ADVERTISEMENT

ಪುಸ್ತಕ ವಿಮರ್ಶೆ: ಕಾನೂನು ವಿದ್ಯಾರ್ಥಿಗಳಿಗೆ ಉತ್ತಮ ಕೈಪಿಡಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2024, 23:30 IST
Last Updated 6 ಏಪ್ರಿಲ್ 2024, 23:30 IST
   

ಶೃಂಗೇರಿಯ ವಕೀಲ ವಿ.ಆರ್.ನಟಶೇಖರ್‌ ಅವರು ರಚಿಸಿರುವ ‘ಜನಸಾಮಾನ್ಯರಿಗೆ ಕಾನೂನು ತಿಳುವಳಿಕೆ’ ಇತ್ತೀಚಿನ ದಿನಗಳಲ್ಲಿ ಪ್ರಕಟವಾಗಿರುವ ಕಾನೂನು ಪುಸ್ತಕಗಳ ಸಾಮಾನ್ಯ ತಿಳಿವಳಿಕೆಯ ಕಪಾಟಿಗೆ ಮತ್ತೊಂದು ಸೇರ್ಪಡೆ. ಮಾನಗಾರುವಿನ ಶ್ರೀ ರಾಮಕೃಷ್ಣ ಪ್ರಕಾಶನದಿಂದ ಹೊರತರಲಾಗಿರುವ ಈ ಪುಸ್ತಕದ 78 ವಿವಿಧ ಕಾಯ್ದೆಗಳ ವಿವರಣೆಯನ್ನು ಸರಳವಾಗಿ ಬಿಡಿಸಿಡಲಾಗಿದೆ. 

‘ಕಾನೂನಿನ ಆವಿಷ್ಕಾರ’ ಎಂಬ ಅಧ್ಯಾಯದ ಮೂಲಕ ಆರಂಭವಾಗುವ ಲೇಖನಗಳ ಸರಮಾಲೆಯಲ್ಲಿ; ಕೇವಿಯೆಟ್‌, ದಸ್ತಾವೇಜುಗಳ ನೋಂದಣಿ, ರಿಟ್‌ ಅರ್ಜಿಗಳು, ಆಸ್ತಿಯನ್ನು ಕೊಳ್ಳುವಾಗ ವಹಿಸಬೇಕಾದ ಎಚ್ಚರಿಕೆಗಳು, ವಾಹನ ಚಲಾಯಿಸುವಾಗ ದುಡುಕು ಮತ್ತು ನಿರ್ಲಕ್ಷ್ಯ, ಲೈಂಗಿಕ ಕಿರುಕುಳ, ದುಡಿಯುವ ಮಹಿಳೆಯರಲ್ಲಿ ಅರಿವು ಮೂಡಿಸುವುದು, ಸುಳ್ಳು ಸಾಕ್ಷ್ಯ, ಸಮನ್ಸ್‌ ಬಗ್ಗೆ ಮಾಹಿತಿ, ಭ್ರೂಣ ಹತ್ಯೆ, ಜನನ ಮರಣ ನೋಂದಣಿ, ಆತ್ಮಹತ್ಯೆ, ನಿರೀಕ್ಷಣಾ ಜಾಮೀನು... ಹೀಗೆ ವೈವಿಧ್ಯಮಯವಾದ ಹತ್ತು ಹಲವು ಕಾಯ್ದೆಗಳ ಕುರಿತು ಸರಳವಾಗಿ ವಿವರಿಸಿದ್ದಾರೆ. 

ಕನ್ನಡದಲ್ಲಿ ಕಾನೂನು ಅಭ್ಯಸಿಸುವ ವಿದ್ಯಾರ್ಥಿಗಳಿಗೆ ಇದೊಂದು ಅತ್ಯುತ್ತಮ ಕೈಪಿಡಿ. ಲೇಖಕರು ಕನ್ನಡದ ಆಸ್ಥೆ ಉಳ್ಳವರಾಗಿರುವ ಕಾರಣ ಇಲ್ಲಿ ಅವರಿಗೆ ಹೇಳಲೇಬೇಕಾದ ಮಾತೆಂದರೆ; ಈಗಾಗಲೇ ಕನ್ನಡದಲ್ಲಿ ಕಾನೂನು ವಿವರಣೆ ಬರೆಯುವ ಲೇಖಕರಲ್ಲಿ ಈ ಹಿಂದಿನ ಪಾರಿಭಾಷಿಕ ಪದಗಳನ್ನು ಅನಾಮತ್ತಾಗಿ ಮುಂದುವರಿಸುವುದು ರೂಢಿಯಾಗಿದೆ. ಉದಾಹರಣೆಗೆ ಅಭಿರಕ್ಷೆ... ಇಂತಹ ಪದಗಳನ್ನು ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಹಿಡಿದಿಡುವ ಪ್ರಯತ್ನಗಳು ಆಗಬೇಕು. 

ADVERTISEMENT

ಜನಸಾಮಾನ್ಯರಿಗೆ ಕಾನೂನು ತಿಳುವಳಿಕೆ

ಲೇ: ವಿ.ಆರ್.ನಟಶೇಖರ್‌

ಪ್ರ: ಶ್ರೀ ರಾಮಕೃಷ್ಣ ಪ್ರಕಾಶನ

ಸಂ: 9448530432

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.