‌ ಮಾಡಿದ್ದಾರೆ.

ಗಮನಿಸಬೇಕಾದ ಅಂಶವೆಂದರೆ ಈ ಟ್ಯಾಗ್‌ ಬಳಸಿ ಮಾಡಲಾಗಿದ್ದ ಟ್ವೀಟ್‌ಗಳೆಲ್ಲವೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನು ಸೂಚಿಸುತ್ತಿವೆ. ಬಹುತೇಕ ಟ್ವೀಟ್‌ಗಳಲ್ಲಿ ಯೋಗಿ ಅವರನ್ನು ‘ಹಿಂದೂ ಹೃದಯ ಸಾಮ್ರಾಟ‘ ಎಂದು ಕೊಂಡಾಡಲಾಗಿದೆ.

ADVERTISEMENT

ಜೂನ್‌ 5 ಯೋಗಿ ಆದಿತ್ಯನಾಥ್‌ ಅವರ ಜನ್ಮದಿನ. ಈ ಹಿನ್ನೆಲೆಯಲ್ಲಿ ಹಲವರು ಯೋಗಿ ಅವರಿಗೆ ಶುಭಾಶಯ ಕೋರಿದ್ದಾರೆ. ಈ ವೇಳೆ ‘ಹಿಂದೂ ಹೃದಯ ಸಾಮ್ರಾಟ’ ಎಂಬ ಹ್ಯಾಷ್‌ ಟ್ಯಾಗ್‌ ಅನ್ನು ಬಹುತೇಕರು ಬಳಸಿದ್ದಾರೆ. ಹೀಗಾಗಿ ಅದು ಟ್ರೆಂಡ್‌ ಆಗಿದೆ.

ಇದರ ಜೊತೆಗೆ, ‘ಯೋಗಿ ಆದಿತ್ಯನಾಥ್‌’, ‘ಉತ್ತರ ಪ್ರದೇಶ ಮುಖ್ಯಮಂತ್ರಿ’, ‘ಸಿಎಂ ಯೋಗಿ’, ‘ಯೋಗಿ ಸತತ ವಿಕಾಸ’, ‘ಯುಪಿ ಉದ್ಯೋಗ ದಿನ’ ಎಂಬ ಹ್ಯಾಷ್‌ ಟ್ಯಾಗ್‌ಗಳೂ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿವೆ.

ಜನ್ಮದಿನದ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್‌ ಅವರಿಗೆ ಗಣ್ಯರು ಶುಭಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.