ADVERTISEMENT

ಛಾಯಾಚಿತ್ರಗಳಲ್ಲಿ ಭಾರತೀಯ ಸಂಸ್ಕೃತಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2019, 19:45 IST
Last Updated 16 ಡಿಸೆಂಬರ್ 2019, 19:45 IST
ಮಧುರೈನಲ್ಲಿ ನಡೆದ ಸಂಪ್ರದಾಯಿಕ ‘ಜಲ್ಲಿಕಟ್ಟು’ ಆಚರಣೆ
ಮಧುರೈನಲ್ಲಿ ನಡೆದ ಸಂಪ್ರದಾಯಿಕ ‘ಜಲ್ಲಿಕಟ್ಟು’ ಆಚರಣೆ   

‘ಫೇರ್ಸ್‌, ಫೆಸ್ಟಿವಲ್ಸ್‌ ಆ್ಯಂಡ್‌ ರಿಚುವಲ್ಸ್‌ ಆಫ್‌ ಇಂಡಿಯಾ’ ಎಂಬ ವಿಷಯ ಆಧರಿಸಿದಛಾಯಾಚಿತ್ರಗಳ ಪ್ರದರ್ಶನವನ್ನು ಎಸ್ಸೆನ್‌ ಕಮ್ಯೂನಿಕೇಶನ್‌ ಡಿ.19 ರಿಂದ 22ವರೆಗೆಆಯೋಜಿಸಿದೆ. ಚಿತ್ರಕಲಾ ಪರಿಷತ್‌ನಲ್ಲಿ ಈ ಪ್ರದರ್ಶನ ನಡೆಯಲಿದೆ.

ಸಂಸ್ಥೆ ಇತ್ತೀಚೆಗೆ ಛಾಯಾಚಿತ್ರಗಳ ಸ್ಪರ್ಧೆ ಏರ್ಪಡಿಸಿತ್ತು. ಸ್ಪರ್ಧೆಗೆ ಆಗಮಿಸಿದ ಕೆಲವು ಪ್ರಮುಖ ಚಿತ್ರಗಳನ್ನು ಈ ಪ್ರದರ್ಶನದಲ್ಲಿ ಇರಿಸಲಾಗುತ್ತಿದೆ. ಇದರ ಮುಖ್ಯ ಉದ್ದೇಶ ಛಾಯಗ್ರಾಹಕರ ನಡುವೆ ಸ್ಪರ್ಧೆ ಏರ್ಪಡಿಸುವುದಷ್ಟೇ ಆಗಿರಲಿಲ್ಲ ಬದಲಾಗಿಭಾರತೀಯ ಸಂಸ್ಕೃತಿ, ಕಲೆ ಮತ್ತು ಸಂಪ್ರದಾಯದಬಗ್ಗೆ ಜಾಗೃತಿ ಮೂಡಿಸುವುದಾಗಿತ್ತು ಎಂದು ಸಂಸ್ಥೆ ತಿಳಿಸಿದೆ.

ಈ ಕಾರ್ಯಕ್ರಮದಲ್ಲಿ 23ಕ್ಕೂ ಹೆಚ್ಚು ಪತ್ರಿಕಾ, ಹವ್ಯಾಸಿ ಮತ್ತು ಪ್ರವಾಸಿ ಛಾಯಗ್ರಾಹಕರುತಮ್ಮ ಅತ್ಯುತ್ತಮ ಛಾಯಾಚಿತ್ರಗಳನ್ನು ಪ್ರದರ್ಶನಕ್ಕಿಡಲಿದ್ದಾರೆ. ದೇಶದ ವಿವಿಧ ಮೂಲೆಗಳ ಸಂಸ್ಕೃತಿ, ಆಚರಣೆಗಳ ಸುಂದರ ಕ್ಷಣಗಳನ್ನು ಛಾಯಾಗ್ರಾಹಕರು ತಮ್ಮ ಕ್ಯಾಮೆರಾದ ಕಣ್ಣುಗಳಲ್ಲಿ ಸೆರೆ ಹಿಡಿದಿದ್ದಾರೆ. ಕರ್ನಾಟಕ, ಕೇರಳ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ರಾಜಸ್ಥಾನ, ಲದಾಕ್‌, ಉತ್ತರಪ್ರದೇಶ ಸೇರಿದಂತೆ ಹಲವು ರಾಜ್ಯದ ಆಚರಣೆಗಳ ದೃಶ್ಯಗಳನ್ನು ಛಾಯಾಚಿತ್ರ ಪ್ರದರ್ಶನದಲ್ಲಿ ಕಾಣಬಹುದು.ಪುಷ್ಕರ್‌ ಜಾತ್ರೆ,ಕೋಲ, ಭೂತಾರಾಧನೆಯಂತಹ ವಿವಿಧ ಆಚರಣೆಯ ಬಣ್ಣಗಳು ಜೊತೆಗೂಡಿ ಭಾರತೀಯ ಸಂಸ್ಕೃತಿಯ ಚಿತ್ತಾರವು ಪ್ರದರ್ಶನದಲ್ಲಿ ಮೂಡಿಬರಲಿದೆ ಎನ್ನುವುದು ಎಸ್ಸೆನ್‌ ಕಮ್ಯುನಿಕೇಶನ್‌ನ ಅಭಿಪ್ರಾಯ.

