ADVERTISEMENT

ಮಂಗಳೂರು: ಮೂರು ವಿಮಾನಗಳಲ್ಲಿ 303 ಮಂದಿ ತವರಿಗೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2020, 16:43 IST
Last Updated 4 ಜುಲೈ 2020, 16:43 IST
ಮಂಗಳೂರು ವಿಮಾನನಿಲ್ದಾಣ
ಮಂಗಳೂರು ವಿಮಾನನಿಲ್ದಾಣ   

ಮಂಗಳೂರು: ಕೋವಿಡ್‌ ಲಾಕ್‌ಡೌನ್‌ನಿಂದ ಹಾಗೂ ಉದ್ಯೋಗ ಕಳೆದುಕೊಂಡು ವಿದೇಶಗಳಲ್ಲಿ ಕೆಲಸ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ 303 ಜನರು ಶನಿವಾರ ಮೂರು ವಿಮಾನಗಳಲ್ಲಿ ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

ಕುವೈಟ್‌ ಕೇರಳ ಮುಸ್ಲಿಂ ಅಸೋಸಿಯೇಷನ್‌ನ ಕರ್ನಾಟಕ ಘಟಕ ನಿಗದಿ ಮಾಡಿದ್ದ ಬಾಡಿಗೆ ವಿಮಾನದಲ್ಲಿ ಎಂಟು ಮಕ್ಕಳು ಸೇರಿದಂತೆ 173 ಮಂದಿ ಶನಿವಾರ ರಾತ್ರಿ 9.30ಕ್ಕೆ ಮಂಗಳೂರಿಗೆ ಬಂದಿಳಿದರು. ದಮ್ಮಾಮ್‌ನಿಂದ ಮತ್ತೊಂದು ಬಾಡಿಗೆ ವಿಮಾನದಲ್ಲಿ 170 ಜನರು ಬಂದಿದ್ದಾರೆ. ವಂದೇ ಭಾರತ್‌ ಮಿಷನ್‌ ಅಡಿಯಲ್ಲಿ ದುಬೈನಿಂದ ಬಂದ ವಿಮಾನದಲ್ಲಿ 60 ಜನರು ಮಂಗಳೂರು ತಲುಪಿದ್ದಾರೆ.

‘ಮೂರು ವಿಮಾನಗಳಲ್ಲಿ ಬಂದಿರುವ 303 ಜನರನ್ನೂ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗುವುದು’ ಎಂದು ಪುತ್ತೂರು ಉಪ ವಿಭಾಗಾಧಿಕಾರಿ ಯತೀಶ್‌ ಉಳ್ಳಾಲ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.