ADVERTISEMENT

ಆಗ್ನೇಯ ಚೀನಾದಲ್ಲಿ ಕೋವಿಡ್‌ ಪ್ರಕರಣ ಉಲ್ಬಣ

ಏಜೆನ್ಸೀಸ್
Published 14 ಸೆಪ್ಟೆಂಬರ್ 2021, 8:55 IST
Last Updated 14 ಸೆಪ್ಟೆಂಬರ್ 2021, 8:55 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೀಜಿಂಗ್‌: ಆಗ್ನೇಯ ಚೀನಾದ ಪುಟಿಯನ್‌ ನಗರದಲ್ಲಿ ಕೊರೊನಾದ ಡೆಲ್ಟಾ ರೂಪಾಂತರ ಕಾಣಿಸಿಕೊಂಡಿದ್ದು, ಮಂಗಳವಾರ ಒಂದೇ ದಿನದಲ್ಲಿ 59 ಹೊಸ ಪ್ರಕರಣಗಳು ದೃಢಪಟ್ಟಿವೆ.

ಬಂದರು ನಗರ ಕ್ಸಿಯಾಮೆನ್‌ನಲ್ಲಿ ಎರಡು ದಿನಗಳಿಂದ 33 ಪ್ರಕರಣಗಳು ದೃಢಪಟ್ಟಿದ್ದ ಬೆನ್ನಲ್ಲೇ ಪುಟಿಯನ್‌ನಲ್ಲಿ ಈ ಕೋವಿಡ್‌ ಪ್ರಕರಣಗಳು ವರದಿಯಾಗಿವೆ.

ಕ್ಸಿಯಾಮೆನ್‌ ನಗರದಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ಮನರಂಜನಾ ತಾಣಗಳು, ಫಿಟ್ನೆಸ್ ಕೇಂದ್ರಗಳನ್ನು ಬಂದ್ ಮಾಡಲಾಗಿದೆ. ಮುಂದೆ ಬರುವಂತಹ ಎಲ್ಲ ಹಬ್ಬಗಳನ್ನು ರದ್ದುಗೊಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.