
ಎಐ ಚಿತ್ರ
ಭಾರತದಲ್ಲಿ ಕೃಷಿ ಕೇವಲ ಒಂದು ಉದ್ಯೋಗವಲ್ಲ. ಬದಲಿಗೆ ಅದು ಲಕ್ಷಾಂತರ ಜನರ ಜೀವನೋಪಾಯದ ಮೂಲವಾಗಿದೆ. ಆದಾಗಿಯೂ ದೇಶದಲ್ಲಿ ಕೃಷಿಕರು ಪ್ರಕೃತಿಕ ವಿಕೋಪ, ಕಡಿಮೆ ಉತ್ಪಾದಕತೆ (ಇಳುವರಿ ಕುಂಟಿತ), ಬೆಲೆ ಏರಿಳಿದಂತಹ ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಆ ಸವಾಲುಗಳನ್ನು ನಿವಾರಿಸಿ ರೈತರನ್ನು ಬೆಂಬಲಿಸಲು ಮತ್ತು ಕೃಷಿಯನ್ನು ಉತ್ತೇಜಿಸಲು ಭಾರತ ಸರ್ಕಾರ ರೈತರಿಗಾಗಿ ಹಲವು ಯೋಜನೆಗಳನ್ನು ರೂಪಿಸಿದೆ.
ಸರ್ಕಾರ ರೂಪಿಸಿರುವ ಪ್ರಮುಖ 10 ಯೋಜನೆಗಳು ಹೀಗಿವೆ...
ರೈತರಿಗೆ ಆರ್ಥಿಕ ನೆರವು ನೀಡಿ ಅವರ ಜೀವನಮಟ್ಟವನ್ನು ಸುಧಾರಿಸಲು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೆ ತಂದಿದೆ. 2019ರಲ್ಲಿ ಆರಂಭವಾದ ಈ ಮಹತ್ವಕಾಂಕ್ಷಿ ಯೋಜನೆಯಡಿ ಅರ್ಹ ರೈತರಿಗೆ ಪ್ರತಿ ವರ್ಷ ₹6,000 ಆರ್ಥಿಕ ನೆರವನ್ನು 3 ಕಂತುಗಳಲ್ಲಿ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.
ಉದ್ದೇಶ
ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಆರ್ಥಿಕ ನೆರವು ನೀಡುವುದು ಮತ್ತು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದು.
ಪ್ರಯೋಜನಗಳು
ವರ್ಷಕ್ಕೆ ₹6 ಸಾವಿರ ಆರ್ಥಿಕ ನೆರವು
ರೈತರ ಆದಾಯ ಮತ್ತು ಜೀವನೋಪಾಯ ಮಟ್ಟವನ್ನು ಸುಧಾರಿಸುವುದು
ಬಿತ್ತನೆ ಬೀಜಗಳು ಮತ್ತು ರಸಗೊಬ್ಬರ ಖರೀದಿಸಲು ಆರ್ಥಿಕ ನೆರವು
ಕೈ ಸಾಲಗಳ ಮೇಲಿನ ಅವಲಂಬನೆ ತಗ್ಗಿಸುವುದು
ಅನಿರೀಕ್ಷಿತ ಘಟನೆಗಳಿಂದ ಉಂಟಾದ ಬೆಳೆ ನಷ್ಟಕ್ಕೆ ಆರ್ಥಿಕ ಪರಿಹಾರ ನೀಡಲು ಭಾರತ ಸರ್ಕಾರ ಆರಂಭಿಸಿರುವ ಕೃಷಿ ವಿಮಾ ಯೋಜನೆ ಇದಾಗಿದೆ.
ನೈಸರ್ಗಿಕ ವಿಕೋಪಗಳು, ರೋಗಬಾಧೆ, ಅತಿವೃಷ್ಟಿ, ಬರ, ನೆರೆ ಮುಂತಾದ ಕಾರಣಗಳಿಂದ ಬೆಳೆ ನಷ್ಟವಾದ ಸಂದರ್ಭದಲ್ಲಿ ರೈತರಿಗೆ ಆರ್ಥಿಕ ರಕ್ಷಣೆ ನೀಡುವುದು ಇದರ ಉದ್ದೇಶ.
ಪ್ರಯೋಜನಗಳು
ಪ್ರಾಕೃತಿಕ ವಿಕೋಪ, ಕೀಟಗಳು ಅಥವಾ ರೋಗಗಳಿಂದ ಉಂಟಾಗುವ ಇಳುವರಿ ನಷ್ಟವನ್ನು ಭರಿಸಲಾಗುತ್ತದೆ.
