ADVERTISEMENT

ಮೊದಲ ಓದು: ಹಂಸಾಕ್ಷರ– ಹಂಸಲೇಖ ಗೀತೆಗಳ ಅವಲೋಕನ

ಪ್ರಜಾವಾಣಿ ವಿಶೇಷ
Published 25 ನವೆಂಬರ್ 2023, 23:05 IST
Last Updated 25 ನವೆಂಬರ್ 2023, 23:05 IST
ಪುಸ್ತಕದ ಮುಖಪುಟ
ಪುಸ್ತಕದ ಮುಖಪುಟ   

ಕನ್ನಡ ಚಿತ್ರರಂಗದಲ್ಲಿ ಚಿತ್ರಸಾಹಿತಿಯಾಗಿ, ಸಂಗೀತ ನಿರ್ದೇಶಕರಾಗಿ ತಮ್ಮದೇ ಛಾಪು ಮೂಡಿಸಿದವರು ಹಂಸಲೇಖ. ರವಿಚಂದ್ರನ್‌–ಹಂಸಲೇಖ ಜೋಡಿಯ ಅನೇಕ ಸಿನಿಮಾದ ಹಾಡುಗಳು ಅಂದಿಗೂ, ಇಂದಿಗೂ ಸೂಪರ್‌ ಹಿಟ್‌. ಹಂಸಲೇಖರ ಇಂತಹ ಒಂದಷ್ಟು ಚಿತ್ರಗೀತೆಗಳನ್ನು ಅವಲೋಕಿಸುವ ಕೃತಿ ‘ಹಂಸಾಕ್ಷರ’.

ಕೃತಿಯ ಲೇಖಕರಾದ ಜಯರಾಮಾಚಾರಿ ಪ್ರಾರಂಭದಲ್ಲಿಯೇ ಹಂಸಲೇಖ ಹಾಡುಗಳ ಕುರಿತಾಗಿ ತಮಗಂಟಿದ ಗೀಳಿನ ಕುರಿತು ಹೇಳುತ್ತ, ‘ಈ ನಿಂಬೆ ಹಣ್ಣಿನಂತಾ ಹುಡುಗಿ ಬಂದ್ಳು...’, ‘ಬಂತು ಬಂತು ಬಂತು ಕರೆಂಟು ಬಂತು...’ ಮೊದಲಾದ ಗೀತೆಗಳನ್ನು ನೆನಪಿಸುತ್ತ ಹೋಗುತ್ತಾರೆ. ಕೃತಿಯಲ್ಲಿ ಹದಿನೈದು ಲೇಖನಗಳಿದ್ದು, ಹಂಸಲೇಖ ಸಾಹಿತ್ಯಕ್ಕಿರುವ ಶಕ್ತಿಯನ್ನು, ಅನೇಕ ಪದಗಳ ಒಳಾರ್ಥವನ್ನು ಕಟ್ಟಿಕೊಡುವ ಪ್ರಯತ್ನವಿದೆ.

‘‘ಒಂದು ನೆಲ್ಲು ಚೆಲ್ಲಿದರೆ ರಾಶಿ ಮಾಡುವ ಇವಳದೇನೂ ಕರುಣೆ ಪ್ರೀತಿಯೋ’ ಅಂತ ಬರೆದ ಹಂಸಲೇಖ ಅವರ ಕವಿತ್ವ, ಆಳವಾದ ದೇಸಿಪ್ರಜ್ಞೆ, ರಸಿಕಪ್ರಜ್ಞೆ, ನಾಡು, ನುಡಿಯ ಆಳ ಸತ್ವವನ್ನು ಅರಿಯಲು ಈ ಕೃತಿ ಕಿಟಕಿ’’ ಎಂದು ಕೃತಿಯ ಬೆನ್ನುಡಿಯಲ್ಲಿ ವಿಕಾಸ್‌ ನೇಗಿಲೋಣಿ ಬರೆದಿದ್ದಾರೆ.  

ADVERTISEMENT

ಹಂಸಾಕ್ಷರ ಲೇ: ಜಯರಾಮಾಚಾರಿ ಪ್ರ: ವೀರಲೋಕ ಸಂ: 7022122121 ದ: 160 ಪು: 140

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.