ADVERTISEMENT

ಜೆಇಇ (ಮೇನ್) ನಾಲ್ಕನೇ ಎಡಿಷನ್ ಪರೀಕ್ಷೆ ಮುಂದೂಡಿಕೆ: ಶಿಕ್ಷಣ ಸಚಿವ

ಪಿಟಿಐ
Published 15 ಜುಲೈ 2021, 14:37 IST
Last Updated 15 ಜುಲೈ 2021, 14:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಎಂಜಿನಿಯರ್ ಪ್ರವೇಶಕ್ಕಾಗಿ ನಡೆಸುವ ಜೆಇಇ (ಮೇನ್) ನಾಲ್ಕನೇ ಎಡಿಷನ್ ಪರೀಕ್ಷೆಯು ಆಗಸ್ಟ್ 26ರಿಂದ ಸೆಪ್ಟೆಂಬರ್ 2ರ ವರೆಗೆ ನಡೆಯಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಗುರುವಾರ ತಿಳಿಸಿದ್ದಾರೆ.

ಇದರೊಂದಿಗೆ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಿದ್ಧತೆ ನಡೆಸಲು ಒಂದು ತಿಂಗಳ ಹೆಚ್ಚುವರಿ ಅವಧಿ ಸಿಗಲಿದೆ.

ಈ ಮೊದಲು ಜೆಇಇ (ಮೇನ್) ನಾಲ್ಕನೇ ಆವೃತ್ತಿಯ ಪರೀಕ್ಷೆ ಜುಲೈ 27ರಿಂದ ಆಗಸ್ಟ್ 2ರ ವರೆಗೆ ನಿಗದಿಯಾಗಿತ್ತು. ಇದನ್ನೀಗ ಮುಂದೂಡಲಾಗಿದೆ.

ವಿದ್ಯಾರ್ಥಿಗಳಿಂದ ನಿರಂತರ ಕೋರಿಕೆಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಅಭ್ಯರ್ಥಿಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಜೆಇಇ (ಮೇನ್) ಮೂರನೇ ಹಾಗೂ ನಾಲ್ಕನೇ ಸೆಷನ್ನಡುವೆ ಒಂದು ತಿಂಗಳ ಅಂತರ ಕಾಪಾಡಿಕೊಳ್ಳಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (ಎನ್‌ಟಿಎ) ಸೂಚಿಸಲಾಗಿದೆ.

ಜೆಇಇ (ಮೇನ್) ನಾಲ್ಕನೇ ಎಡಿಷನ್ ಪರೀಕ್ಷೆಗಳು ಆಗಸ್ಟ್ 26, 27, 31 ಮತ್ತು ಸೆಪ್ಟೆಂಬರ್ 2ರಂದು ನಡೆಯಲಿದೆ ಎಂದು ಧರ್ಮೇಂದ್ರ ಪ್ರಧಾನ್ ಟ್ವೀಟ್ ಮಾಡಿದ್ದಾರೆ.

ಒಟ್ಟು 7.32 ಲಕ್ಷ ವಿದ್ಯಾರ್ಥಿಗಳು ಈಗಾಗಲೇ ಹೆಸರು ನೋಂದಾಯಿಸಿಕೊಂಡಿದ್ದಾರೆ. ನೋಂದಣಿ ಪ್ರಕ್ರಿಯೆ ಈಗಲೂ ಜಾರಿಯಲ್ಲಿದ್ದು, ಜುಲೈ 20ರ ವರೆಗೆ ವಿಸ್ತರಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.