ಬೆಳೆ ನಷ್ಟ ಅಥವಾ ನಾಶವಾದ ಸಂಧರ್ಭದಲ್ಲಿ ರೈತರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ.
ಈ ಯೋಜನೆಯಡಿಯಲ್ಲಿ ರೈತರು ಕಡಿಮೆ ಪ್ರೀಮಿಯಂ ಪಾವತಿಸಿ ಬೆಳೆ ವಿಮೆ ಪಡೆಯಬಹುದು.
ಕೃಷಿಕರಿಗೆ ತಕ್ಷಣದ ಹಣಕಾಸು ಸಹಾಯ ಒದಗಿಸುವ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದೆ. 1998ರಲ್ಲಿ ಈ ಯೋಜನೆಯನ್ನು ಪರಿಚಯಿಸಲಾಯಿತು. ಈ ಯೋಜನೆಯಡಿ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ₹1.6 ಲಕ್ಷದವರೆಗೆ ಸಾಲವನ್ನು ಪಡೆಯಬಹುದು. ಈ ಹಣವನ್ನು ಪಶು ಸಂಗೋಪನೆ, ಮೀನುಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಬಳಸಬಹುದು. ಕೆಸಿಸಿ ಸಾಲದ ಮೇಲಿನ ಬಡ್ಡಿ ದರ ಕಡಿಮೆ ಇರುತ್ತದೆ. ಹಾಗಾಗಿ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಇತರ ವೆಚ್ಚಗಳಿಗಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು.
ಪ್ರಯೋಜನಗಳು
ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಅಲ್ಪವಧಿಯ ಸಾಲವನ್ನು ನೀಡಲಾಗುತ್ತದೆ
ಬಿತ್ತನೆ ಬೀಜಗಳು, ರಸಗೊಬ್ಬರ ಮತ್ತು ಯಂತ್ರೋಪಕರಣಗಳನ್ನು ಖರೀದಿಸಲು ಉತ್ತೇಜನ
ಲೇವಾದೇವಿದಾರರ ಮೇಲಿನ ಅವಲಂಬನೆಯನ್ನು ತಗಿಸುತ್ತದೆ
2015ರಲ್ಲಿ ಈ ಯೋಜನೆಯನ್ನು ಪರಿಚಯಿಸಲಾಯಿತು. ಮಣ್ಣಿನ ಫಲವತ್ತತೆಯನ್ನು ಸುಧಾರಿಸಲು ಮತ್ತು ಕೃಷಿ ಪದ್ಧತಿಗಳನ್ನು ಸುಧಾರಿಸಲು ಇದು ಸಹಾಯ ಮಾಡುತ್ತದೆ. ಈ ಯೋಜನೆಯಡಿ ಮಣ್ಣಿನ ಫಲವತ್ತತೆಯನ್ನು ಆಧಾರಿಸಿ ಸೂಕ್ತ ರಸಗೊಬ್ಬರ ಬಳಕೆ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಅಲ್ಲದೆ ಈ ಯೋಜನೆಯಡಿಯಲ್ಲಿ ರೈತರು ಮಣ್ಣಿನ ಪರೀಕ್ಷೆಯನ್ನು ಉಚಿತವಾಗಿ ಮಾಡಿಸಬಹುದು. ಮಣ್ಣಿನ ಫಲವತ್ತತೆ ಮತ್ತು ಅಗತ್ಯ ಸುಧಾರಣೆಗಳ ಬಗ್ಗೆ ವೈಜ್ಞಾನಿಕ ಮಾಹಿತಿ ನೀಡಲಾಗುತ್ತದೆ. ಈ ಮೂಲಕ ರಾಸಾಯನಿಕಗಳ ಸಮತೋಲಿತ ಬಳಕೆ, ಉತ್ಪಾದಕತೆಯ ಹೆಚ್ಚಳ ಮತ್ತು ಪರಿಸರ ಸಂರಕ್ಷಣೆಯ ಗುರಿಹೊಂದಲಾಗಿದೆ....
