ADVERTISEMENT

ಕಾಶ್ಮೀರದ ಪರಿಸ್ಥಿತಿ ದೆಹಲಿಗೂ ಬಂದೀತು ಜೋಕೆ: ಬಿಜೆಪಿ ಸಂಸದ ಪರ್ವೇಶ್ ವರ್ಮಾ

ಏಜೆನ್ಸೀಸ್
Published 30 ಜನವರಿ 2020, 9:54 IST
Last Updated 30 ಜನವರಿ 2020, 9:54 IST
ಪರ್ವೇಶ್ ವರ್ಮಾ
ಪರ್ವೇಶ್ ವರ್ಮಾ   

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‌ಆರ್‌ಸಿ ವಿರುದ್ಧಶಾಹೀನ್‌ಬಾಗ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಇದೇ ರೀತಿ ಮುಂದುವರಿದರೆ ದೆಹಲಿಯೂಕಾಶ್ಮೀರದಲ್ಲಿರುವಂಥ ಪರಿಸ್ಥಿತಿ ಅನುಭವಿಸಬೇಕಾಗುತ್ತದೆ ಎಂದು ಪಶ್ಚಿಮ ದೆಹಲಿಯ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಹೇಳಿದ್ದಾರೆ.

ದೆಹಲಿ ಸರ್ಕಾರ ಶಾಹೀನ್‌ಬಾಗ್ ಪ್ರತಿಭಟನಕಾರರಿಗೆ ಬೆಂಬಲ ಸೂಚಿಸುತ್ತಿದೆ. ಈ ಬಗ್ಗೆ ನೀವೇನು ಹೇಳುತ್ತೀರಿ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ವರ್ಮಾ, ಅರವಿಂದ ಕೇಜ್ರಿವಾಲ್ ಶಾಹೀನ್‌ಬಾಗ್ ಪ್ರತಿಭಟನಕಾರರಿಗೆ ಬೆಂಬಲ ನೀಡುತ್ತಿದ್ದಾರೆ. ದೆಹಲಿಯ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯ ಕೂಡಾ ಇದೇ ರೀತಿ ಹೇಳಿದ್ದರು.

ಇಂಥದ್ದೇ ಒಂದು ಕಿಚ್ಚು ಹಲವು ವರ್ಷಗಳ ಹಿಂದೆ ಕಾಶ್ಮೀರದಲ್ಲಿಯೂ ಹಬ್ಬಿತ್ತು ಎಂದು ದೆಹಲಿಯ ಜನರಿಗೆ ಗೊತ್ತಿದೆ. ಅಲ್ಲಿದ್ದ ಕಾಶ್ಮೀರಿ ಪಂಡಿತರ ಹೆಣ್ಮಕ್ಕಳ ಮತ್ತು ಸಹೋದರಿಯರ ಮೇಲೆ ಅತ್ಯಾಚಾರ ನಡೆದಿತ್ತು. ಆಮೇಲೆ ಅದೇ ರೀತಿಯ ಘಟನೆ ಉತ್ತರಪ್ರದೇಶದಲ್ಲಿ, ಹೈದರಾಬಾದ್‌ನಲ್ಲಿ ಕೇರಳದಲ್ಲಿಯೂ ನಡೆದಿತ್ತು. ಇಂದು ದೆಹಲಿಯಲ್ಲಿ ನಡೆಯುತ್ತಿದೆ.

ADVERTISEMENT

ಅಲ್ಲಿ ಲಕ್ಷಗಟ್ಟಲೆ ಜನ ಸೇರಿದ್ದಾರೆ. ಅಲ್ಲಿನ ಕಿಚ್ಚು ಯಾವಾಗ ಬೇಕಾದರೂ ದೆಹಲಿಯ ಮನೆಯೊಳಗೆ ನುಗ್ಗಬಹುದು. ನಮ್ಮ ಮನೆಗೆ ನುಗ್ಗಬಹುದು. ಹಾಗಾಗಿ ದೆಹಲಿಯವರು ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಈ ಜನರು ನಿಮ್ಮ ಮನೆಗೆ ನುಗ್ಗಿ ನಿಮ್ಮ ಹೆಣ್ಣು ಮಕ್ಕಳು, ಸಹೋದರಿಯರನ್ನು ಅಪಹರಿಸಿ ಅವರ ಮೇಲೆಅತ್ಯಾಚಾರ ಮಾಡಬಹುದು, ಕೊಲ್ಲಬಹುದು.

ಇವತ್ತು ನಿಮ್ಮಲ್ಲಿಸಮಯವಿದೆ. ನಾಳೆ ನಿಮ್ಮನ್ನು ರಕ್ಷಿಸಲು ಮೋದಿ ಬರುವುದಿಲ್ಲ, ಅಮಿತ್ ಶಾ ಬರುವುದಿಲ್ಲ. ಇವತ್ತು ದೆಹಲಿಯ ಜನರು ಎಚ್ಚೆತ್ತರೆ ಒಳ್ಳೆಯದು. ಮೋದಿಯವರು ದೇಶದ ಪ್ರಧಾನಿಯಾಗಿರುವವರೆಗೆ ಇಲ್ಲಿನ ಜನರು ಸುರಕ್ಷಿತರಾಗಿರುತ್ತಾರೆ. ಬೇರೆ ಯಾರಾದರೂ ಪ್ರಧಾನಿಯಾದರೆ ದೇಶದ ಜನರು ಸುರಕ್ಷಿತರಾಗಿರಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.