ADVERTISEMENT

ಉದ್ಯಮಿ ದಿವಂಗತ ಸಿದ್ಧಾರ್ಥ ಜೀವನಗಾಥೆ: ತೆರೆ ಮೇಲೆ ಬರಲಿದೆ ‘ಕಾಫಿ ಕಿಂಗ್‌’

​ಪ್ರಜಾವಾಣಿ ವಾರ್ತೆ
Published 18 ಜೂನ್ 2022, 7:15 IST
Last Updated 18 ಜೂನ್ 2022, 7:15 IST
ಕಾಫಿ ಕಿಂಗ್‌ ಪ್ರಕಟಣೆ
ಕಾಫಿ ಕಿಂಗ್‌ ಪ್ರಕಟಣೆ   

ಉದ್ಯಮಿ, ಕೆಫೆ ಕಾಫಿಡೇ ಸಂಸ್ಥಾಪಕ ದಿವಂಗತ ವಿ.ಜಿ. ಸಿದ್ಧಾರ್ಥ ಅವರ ಜೀವನಗಾಥೆ ಆಧರಿಸಿದ ಚಿತ್ರ ತೆರೆಗೆ ಬರಲಿದೆ.

ಟಿ– ಸಿರೀಸ್‌ ಮತ್ತು ಅಲ್‌ಮೈಟಿ ಮೋಷನ್‌ ಪಿಕ್ಚರ್ಸ್‌ ಕಂಪನಿಗಳು ಕರ್ಮ ಮೀಡಿಯಾ ಎಂಟರ್‌ಟೈನ್‌ಮೆಂಟ್‌ ಸಹಯೋಗದಲ್ಲಿ ಈ ಚಿತ್ರ ನಿರ್ಮಿಸುತ್ತಿವೆ.

ತನಿಖಾ ಪತ್ರಕರ್ತರಾದ ರುಕ್ಮಿಣಿ ರಾವ್‌ ಮತ್ತು ಪ್ರೋಸೆನ್‌ಜಿತ್‌ ದತ್ತಾ ಅವರು ಬರೆದ ‘ಕಾಫಿ ಕಿಂಗ್‌– ದಿ ಸ್ವಿಫ್ಟ್‌ ರೈಸ್‌ ಆ್ಯಂಡ್‌ ಸಡನ್‌ ಡೆತ್‌ ಆಫ್‌ ಕೆಫೆ ಕಾಫಿ ಡೇ ಫೌಂಡರ್‌ ವಿ.ಜಿ. ಸಿದ್ಧಾರ್ಥ್‌’ ಕೃತಿ ಆಧರಿಸಿ ಈ ಚಿತ್ರ ತೆರೆಗೆ ಬರಲಿದೆ. ಕೃತಿಯ ಆಡಿಯೋ ಹಕ್ಕುಗಳನ್ನು ಚಿತ್ರ ನಿರ್ಮಾಣ ಸಂಸ್ಥೆಗಳು ಈಗಾಗಲೇ ಪಡೆದಿವೆ.

ADVERTISEMENT

1996ರಲ್ಲಿ ಕೆಫೆ ಕಾಫಿ ಡೇ ಪರಿಚಯಿಸಿದ ಸಿದ್ಧಾರ್ಥ್‌ ವಿವಿಧ ರಾಷ್ಟ್ರಗಳಿಗೆ ಕಾಫಿಯ ಪರಿಮಳ ಹಬ್ಬಿಸಿದ್ದರು.ವಿಯೆನ್ನಾ, ಮಲೇಷ್ಯಾ, ಸಿಂಗಪುರ, ಝಕೊಸ್ಲೊವಾಕಿಯ ಸಹಿತ 7 ರಾಷ್ಟ್ರಗಳಲ್ಲಿ 1,800ಕ್ಕೂ ಹೆಚ್ಚು ಕಾಫಿ ಡೇ ಕೆಫೆಗಳಿವೆ. 2019ರ ಜುಲೈ 29ರಂದು ಸಿದ್ಧಾರ್ಥ್‌ ಅವರು ಮಂಗಳೂರು ಸಮೀಪ ನೇತ್ರಾವತಿ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.