ಪ್ರಯೋಜನಗಳು
ರೈತರಿಗೆ ಮಣ್ಣಿನ ಫಲವತ್ತತೆ ಬಗ್ಗೆ ಮಾಹಿತಿ ಒದಗಿಸಲಾಗುತ್ತದೆ
ರಸಗೊಬ್ಬರ ಬಳಕೆ ಬಗ್ಗೆ ಮಾಹಿತಿ ನೀಡಲಾಗುತ್ತದೆ
ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ನೆರವು
ಮಣ್ಣಿನಲ್ಲಿರುವ ಪೋಷಕಾಂಶಗಳ ಅಸಮತೋಲನ ನಿವಾರಣೆಗೆ ಸಹಾಯಕ
ಇ -ನ್ಯಾಮ್ ಡಿಜಿಟಲ್ ವೇದಿಕೆಯಾಗಿದ್ದು ದೇಶದಾದ್ಯಂತ ಇರುವ ಕೃಷಿ ಮಾರುಕಟ್ಟೆಗಳನ್ನು ಒಂದೇ ಜಾಲದಲ್ಲಿ ಸಂಪರ್ಕಿಸುತ್ತದೆ. ಇದು ರೈತರನ್ನು ಸಗಟು ಖರೀದಿದಾರರೊಂದಿಗೆ ಸಂಪರ್ಕಿಸುವುದಲ್ಲದೆ ಅವರ ಉತ್ಪನ್ನಗಳನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ. ಆ ಮೂಲಕ ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆ ದೊರೆಯುವಂತೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶ.
ಪ್ರಯೋಜನಗಳು
ಬೃಹತ್ ಮಾರುಕಟ್ಟೆಗೆ ಪ್ರವೇಶವನ್ನು ಒದಗಿಸುತ್ತದೆ.
ರೈತ ಮತ್ತು ಖರೀದಿದಾರರ ನಡುವೆ ನೇರ ಮಾತುಕತೆಯನ್ನು ಉತ್ತೇಜಿಸುತ್ತದೆ
ಮಾರುಕಟ್ಟೆ ವಿಸ್ತರಣೆ
ರೈತರು ತಮ್ಮ ಉತ್ಪನ್ನಗಳನ್ನು ನ್ಯಾಯಯುತ ಬೆಲೆಯಲ್ಲಿ ಮಾರಾಟ ಮಾಡಬಹುದು
ಸಾವಯವ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ಭಾರತ ಸರ್ಕಾರದ ಒಂದು ಉಪಕ್ರಮ. ಇದು ಮಣ್ಣಿನ ಫಲವತ್ತತೆಯನ್ನು ಸುಧಾರಿಸಲು ಸಹಾಯಕವಾಗಿದೆ. ಪರಿಸರ ಸ್ನೇಹಿ ಕೃಷಿ ಚಟುವಟಿಕೆ, ರಾಸಾಯನಿಕಗಳ ಬಳಕೆ ತಗ್ಗಿಸುವುದು ಮತ್ತು ಮಣ್ಣಿನ ಫಲವತ್ತತೆ ಸುಧಾರಿಸಲು ಉತ್ತೇಜನ ನೀಡುತ್ತದೆ.
ಪ್ರಯೋಜನಗಳು
ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ.
ರಾಸಾಯನಿಕ ಗೊಬ್ಬರಗಳ ಮೇಲಿನ ಅವಲಂಬನೆ ಕಡಿಮೆ ಮಾಡುತ್ತದೆ.
ಪರಿಸರ ಸ್ನೇಹಿ ಪದ್ಧತಿ ಅಳವಡಿಕೆ
ರಾಸಾಯನಿಕ ಮುಕ್ತ ಆಹಾರವನ್ನು ಉತ್ಪಾದಿಸುವುದು
ಕೃಷಿ ವೆಚ್ಚವನ್ನು ಕಡಿಮೆ ಮಾಡುವುದು
'ಹರ್ ಖೇತ್ ಕೋ ಪಾನಿ (ಪ್ರತಿ ಬೆಳೆಗೆ ನೀರು)' ಎಂಬ ಘೋಷವಾಕ್ಯದೊಂದಿಗೆ ಪ್ರಾರಂಭಿಸಲಾದ ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಯಾಗಿದೆ. 2015ರ ಜುಲೈ 1ರಂದು ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ದೇಶದಲ್ಲಿ ಹೆಚ್ಚಿನ ಪಾಲು ಕೃಷಿ ಮಳೆಯ ನೀರನ್ನೇ ಅವಲಂಬಿಸಿದೆ. ಇದರಿಂದಾಗಿ ಬಹುತೇಕ ರೈತರು ಬೇಸಿಗೆಯಲ್ಲಿ ನೀರಿನ ಕೊರತೆಯನ್ನು ಎದುರಿಸಬೇಕಾಗುತ್ತಿದೆ. ಮಳೆನೀರು ಕೊಯ್ಲಿನ ಸಹಾಯದಿಂದ ರಕ್ಷಣಾತ್ಮಕ ನೀರಾವರಿಯನ್ನು ಉತ್ತೇಜಿಸುವುದು ಪ್ರಧಾನ ಮಂತ್ರಿ ಕೃಷಿ ಸಿಂಚಯಿ ಯೋಜನೆ ಗುರಿಯಾಗಿದೆ. ಇದನ್ನು 'ಜಲ್ ಸಿಂಚನ್' ಮತ್ತು 'ಜಲ್ ಸಂಚಯ್' ನಂತಹ ಕಾರ್ಯಕ್ರಮಗಳ ಮೂಲಕ ಸಾಧಿಸಲಾಗುತ್ತಿದೆ.
