ADVERTISEMENT

ಜನ ಚದುರಿಸಲು ಲಾಠಿ ಹಿಡಿದ ಪುರಸಭೆ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 3:44 IST
Last Updated 30 ಏಪ್ರಿಲ್ 2021, 3:44 IST
ಚಿಟಗುಪ್ಪ ಪಟ್ಟಣದಲ್ಲಿ ಗುರುವಾರ ಅಂಗಡಿಗಳು ಮುಚ್ಚಿಸಿ ನಾಗರಿಕರನ್ನು ಚದುರಿಸಲು ಪುರಸಭೆ ಸಿಬ್ಬಂದಿ ಲಾಠಿ ಹಿಡಿದರು
ಚಿಟಗುಪ್ಪ ಪಟ್ಟಣದಲ್ಲಿ ಗುರುವಾರ ಅಂಗಡಿಗಳು ಮುಚ್ಚಿಸಿ ನಾಗರಿಕರನ್ನು ಚದುರಿಸಲು ಪುರಸಭೆ ಸಿಬ್ಬಂದಿ ಲಾಠಿ ಹಿಡಿದರು   

ಚಿಟಗುಪ್ಪ: ಕೊರೊನಾ ಸೋಂಕು ಹರಡುವಿಕೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಘೋಷಿಸಿರುವ 14 ದಿನಗಳ ಲಾಕ್‌ಡೌನ್‌ನ ಎರಡನೇ ದಿನವಾದ ಗುರುವಾರ ಪಟ್ಟಣದಲ್ಲಿ ಅಂಗಡಿಗಳು ಮುಚ್ಚಿ ನಾಗರಿಕರಿಗೆ ಚದುರಿಸಲು ಪುರಸಭೆ ಸಿಬ್ಬಂದಿ ಹರಸಾಹಸ ಪಡಬೇಕಾಯಿತು.

ಬೆಳಿಗ್ಗೆ ಆರು ಗಂಟೆಯಿಂದ 10ರ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಸಿದ್ದರಿಂದ ನಾಗರಿಕರು ಪಟ್ಟಣದ ಗಾಂಧಿ ವೃತ್ತದಿಂದ ಬಸವರಾಜ್‌ ಚೌಕ್‌ವರೆಗೂ ಎಲ್ಲ ಅಂಗಡಿಗಳ ಮುಂದೆ ಕಿಕ್ಕಿರಿದು ಜಮಾಯಿಸಿರುವುದು ಕಂಡುಬಂತು.

ಗಂಟೆ ಹತ್ತಾಗುತ್ತಿದ್ದಂತೆ ವ್ಯಾಪಾರ ಬಂದ್ ಮಾಡುವಂತೆ ಪೊಲೀಸರು ಹಾಗೂ ಪುರಸಭೆ ಅಧಿಕಾರಿಗಳು ಸೂಚಿಸಿ ಜನರನ್ನು ಮನೆಗಳಿಗೆ ಹೋಗುವಂತೆ ಹಲವು ಬಾರಿ ಮನವಿ ಮಾಡಿದರು.

ADVERTISEMENT

ಪೊಲೀಸರ ಪುರಸಭೆಯವರ ಮನವಿಗೆ ಜನ ಸ್ಪಂದಿಸದಿರುವಾಗ ಪುರಸಭೆಯ ಸಿಬ್ಬಂದಿ ಅಶೋಕ, ಚಿದಾ ನಂದ ಇತರರು ಲಾಠಿ ಹಿಡಿದು ಜನರನ್ನು ಚದುರಿಸಿ, ಅಂಗಡಿಗಳು ಮುಚ್ಚಿಸಿದರು.

ಪುರಸಭೆ ಮುಖ್ಯಾಧಿಕಾರಿ ಶ್ರೀಪಾದ್‌ ರಾಜಪುರೋಹಿತ, ವೈದ್ಯಾಧಿಕಾರಿ ಡಾ.ಕೀರಣ ಪಾಟೀಲ, ತಾಲ್ಲೂಕು ವೈದ್ಯಾಧಿಕಾರಿ ಅಶೋಕ ಪಾಟೀಲ, ರವಿ ಸ್ವಾಮಿ ಇತರರು ಪಟ್ಟಣದ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿಯ ಕೊವೀಡ್‌-19 ರೋಗಿಗಳ ಆರೈಕೆ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.