ADVERTISEMENT

ಅಮೆರಿಕದಲ್ಲಿ ಆನಂದ್ ಮಹೀಂದ್ರಾ ಶ್ವಾನದಿಂದ ಕಲಿತ ಪಾಠವೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಆಗಸ್ಟ್ 2021, 6:39 IST
Last Updated 12 ಆಗಸ್ಟ್ 2021, 6:39 IST
ಚಿತ್ರ ಕೃಪೆ: ಆನಂದ್ ಮಹೀಂದ್ರಾ, ಟ್ವಿಟರ್
ಚಿತ್ರ ಕೃಪೆ: ಆನಂದ್ ಮಹೀಂದ್ರಾ, ಟ್ವಿಟರ್    

ನ್ಯೂಯಾರ್ಕ್: ಟ್ವಿಟರ್‌ನಲ್ಲಿ ಸಕ್ರಿಯರಾಗಿರುವ ಉದ್ಯಮಿ ಆನಂದ್ ಮಹೀಂದ್ರಾ, ಸದಾ ಆಸಕ್ತಿದಾಯಕ ಅಂಶಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.

ಸದ್ಯ ಅಮೆರಿಕ ಪ್ರವಾಸದಲ್ಲಿರುವ ಆನಂದ್ ಮಹೀಂದ್ರಾ, ನ್ಯೂಯಾರ್ಕ್ ಸಮೀಪದಲ್ಲಿ ಸ್ನೇಹಿತನ ಮನೆಯಲ್ಲಿ ಶ್ವಾನದಿಂದ ಕಲಿತಿರುವ ಪಾಠವನ್ನು ನೆಟ್ಟಿಗರ ಜೊತೆ ಹಂಚಿದ್ದಾರೆ.

ಮನೆಯೊಳಗೆ ಪ್ರವೇಶಿಸಲು ಯತ್ನಿಸುತ್ತಿರುವ ಶ್ವಾನದ ವಿಡಿಯೊವನ್ನು ಆನಂದ್ ಹಂಚಿದ್ದಾರೆ. ನೆನಪಿಡಿ ನಿರಂತರ ಪ್ರಯತ್ನವು ಫಲ ನೀಡಲಿದೆ. ಎಂದಿಗೂ ಪ್ರಯತ್ನವನ್ನು ಕೈಬಿಡದಿರಿ ಎಂಬ ಸಂದೇಶವನ್ನು ಆನಂದ್ ಮಹೀಂದ್ರಾ ಹಂಚಿದ್ದಾರೆ.

ಕೊನೆಗೂ ಮನೆಯೊಳಗೆ ಪ್ರವೇಶಿಸುವಲ್ಲಿ ಶ್ವಾನ ಯಶಸ್ವಿಯಾಗಿದೆ. ಇದಕ್ಕೂಮುನ್ನ ಆನಂದ್ ಮಹೀಂದ್ರಾ ವಿಡಿಯೊವನ್ನು ತೆಗೆದಿದ್ದರು.

ಆನಂದ್ ಮಹೀಂದ್ರಾ ಸ್ಫೂರ್ತಿದಾಯಕ ಸಂದೇಶವು ನೆಟ್ಟಿಗರ ಹೃದಯವನ್ನು ಗೆದ್ದಿದೆ. ಆಗಲೇ 135ಕ್ಕೂ ಹೆಚ್ಚು ರಿ ಟ್ವೀಟ್ ಮತ್ತು 3,000ಕ್ಕೂ ಹೆಚ್ಚು ಲೈಕ್ಸ್ ಗಳಿಸಿದೆ. ಅಲ್ಲದೆ ಹಲವಾರು ಟ್ವಿಟರ್ ಬಳಕೆದಾರರು ಕಮೆಂಟ್ಸ್ ಬಾಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.