ಪ್ರಯೋಜನಗಳು
ಈ ಯೋಜನೆಯು ರೈತರಿಗೆ ಸೂಕ್ಷ್ಮ ನೀರಾವರಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಮತ್ತು 'ಪ್ರತಿ ಹನಿ - ಹೆಚ್ಚಿನ ಬೆಳೆ' ಸಹಾಯಧನವನ್ನು ನೀಡುತ್ತದೆ
ಆಧುನಿಕ ನೀರಾವರಿ ಪದ್ಧತಿಗಳ ನೀರಿನ ಸದ್ಭಳಕೆ ಉತ್ತೇಜಸುತ್ತದೆ
ನೀರು ಪೋಲಾಗುವುದನ್ನು ತಡೆಗಟ್ಟುವುದು
ರೈತರ ಆದಾಯವನ್ನು ಹೆಚ್ಚಿಸುವುದು, ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಉತ್ತೇಜಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಈ ಯೋಜನೆಯ ಮೂಲಕ ಕೃಷಿಯಲ್ಲಿ ನೂತನ ತಂತ್ರಜ್ಞಾನ ಅಳವಡಿಕೆ, ಉದ್ಯಮಶೀಲತೆ ಮತ್ತು ಸ್ಟಾರ್ಟ್ ಅಪ್ (ನವೋಧ್ಯಮಗಳಿಗೆ) ಆರ್ಥಿಕ ನೆರವು ನೀಡುತ್ತದೆ.
ಪ್ರಯೋಜನಗಳು
ಕೃಷಿ ಸಂಬಂಧಿತ ವಿವಿಧ ಚಟುವಟಿಕೆಗಳಿಗೆ ಆರ್ಥಿಕ ನೆರವು
ಆಧುನಿಕ ತಂತ್ರಜ್ಞಾನ ಮತ್ತು ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಸಹಾಯಕ
ಸ್ಟಾರ್ಟ್ ಅಪ್‌ಗಳಿಗೆ ಹಣಕಾಸು ನೆರವು
ಪ್ರಧಾನ ಮಂತ್ರಿ ಕಿಸಾನ್ ಪಿಂಚಣಿ ಯೋಜನೆಯು ಸಾಮಾಜಿಕ ಭದ್ರತಾ ಉಪಕ್ರಮವಾಗಿದೆ. ಈ ಯೋಜನೆಯಡಿಯಲ್ಲಿ ಅರ್ಹ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಪಿಂಚಣಿ ನೀಡಲಾಗುತ್ತದೆ.
ಪ್ರಯೋಜನ
ವೃದ್ಧಪ್ಯಾದಲ್ಲಿ ಅರ್ಹ ರೈತರಿಗೆ ಹಣಕಾಸಿನ ನೆರವು
ದೇಶದ ಮೀನುಗಾರಿಕಾ ಕ್ಷೇತ್ರದ ಪ್ರಗತಿಗಾಗಿ ರೂಪಿಸಿರುವ ಯೋಜನೆ ಇದಾಗಿದೆ.
ಪ್ರಯೋಜನಗಳು
ಮೀನುಗಾರರಿಗೆ ಆರ್ಥಿಕ ನೆರವು
ಹೊಸ ಉದ್ಯೋಗ ಸೃಷ್ಟಿ
ರಫ್ತು ಸಾಮರ್ಥ್ಯವನ್ನು ಉತ್ತೇಜಸುವುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.