14ನೇ ವಯಸ್ಸಿನಿಂದ ತೊಗಲು ಗೊಂಬೆಯಾಟದಲ್ಲಿ ಆಸಕ್ತಿ ಬೆಳೆಸಿಕೊಂಡ ಶತಾಯುಷಿ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಒಂಬತ್ತು ದಶಕಗಳಿಂದ ಈ ಕಲೆಯನ್ನು ಪೋಷಿಸಿಕೊಂಡು ಬಂದಿದ್ದಾರೆ. ಅವರಿಗೆ ಕೇಂದ್ರ ಸರ್ಕಾರದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಗರಿ ಲಭಿಸಿದೆ. ಭೀಮವ್ವ ಅನಕ್ಷರಸ್ಥೆಯಾದರೂ ಕಲೆಯಲ್ಲಿ ಎಲ್ಲರನ್ನೂ ಮೀರಿಸುವ ಕೌಶಲ ಹೊಂದಿದ್ದಾರೆ. ಅನೇಕ ದೇಶಗಳಲ್ಲಿ ರಾಮಾಯಣ ಹಾಗೂ ಮಹಾಭಾರತದಂಥ ಮಹಾಕಾವ್ಯಗಳನ್ನು ಮತ್ತು ಪ್ರಸಕ್ತ ವಿದ್ಯಮಾನಗಳನ್ನು ತಮ್ಮ ಕಲೆಯ ಮೂಲಕ ತೋರಿಸಿದ್ದಾರೆ. ಮಹಾಭಾರತದ ಕಥನಗಳನ್ನು ಅನಾವರಣಗೊಳಿಸುವ ಗೊಂಬೆಗಳು ಅಜ್ಜಿಯ ಹಾಡಿಗೆ ತಾಳ ಹಾಕುವಂತಿವೆ. ಹಳ್ಳಿಹಳ್ಳಿಗೆ ಓಡಾಡಿ ಗೊಂಬೆಗಳ ಕಥನವನ್ನು ಜನರಿಗೆ ಹೇಳಿದ್ದಾರೆ ಭೀಮವ್ವ ಅಜ್ಜಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.