ADVERTISEMENT

ಕೇರಳದ ಸಂಪ್ರದಾಯಿಕ ‘ತೈಯಂ’ ನೃತ್ಯ, ಮಹಾರಾಷ್ಟ್ರದ ಸೋಮವತಿ ಉತ್ಸವ(ಹಳದಿ ಬಣ್ಣದ ಹಬ್ಬ), ಪಂಢರಪುರದ ಪಾಲ್ಕೀ ಉತ್ಸವದಲ್ಲಿ ಭಕ್ತರ ನೃತ್ಯ, ಮಹಾರಾಷ್ಟ್ರದ ಶೋಭಾಯಾತ್ರೆಯಲ್ಲಿ ಸೀರೆ ತೊಟ್ಟು ಬೈಕ್‌ ಚಲಾಯಿಸಿದ ಮಹಿಳೆಯರು, ತೆಲಂಗಾಣದ ಬೊನಾಲು ಉತ್ಸವ, ಕರ್ನಾಟಕದ ಮಸ್ತಕಾಭಿಷೇಕ, ಕೋಣದ ಓಟ(ಕಂಬಳ), ಮಥುರಾದಲ್ಲಿ ಹೋಳಿ ಆಚರಣೆ, ಕೇರಳದ ಅರಣ್ಮೂಲ ಬೋಟ್‌ ರೇಸ್‌, ವಾರಾಣಸಿಯ ಕುಂಭಮೇಳ, ಮೈಸೂರು ದಸರಾ ಆಚರಣೆ ಮತ್ತು ತ್ರಿಶೂರ್‌ಪುರಂನ ಗಜಪಡೆಯ ಯಾತ್ರೆ ತುಣುಕುಗಳು ಪ್ರದರ್ಶನಕ್ಕೆ ಇನ್ನಷ್ಟು ಮೆರುಗು ನೀಡಲಿದೆ.

ಸ್ಫರ್ಧೆಯಲ್ಲಿ ಆಯ್ಕೆಯಾದ ಅತ್ಯುತ್ತಮ ಛಾಯಾಚಿತ್ರಗಳು

ಧೀರಜ್‌ ರಾಜ್‌ಪಾಲ್‌.ಎಂ ಅವರಕಣ್ಣೂರಿನ ತೈಯ್ಯಂ ನೃತ್ಯ ಪ್ರದರ್ಶನ-‘ಲೀಪ್‌ ಆಫ್‌ ಫೇತ್‌’,ಶ್ರೀನಿವಾಸ್‌ ಯೆನ್ನಿ ಅವರ ಮಹಾರಾಷ್ಟ್ರದ ಉತ್ಸವ- ‘ಡಿವೋಟೀಸ್‌ ಡಾನ್ಸ್‌ ಎಟ್‌ ದಿ ಪಾಲ್ಕೀ ಫೆಸ್ಟಿವಲ್‌ ಇನ್‌ ಪಂಢರಪುರ’, ಉದಯ್‌ ತೇಜಸ್ವಿ ಯುಆರ್‌ಎಸ್‌ ಅವರ–ಮಧುರೈನ ಜಲ್ಲಿಕಟ್ಟು‘ಡೌನ್‌ಅಂಡರ್‌’.

ಜೊತೆಗೆ ಅನಿತಾ ಮೈಸೂರು ಅವರಶ್ರವಣ ಬೆಳಗೋಳದ ಮಸ್ತಾಕಾಭಿಷೇಕ–‘ಇನ್‌ವೊಕಿಂಗ್‌ ಬ್ಲೆಸಿಂಗ್ಸ್‌’,ಶ್ರೀನಿವಾಸ್‌ ಯೆನ್ನಿ ಅವರಶ್ರವಣ ಬೆಳಗೊಳದ ಮಹಾಮಸ್ತಕಾಭಿಷೇಕ– ‘ಮಿಲ್ಕ್‌ ಶಾವರ್‌’,ಪದ್ಮನಾಭ ಕೆ.ಜಿ ಅವರಕೇರಳದಉತ್ಸವ- ‘ಎ ಪರೇಡ್‌ ಆಫ್‌ ಕೇರಳಾಸ್‌ ಆರ್ಟ್‌ ಫಾರ್ಮ್ಸ್‌’,ಧೀರಜ್‌ರಾಜ್‌ಪಾಲ್‌ ಅವರಕಣ್ಣೂರಿನ ತೈಯಂ ನೃತ್ಯ ಪ್ರದರ್ಶನ- ‘ಡಾನ್ಸಿಂಗ್‌ ಟು ದಿ ಬೀಟ್ಸ್‌ ಆಫ್‌ ಚಾಂಟ್ಸ್‌ ಆ್ಯಂಡ್‌ ಡ್ರಮ್ಸ್‌’,ಅಖ್ತರ್‌ ಹುಸೇನ್‌ ಅವರಮಂಗಳೂರಿನ ಕಲೆ-‘ದಿ ಸ್ಟ್ಯಾನ್ಸ್‌’ ಛಾಯಾಚಿತ್ರಗಳಿಗೆ ಪ್ರಮಾಣ ಪತ್ರಗಳನ್ನು ನೀಡಿ ಸಂಸ್ಥೆ ಗೌರವಿಸಿದೆ.

lಸ್ಥಳ: ಚಿತ್ರಕಲಾ ಪರಿಷತ್‌, ಕುಮಾರಕೃಪಾ ರಸ್ತೆ, ಡಿ.19 ರಿಂದ 22ವರೆಗೆ. ಬೆಳಿಗ್ಗೆ 10ರಿಂದ ಸಂಜೆ 7.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.