ADVERTISEMENT

12ರಿಂದ ಬೆಂಗಳೂರು ಬೀಜ ಮೇಳ

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 19:45 IST
Last Updated 9 ಜುಲೈ 2019, 19:45 IST
ಬೀಜಮೇಳ
ಬೀಜಮೇಳ   

ಜನರಿಗೆ ಮತ್ತೆ ನಾಟಿ ತರಕಾರಿ ರುಚಿ ತೋರಿಸಲು ರೈತರ ಬೀಜಕಂಪನಿ ‘ಸಹಜ ಸೀಡ್ಸ್’ ಹಾಗೂಗ್ರಾಹಕರಲ್ಲಿ ಶುದ್ಧ ಆಹಾರದ ಬಗ್ಗೆ ಅರಿವು ಮೂಡಿಸುತ್ತಿರುವ ‘ಗ್ರೀನ್ ಪಾತ್’ ಸಹಯೋಗದಲ್ಲಿಶುಕ್ರವಾರದಿಂದ ಭಾನುವಾರದವರೆಗೆ (ಜುಲೈ 12ರಿಂದ 14) ‘ಬೆಂಗಳೂರು ಬೀಜ ಮೇಳ’ ಆಯೋಜಿಸಲಾಗಿದೆ.

ಮುಂಗಾರು ಸಮಯದಲ್ಲಿ ಆಯೋಜಿಸಿರುವ ಮೂರು ದಿನಗಳ ಮೇಳದಲ್ಲಿ ವಿವಿಧ ಬಗೆಯ ದೇಸಿ ತರಕಾರಿ ಬೀಜಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.ಮೇಳದ ಆರಂಭದ ದಿನ ಕೈತೋಟ ಹಾಗೂ ಸಾವಯವ ಬೀಜೋತ್ಪಾದನೆ ತಂತ್ರಗಳ ಕುರಿತು ಸಾವಯವ ಕೃಷಿಕಕಾಂತರಾಜು ಸಲಹೆನೀಡಲಿದ್ದಾರೆ.

ಮೇಳದಲ್ಲಿ ಏನೇನಿದೆ?

ADVERTISEMENT

- ರಾಸಾಯನಿಕ ಮುಕ್ತ ಹಣ್ಣು, ತರಕಾರಿಗಳು
- ಅಪರೂಪದ ಗೆಡ್ಡೆ-ಗೆಣಸುಗಳು
- ಕೈತೋಟಗಳಿಗೆ ಮಾರ್ಗದರ್ಶನ
- ಸಂಗಾತಿ ಬೆಳೆಗಳ ಮಾಹಿತಿ
- ಬೀಜೋತ್ಪಾದನೆಯ ತಂತ್ರಗಳು
- ನಾಟಿ ತಳಿಗಳ ತರಕಾರಿ ಬೀಜಗಳು
- ತಾಜಾ ತರಕಾರಿ
- ಸಾವಯವ ಉತ್ಪನ್ನ

ಸ್ಥಳ: ‘ಗ್ರೀನ್ ಪಾತ್’, ಮಂತ್ರಿ ಮಾಲ್
ಮೆಟ್ರೋ ಮುಂಭಾಗ, ರಾಜೀವಗಾಂಧಿ ವೃತ್ತ, ಮಲ್ಲೇಶ್ವರ
ದಿನಾಂಕ: 12ರಿಂದ 14ನೇ ಜುಲೈ
ಸಮಯ: ಬೆಳಿಗ್ಗೆ 10.30 ರಿಂದ ರಾತ್ರಿ 8 ರವರೆಗೆ
ಪ್ರವೇಶ: ಉಚಿತ.
ಮಾಹಿತಿಗೆ: 7090009911/7090009922

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.