ADVERTISEMENT

ಜಸ್ಟ್‌ ಮ್ಯೂಸಿಕ್‌–15 | ತಾಯಿ ಪ್ರೀತಿ ಗುರು ಕರುಣೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2021, 0:53 IST
Last Updated 3 ಏಪ್ರಿಲ್ 2021, 0:53 IST

ಪ್ರಖ್ಯಾತ ಸಿತಾರ್‌ ವಾದಕ, ಬಹುವಾದ್ಯ ಪಾರಂಗತ, ಸಂಗೀತ ಸಂಶೋಧಕ ಪಂಡಿತ್‌ ಅರಣ್ಯ ಕುಮಾರ್‌ ಅವರ ಹಿತಾನುಭವವಿದು. ಅರಣ್ಯ ಕುಮಾರ್‌ ಆಧ್ಯಾತ್ಮ, ಆದರ್ಶ ದಂಪತಿಯಾದ ಮಡ್ಡೆಪ್ಪ– ಸರಸ್ವತಿ ಅವರ ಪುತ್ರ. ಇಟಲಿಯಲ್ಲಿ ಹುಟ್ಟಿ, ಭಾರತೀಯ ಸಂಸ್ಕೃತಿಯನ್ನು ಒಪ್ಪಿ, ಅಪ್ಪಿ ಬಂದ ಸರಸ್ವತಿ ( ಮೂಲ ಹೆಸರು ಅಫೀಲಿಯಾ), ಸಾಧು– ಸಂತರ ಸೇವೆಯಲ್ಲೇ ತೃಪ್ತಿ ಕಂಡಿದ್ದ ಮಡ್ಡೆಪ್ಪ ಲೌಕಿಕ ಜೀವನಕ್ಕಿಂತ ಆಧ್ಯತ್ಮಿಕ ಜೀವನಕ್ಕೆ ಹೆಚ್ಚು ಆದ್ಯತೆ ಕೊಟ್ಟವರು. ಅವರಿಗೆ ಮೂರು ಮಕ್ಕಳು. ಮಗ ಅರಣ್ಯ ಕುಮಾರ್‌ ಈಶ ಸೇವೆಯಲ್ಲಿ ಸಾಧಕ. ಇನ್ನೊಬ್ಬ ಪುತ್ರ ಶ್ರವಣಕುಮಾರ್‌ ಭಾರತೀಯ ಸೇನೆಯಲ್ಲಿ ಯೋಧನಾಗಿ ಕರ್ತವ್ಯ ನಿರ್ವಹಿಸಿದ ದೇಶ ಸೇವಕ. ಕಿರಿಯ ಪುತ್ರಿ ದ್ರೌಪತಿ ಶಿಕ್ಷಕಿ.

ಒಮ್ಮೆ ಅರಣ್ಯ ಕುಮಾರ್‌ ಗುರು, ಸರೋದ್‌ ದಿಗ್ಗಜ ಪಂಡಿತ್‌ ರಾಜೀವ್‌ ತಾರಾನಾಥ್‌ ಅವರು ಊಟ ಮಾಡಿ ಕೈ ಒರೆಸಿಕೊಳ್ಳಲು ಟಿಶ್ಯು ಪೇಪರ್‌ ಹುಡುಕುವಾಗ ಸರಸ್ವತಿ ಅವರು ತಮ್ಮ ಸೆರಗು ಕೊಡುತ್ತಾರೆ. ಸೆರಗಿನಿಂದ ಕೈ ಒರೆಸಿಕೊಂಡ ರಾಜೀವ್‌ ತಾರಾನಾಥ್‌ ಅವರು ಭಾವುಕರಾಗಿ ಕಣ್ತುಂಬಿಕೊಳ್ಳುತ್ತಾರೆ. ಭಾರತೀಯ ಸಂಸ್ಕೃತಿಯನ್ನು ಆರಾಧಿಸುವ ಸರಸ್ವತಿ ಅವರ ಮೇಲಿನ ಗೌರವ ನೂರ್ಮಡಿಗೊಳ್ಳುತ್ತದೆ. ಅಂತಹ ಸಂಸ್ಕಾರಯುತ ಕುಟುಂಬದ ಅರಣ್ಯ ಕುಮಾರ್‌ ಮೇಲೆ ಕರುಣೆ ಹುಟ್ಟುತ್ತದೆ. ತಾಯಿಯಿ ಪ್ರೀತಿಯ ಮೂಲಕ ಅರಣ್ಯ ಕುಮಾರ್‌ ಗುರು ಕರುಣೆಗೆ ಪಾತ್ರರಾಗುತ್ತಾರೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.