ADVERTISEMENT

ಪ್ರೇಮಿಗಳ ದಿನಾಚರಣೆ: ನಿಮ್ಮ ಪ್ರೇಮಿಗೆ ಈ ವಿಶೇಷ ಉಡುಗೊರೆಯನ್ನು ನೀಡಿ

Veenashree
Published 27 ಜನವರಿ 2026, 12:34 IST
Last Updated 27 ಜನವರಿ 2026, 12:34 IST
<div class="paragraphs"><p>ಗೆಟ್ಟಿ ಚಿತ್ರ</p></div>
   

ಗೆಟ್ಟಿ ಚಿತ್ರ

ಫೆಬ್ರುವರಿ 14 ಪ್ರೇಮಿಗಳ ದಿನಾಚರಣೆ. ಇದು ಪ್ರೇಮಿಗಳಿಗೆ ತುಂಬಾ ವಿಶೇಷ ತಿಂಗಳು. ಏಕೆಂದರೆ ವಿಶ್ವದಾದ್ಯಂತ ಫೆ. 14ರಂದು ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಫೆ. 7ರಿಂದ 14ರವರೆಗೆ ವ್ಯಾಲೆಂಟೈನ್ಸ್ ಡೇ ಆಚರಣೆಗಳು ನಡೆಯುತ್ತಿರುತ್ತದೆ. ಕೊನೆಗೆ ಫೆ.14ರ ದಿನದಂದೇ ತಮ್ಮ ಪ್ರೀತಿ ಪಾತ್ರರಿಗೆ ತಮ್ಮ ಪ್ರೇಮ ನಿವೇದನೆಯನ್ನು ಮಾಡುತ್ತಾರೆ. ಹೆಚ್ಚಿನವರು ಅಂದು ಪ್ರಿಯತಮೆಗೆ ಅಥವಾ ಪ್ರಿಯಕರನಿಗೆ ಏನಾದರೂ ಉಡುಗೊರೆ ನೀಡಿ ಪ್ರಪೋಸ್ ಮಾಡಲು ಬಯಸುತ್ತಾರೆ.

ಅದಕ್ಕಾಗಿ ಪ್ರೇಮಿಗಳ ದಿನಾಚರಣೆ ನಿಮಿತ್ತ ಈಗಾಗಲೇ ಮಾರುಕಟ್ಟೆಗೆ ಹೊಸ, ಭಿನ್ನ, ವಿಭಿನ್ನ ಶೈಲಿಯಲ್ಲಿ ಉಡುಗೊರೆಯ ವಸ್ತುಗಳು ಬಂದಿವೆ. ಅದರಲ್ಲೂ ವಿಶೇಷವಾಗಿ ಈ ರೀತಿಯ ಉಡುಗೊರೆಗಳನ್ನು ನಿಮ್ಮ ಸಂಗಾತಿಗೆ ನೀಡಿದರೆ ಅವರ ಖುಷಿ ದುಪ್ಪಟ್ಟಾಗುತ್ತದೆ. ನಿಮ್ಮ ಪ್ರೇಮ ನಿವೇದನೆಯನ್ನು ಒಪ್ಪಿಕೊಳ್ಳಲೂಬಹುದು.

