ADVERTISEMENT

ಅಸ್ಸಾಂನ ಬರಾಕ್ ನದಿ ಕಣಿವೆಯಲ್ಲಿ ಮತ್ತೊಂದು ಅಭಯಾರಣ್ಯ: ವಿವಿಧ ಬಗೆಯ ಮಂಗಗಳ ತಾಣ

ಪಿಟಿಐ
Published 23 ಜುಲೈ 2022, 11:24 IST
Last Updated 23 ಜುಲೈ 2022, 11:24 IST
hoolock ಗಿಬ್ಬನ್‌ಗಳು
hoolock ಗಿಬ್ಬನ್‌ಗಳು   

ಸಿಲ್ಚಾರ್: ಅಸ್ಸಾಂನ ಪ್ರಮುಖ ಹಾಗೂ ಎರಡನೇ ಅತಿ ದೊಡ್ಡ ನದಿಯಾಗಿರುವ ಬರಾಕ್ ನದಿ ಕಣಿವೆ ಪ್ರದೇಶದಲ್ಲಿ ಮತ್ತೊಂದು ವನ್ಯಜೀವಿ ಅಭಯಾರಣ್ಯ ಶೀಘ್ರದಲ್ಲೇ ಘೋಷಣೆಯಾಗಲಿದೆ.

ಬರಾಕ್‌ ನದಿ ಕಣಿವೆಯ ‘ಬರಾಕ್ ಭುಬನ್ ವನ್ಯಜೀವಿ ಅಭಯಾರಣ್ಯ’ದ ರಚನೆಯ ಪ್ರಸ್ತಾವನೆಗೆ ಅಸ್ಸಾಂ ರಾಜ್ಯಪಾಲರಾದ ಜಗದೀಶ್ ಮುಖಿ ಅವರು ಹಸಿರು ನಿಶಾನೆ ತೋರಿಸಿದ್ದಾರೆ.

ನೂರಾರು ಬಗೆ ಜಾತಿಯ ಪ್ರಾಣಿ–ಪಕ್ಷಿಗಳನ್ನು ಹಾಗೂ ಅಪರೂಪದ ವನ್ಯಜೀವಿಗಳನ್ನುಬರಾಕ್ ಭುಬನ್ ಕಾಡು ಹೊಂದಿದೆ. ಉದ್ದೇಶಿತಬರಾಕ್ ಭುಬನ್ ವನ್ಯಜೀವಿ ಅಭಯಾರಣ್ಯ 320 ಚದರ ಕಿಮೀ ಇದ್ದು, ಕಾಳಿಂಗ ಸರ್ಪದ ನೈಸರ್ಗಿಕ ತಾಣ ಕೂಡ ಆಗಿದೆ.

ADVERTISEMENT

ಅಸ್ಸಾಂನ ಈಬರಾಕ್ ನದಿ ಕಣಿವೆ ಪ್ರದೇಶದಲ್ಲಿ ಭಾರತದಲ್ಲಿ ಅಪರೂಪ ಎನ್ನಲಾದ ವಿವಿಧ ಜಾತಿಯ ಚಿತ್ರ–ವಿಚಿತ್ರ ಮಂಗಗಳು, ಕಾಡುಪಾಪಗಳು ವಾಸಿಸುತ್ತವೆ.

ಸಿಲ್ಚಾರ್ ಕ್ಷೇತ್ರದ ಬಿಜೆಪಿ ಸಂಸದ ರಾಜದೀಪ್ ರಾಯ್ ಅವರು ಈ ಪ್ರದೇಶದಲ್ಲಿ ಮತ್ತೊಂದು ಅಭಯಾರಣ್ಯ ಘೋಷಣೆ ಮಾಡಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಕಳೆದ ಒಂದು ವರ್ಷದಿಂದ ಅಸ್ಸಾಂ ಸರ್ಕಾರದ ಮೇಲೆ ಒತ್ತಡ ಹಾಕಿದ್ದರು.

ಈ ಕುರಿತು ಮಾತನಾಡಿರುವರಾಯ್ ಅವರು, ಅಸ್ಸಾಂ ಸರ್ಕಾರ ಅತ್ಯುತ್ತಮ ನಿರ್ಧಾರ ತೆಗೆದುಕೊಂಡಿದೆ. ಮುಂಬರುವ ಐದಾರು ತಿಂಗಳುಗಳಲ್ಲಿ ಕೇಂದ್ರಬರಾಕ್ ಭುಬನ್ ವನ್ಯಜೀವಿ ಅಭಯಾರಣ್ಯವನ್ನು ಘೋಷಣೆ ಮಾಡುತ್ತದೆ ಎನ್ನುವ ವಿಶ್ವಾಸವಿದೆ. ಇದರಿಂದ ಅಭಯಾರಣ್ಯವನ್ನು ಮತ್ತಷ್ಟು ಅಭಿವೃದ್ಧಿ ಮಾಡಬಹುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.