‘ವ್ಯಕ್ತಿ ಮತ್ತು ಚಿಂತನೆಗಳು’ ಶೀರ್ಷಿಕೆಯಡಿ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿಯು ಚಿಣ್ಣರಿಗೆ ಪ್ರಮುಖರ ಬದುಕನ್ನು ಪರಿಚಯಿಸುವ ಮಾಲಿಕೆ ತರುತ್ತಿದೆ. ಅದರಲ್ಲಿ ‘ಸಾವಿತ್ರಿಬಾಯಿ–ಪ್ರವರ್ತಕಿಯ ಪಯಣ’ ಕೂಡ ಒಂದು.
ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿಯಾದ ಬದಲಾವಣೆ ತಂದ ಸಾವಿತ್ರಿಬಾಯಿಯವರ ಬದುಕನ್ನು ಪರಿಚಯಿಸುವ ಚಿತ್ರರೂಪಿಕೆಯ ಕೃತಿ ಇದು. ಪಶ್ಚಿಮ ಬಂಗಾಳದ ಪಟುವಾ ಕಲಾವಿದರಾದ ಸುಮನ್ ಚಿತ್ರಕಾರ್ ಈ ಪುಟ್ಟ ಕೃತಿಯಲ್ಲಿ ಮೂಡಿಸಿರುವ ಚಿತ್ರಗಳು ಚಿಕ್ಕಮಕ್ಕಳನ್ನು ಥಟ್ಟನೆ ಸೆಳೆಯುವಂತಿವೆ.
ಜಯಶ್ರೀ ನಾಯರ್ ಅವರ ವಿನ್ಯಾಸಕ್ಕೂ ಶಹಬ್ಬಾಸ್‌ಗಿರಿ ಸಲ್ಲಬೇಕು. ಸಾವಿತ್ರಿಬಾಯಿ ಅವರು ಪ್ರವರ್ತಕಿ ಹೇಗೆ ಎನ್ನುವುದನ್ನು ಸಚಿತ್ರವಾಗಿ ನಿರೂಪಿಸುವ ಕೃತಿ ನೋಡಲು ಆಕರ್ಷಕವಾಗಿರುವುದರ ಜತೆಗೆ ಚಿಣ್ಣರು ಇನ್ನಷ್ಟು ಹುಡುಕಾಡಲು ಪ್ರೇರೇಪಿಸುತ್ತದೆ.
ಸಾವಿತ್ರಿಬಾಯಿ
ಪ್ರ: ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈ. ಲಿ.; ಸಹಯೋಗ: ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ
ಸಂ: 080-22161900
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.