ADVERTISEMENT

ಸಾಮಾನ್ಯವಾಗಿ ಪ್ರೇಮಿಗಳು ತಮ್ಮ ಮನಸ್ಸಿನಲ್ಲಿರುವ ಪ್ರೀತಿಯನ್ನು ವ್ಯಕ್ತಪಡಿಸಲು ವಿಫಲರಾಗುವುದರಿಂದಲೇ ಅವರ ಪ್ರೀತಿ ಸಕ್ಸಸ್‌ ಆಗೋದಿಲ್ಲ. ‌ಅಲ್ಲದೇ ಅನೇಕ ಹುಡುಗ ಅಥವಾ ಹುಡುಗಿಯರು ಎಲ್ಲಿ ನಮ್ಮ ಪ್ರೀತಿ ಕೈ ತಪ್ಪಿ ಹೋಗುವುದೋ ಎಂಬ ಭಯದಲ್ಲಿರುತ್ತಾರೆ. ಇಂಥವರು ವ್ಯಾಲೆಂಟೈನ್ಸ್ ದಿನ ನಿಮ್ಮ ಪ್ರಿಯತಮೆ/ಪ್ರಿಯತಮನಿಗೆ ಈ ಉಡುಗೊರೆ ನೀಡಿ ಪ್ರಪೋಸ್ ಮಾಡಿದರೇ ಖಂಡಿತವಾಗಿಯೂ ಅದು ಯಶಸ್ಸು ಕಾಣುತ್ತದೆ. ಅದಕ್ಕಿಂತ ಮುಂಚೆ ‘ಪ್ರಜಾವಾಣಿ ಡಿಜಿಟಲ್’ ಆಯೋಜಿಸಿದ ರೀಲ್ಸ್ ಸ್ಪರ್ಧೆ ಬಗ್ಗೆ ತಿಳಿಯಿರಿ.

ವ್ಯಾಲೆಂಟೈನ್ಸ್ ಡೇ ಅಂಗವಾಗಿ ಕೇಂಬ್ರಿಡ್ಜ್‌ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಾರ್ಥ್ ಕ್ಯಾಂಪಸ್‌ ಸಹಯೋಗದೊಂದಿಗೆ ವಿಶೇಷ ರೀಲ್ಸ್‌ ಸ್ಪರ್ಧೆಯನ್ನು ‘ಪ್ರಜಾವಾಣಿ ಡಿಜಿಟಲ್’ ಆಯೋಜಿಸಿದೆ. ಪ್ರೀತಿ, ಸ್ನೇಹ, ನಂಬಿಕೆ, ಸಂಬಂಧಗಳ ಮೌಲ್ಯ ಹಾಗೂ ಜೀವನದ ಸೌಂದರ್ಯವನ್ನು ಪ್ರತಿಬಿಂಬಿಸುವ ಸೃಜನಾತ್ಮಕ ರೀಲ್ಸ್‌ಗಳನ್ನು ಆಹ್ವಾನಿಸಲಾಗುತ್ತಿದೆ.

ಕೆಂಪು ಗುಲಾಬಿ

ಗುಲಾಬಿ ಹೂಗುಚ್ಛ:

ಪ್ರೀತಿಯ ಸಂಕೇತವಾಗಿರುವ ಗುಲಾಬಿ ಹೂಗುಚ್ಛವು ಪ್ರೇಮಿಗಳಿಗೆ ಮೊದಲ ಆಕರ್ಷಕ ಉಡುಗೊರೆಯಾಗಿದೆ. ಇದು ಹುಡುಗಿಯರ ಮನಸ್ಸನ್ನು ಸಂತೋಷಗೊಳಿಸುತ್ತದೆ. ಬಹುತೇಕ ಹುಡುಗಿಯರು ಈ ಹೂವುಗಳನ್ನು ‌ಇಷ್ಟಪಡುತ್ತಾರೆ. ಪ್ರೀತಿಯ ಸಂಕೇತವಾಗಿರುವ ಕೆಂಪು ಗುಲಾಬಿ ಹೂವುಗಳನ್ನು ಪ್ರೀತಿಸುವ ಹುಡುಗಿಗೆ ನೀಡಬಹುದು. ಇದು ಬಹು ಬೇಗನೆ ಆಕೆಯ ಮನಸ್ಸನ್ನು ಗೆಲ್ಲಲು ಸಹಾಯ ಮಾಡುತ್ತದೆ.

ಬಂಗಾರದ ಆಭರಣ

ಆಕರ್ಷಕ ನೆಕ್ಲೇಸ್ ಅಥವಾ ಉಂಗುರ:

ಆಕರ್ಷಕ ನೆಕ್ಲೇಸ್‌ಗಳನ್ನು ನೀಡುವ ಮೂಲಕ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಬಹುದು. ನಿಮ್ಮ ಸಂಗಾತಿಗೆ ಇಷ್ಟವಾಗುವ ಆಭರಣವನ್ನು ಉಡುಗೊರೆಯಾಗಿ ನೀಡುವ ಮೂಲಕ ಉಂಗುರ ಕೊಟ್ಟು ವಿಶೇಷವಾಗಿ ಪ್ರೇಮ ನಿವೇದನೆ ಮಾಡಬಹುದು.

