ADVERTISEMENT

ಅಂತರರಾಷ್ಟ್ರೀಯ ಹುಲಿ ದಿನ: ನಮ್ಮ ಕೈಯಲ್ಲಿದೆ ವ್ಯಾಘ್ರನ ಉಳಿವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಜುಲೈ 2021, 5:46 IST
Last Updated 29 ಜುಲೈ 2021, 5:46 IST
ದಮ್ಮನಕಟ್ಟೆ ಸಫಾರಿ ಕೇಂದ್ರದ ಅಂತರಸಂತೆ ವನ್ಯಜೀವಿ ವಲಯ ವ್ಯಾಪ್ತಿಯ ಕೆರೆಯೊಂದರಲ್ಲಿ ತಾಯಿ ಹುಲಿಯು ತನ್ನ ಮೂರು ಮರಿಗಳೊಂದಿಗೆ ಸ್ವಚ್ಛಂದ ವಿಹಾರ ಮಾಡುತ್ತಿರುವುದು.  ಚಿತ್ರ : ಸತೀಶ್‌ ಬಿ.ಆರಾಧ್ಯ
ದಮ್ಮನಕಟ್ಟೆ ಸಫಾರಿ ಕೇಂದ್ರದ ಅಂತರಸಂತೆ ವನ್ಯಜೀವಿ ವಲಯ ವ್ಯಾಪ್ತಿಯ ಕೆರೆಯೊಂದರಲ್ಲಿ ತಾಯಿ ಹುಲಿಯು ತನ್ನ ಮೂರು ಮರಿಗಳೊಂದಿಗೆ ಸ್ವಚ್ಛಂದ ವಿಹಾರ ಮಾಡುತ್ತಿರುವುದು. ಚಿತ್ರ : ಸತೀಶ್‌ ಬಿ.ಆರಾಧ್ಯ   

ಬೆಂಗಳೂರು: ಪರಿಸರ ವ್ಯವಸ್ಥೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ಹುಲಿಯ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಜುಲೈ 29 ಅನ್ನು ಪ್ರತಿ ವರ್ಷ ಅಂತರರಾಷ್ಟ್ರೀಯ ಹುಲಿ ದಿನವನ್ನಾಗಿ ಆಚರಿಸಲಾಗುತ್ತದೆ.

ಆಹಾರ ಸರಪಣಿಯಲ್ಲೂ ಹುಲಿ ಅತ್ಯಂತ ಪ್ರಮುಖ ಸ್ಥಾನದಲ್ಲಿದೆ. ಆದರೆ ಪರಿಸರ ನಾಶ, ಹುಲಿಯ ಕಳ್ಳಬೇಟೆ, ಅಭಿವೃದ್ಧಿಯ ಹೆಸರಿನಲ್ಲಿ ನಡೆಸಲಾಗುವ ಕೆಲವೊಂದು ಕಾರ್ಯಗಳು ಹುಲಿ ಸಂತತಿ ಕ್ಷೀಣಿಸಲು ಕಾರಣವಾಗುತ್ತಿದೆ.

2010ರಲ್ಲಿ ಜುಲೈ 29ರಂದು ರಷ್ಯಾದ ಸೈಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಡೆದ ಹುಲಿ ಸಮಾವೇಶದಲ್ಲಿ ಜಗತ್ತಿನ ಬಹುತೇಕ ರಾಷ್ಟ್ರಗಳು ಹುಲಿ ಸಂರಕ್ಷಣೆಗೆ ಪಣ ತೊಟ್ಟು, ಒಪ್ಪಂದಕ್ಕೆ ಸಹಿ ಹಾಕಿದವು. ಅಂದಿನಿಂದ, ಈ ದಿನವನ್ನು ಪ್ರತಿ ವರ್ಷ ಜಾಗತಿಕವಾಗಿ ಅಂತರರಾಷ್ಟ್ರೀಯ ಹುಲಿ ದಿನವನ್ನಾಗಿ ಆಚರಿಸಲಾಗುತ್ತಿದೆ.

ADVERTISEMENT

ಹುಲಿ ಸಂರಕ್ಷಣೆ, ಸಂಖ್ಯೆ ವೃದ್ಧಿ, ಅವುಗಳ ಓಡಾಟ, ಆಹಾರಕ್ಕೆ ಪೂರಕ ವಾತಾವರಣ ಕಲ್ಪಿಸುವುದು ಮತ್ತು ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಹುಲಿ ರಕ್ಷಣೆಗೆ ಕ್ರಮ ಕೈಗೊಳ್ಳುವುದು ಅಂತರರಾಷ್ಟ್ರೀಯ ಹುಲಿ ದಿನಾಚರಣೆಯ ಪ್ರಮುಖ ಅಂಶವಾಗಿದೆ.

ಈ ವರ್ಷ ‘ಹುಲಿಗಳ ಉಳಿವು ನಮ್ಮ ಕೈಯಲ್ಲಿದೆ’ ಎನ್ನುವ ಘೋಷವಾಕ್ಯದೊಂದಿಗೆ ಅಂತರರಾಷ್ಟ್ರೀಯ ಹುಲಿ ದಿನ ಆಚರಿಸಲಾಗುತ್ತದೆ. ಜಾಗತಿಕ ಹುಲಿಗಳ ಸಂಖ್ಯೆಯ ಶೇ 70ರಷ್ಟು ನಮ್ಮ ದೇಶದಲ್ಲೇ ಇವೆ ಎನ್ನುವುದು ಹೆಮ್ಮೆಯ ವಿಚಾರವಾಗಿದೆ. ವರ್ಲ್ಡ್ ವೈಲ್ಡ್‌ಲೈಫ್ ಫಂಡ್ ಪ್ರಕಾರ ಜಾಗತಿಕವಾಗಿ 3,900 ಹುಲಿಗಳಷ್ಟೇ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.