ಫೋಟೊ ಫ್ರೇಮ್:

ನೀವು ಪ್ರೀತಿಯಲ್ಲಿ ಬಿದ್ದ ದಿನದಿಂದ ಇಲ್ಲಿಯವರೆಗೂ ಕ್ಲಿಕ್ಕಿಸಿಕೊಂಡಿರುವ ಅವನ/ ಅವಳ ಫೋಟೊಗಳಿಗೆ ಫ್ರೇಮ್ ಮಾಡಿಸಿ ಉಡುಗೊರೆಯಾಗಿ ನೀಡುವುದು ಉತ್ತಮ ಆಯ್ಕೆ. ಅದು ನಿಮ್ಮ ಪ್ರೀತಿಯನ್ನು ದುಪ್ಪಟ್ಟು ಮಾಡುವುದರ ಜೊತೆಗೆ ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸುತ್ತದೆ.

ಮೇಣದ ಬತ್ತಿ ಬೆಳಕಿನಲ್ಲಿ ಊಟ ಸವಿಯಿಸಿ:

ನಿಮ್ಮ ಪ್ರೀತಿ ಪಾತ್ರರನ್ನು ಅಚ್ಚರಿಗೊಳಿಸಲು ರಾತ್ರಿ ಮೇಣದ ಬತ್ತಿ ಬೆಳಕಿನಲ್ಲಿ ಊಟ ಮಾಡಿಸಿ. ಇದು ಪ್ರೇಮಿಗಳ ಮಧ್ಯೆ ನಂಬಿಕೆ ಮೂಡಿಸುತ್ತದೆ. ಜೊತೆಗೆ ಅವರ ಮೇಲಿನ ಪ್ರೀತಿ ಜಾಸ್ತಿಯಾಗುವಂತೆ ಮಾಡುತ್ತದೆ.

ಪುಸ್ತಕವನ್ನು ನೀಡಿ:

ನಿಮ್ಮ ಸಂಗಾತಿಗೆ ಓದುವ ಹವ್ಯಾಸವಿದ್ದರೆ ಅವರಿಗೆ ವಿಶೇಷವಾದ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಬಹುದು. ಇದು ಅವರಿಗೆ ಹೆಚ್ಚು ಸಂತೋಷವನ್ನು ಉಂಟು ಮಾಡುತ್ತದೆ. ಹಾಗೂ ನಿಮ್ಮ ಮೇಲೆ ವಿಶ್ವಾಸ ಮೂಡುವಂತೆ ಮಾಡುತ್ತದೆ.

ಪ್ರೇಮ ಪತ್ರ:

ಈ ಪ್ರೇಮಿಗಳ ದಿನಾಚರಣೆಯಂದು ನಿಮ್ಮ ಸಂಗಾತಿಗೆ ಪ್ರೀತಿಯನ್ನು ವ್ಯಕ್ತಪಡಿಸಲು ಇದೊಂದು ಉತ್ತಮ ಅವಕಾಶ. ಮನಸ್ಸಿನಲ್ಲಿ ಇರುವ ಪ್ರೀತಿಯನ್ನು ಪತ್ರದಲ್ಲಿ ಬರೆಯುವ ಮೂಲಕ (ಅಥವಾ ಮೊಬೈಲ್‌ ಸಂದೇಶ) ಪ್ರೇಮ ನಿವೇದನೆಯನ್ನು ಮಾಡಬಹುದು. ಇದು ಆಕೆಗೆ ಬಲು ವಿಶೇಷ ಎನಿಸುತ್ತದೆ. ಇದಕ್ಕಿಂತ ದೊಡ್ಡ ಉಡುಗೊರೆ ಇನ್ನೊಂದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.