ADVERTISEMENT

ಮೊದಲ ಓದು: ಕೀಟ ಪ್ರಪಂಚದೊಳಗೊಂದು ವಿಸ್ಮಯಲೋಕ

ಪ್ರಜಾವಾಣಿ ವಿಶೇಷ
Published 23 ಜುಲೈ 2022, 21:30 IST
Last Updated 23 ಜುಲೈ 2022, 21:30 IST
ವಿಸ್ಮಯ ಕೀಟ ಪ್ರಪಂಚ
ವಿಸ್ಮಯ ಕೀಟ ಪ್ರಪಂಚ   

ಪಕ್ಷಿ, ಪ್ರಾಣಿ ಲೋಕದಂತೆಯೇ ಕೀಟ ಪ್ರಪಂಚದಲ್ಲೂ ಕಣ್ಣಿಗೆ ಕಾಣಿಸದ ಹಲವು ವಿಸ್ಮಯಗಳಿವೆ. ಇವುಗಳನ್ನು ಮ್ಯಾಕ್ರೊ ಲೆನ್ಸ್‌ ಮುಖಾಂತರ ನೋಡಿದವರು ಕೀಟಶಾಸ್ತ್ರಜ್ಞ, ವೃತ್ತಿಯಲ್ಲಿ ಕೃಷಿ ಅಧಿಕಾರಿಯಾಗಿರುವ ಡಾ.ನೂರ್‌ ಸಮದ್‌ ಅಬ್ಬಲಗೆರೆ. ಅವರು ‘ಪ್ರಜಾವಾಣಿ’ಯ ಸಹಪಾಠಿಗೆ ಬರೆದ ಅಂಕಣಗಳ ಸಂಗ್ರಹವೇ ಈ ಕೃತಿ.

ಪ್ರತೀ ಲೇಖನವೂ ತನ್ನ ಶೀರ್ಷಿಕೆಯಿಂದಲೇ ಓದುಗರನ್ನು ಸೆಳೆಯುತ್ತದೆ. ‘ನಗಾರಿ ಹೊಡೆಯುತ್ತಾ’ ಕೃತಿಗೆ ಆರಂಭ ನೀಡುವ ‘ಸಿಕಾಡ’ದಿಂದ ಹಿಡಿದು ‘ಎಲೆಸುರಳಿಯಲ್ಲಿ ವಿರಾಜಮಾನ’ವಾದ ಹುಳುವರೆಗಿನ ಕೀಟಲೋಕ ನೂರು ವಿಸ್ಮಯ ಲೋಕವನ್ನು ತೆರೆದಿಡುತ್ತದೆ. ಪ್ರತೀ ಕೀಟ ಹಾಗೂ ಅದರ ಲೋಕದ ಆಳ–ಅಗಲವನ್ನು ಅಂಗೈಯಲ್ಲಿ ಹಿಡಿದಿಟ್ಟು, ವಿಜ್ಞಾನದ ವಿಷಯವನ್ನು ಸಾಮಾನ್ಯ ಜ್ಞಾನದ ರೀತಿಯಲ್ಲಿ ಓದುಗರ ಎದುರಿಗೆ ಇರಿಸಿದ್ದಾರೆ ಲೇಖಕರು. ಜೀರುಂಡೆಯೂ ‘ಬಾಂಬ್‌’ ತಯಾರಿಸುತ್ತೆ ಎನ್ನುವ ವಿಷಯ ಯಾರಿಗೆ ಗೊತ್ತಿದೆ ಹೇಳಿ! ಗೆದ್ದಲು ಹುಳುವಿಗೆ ‘ಅನಕ್ಷರಸ್ಥ ಎಂಜಿನಿಯರ್‌’ ಪಟ್ಟ ಕೊಟ್ಟಿದ್ದೇಕೆ? ಹೀಗೆ ಪುಟ ತೆರೆದಂತೆ ಕೌತುಕದ ಕೀಟಲೋಕದೊಳಗೆ ಓದುಗರೂ ಉರುಳುತ್ತಾರೆ. ಕೀಟಜಗತ್ತಿನೊಳಗೆ ಚಿಟ್ಟೆಗಳಿಗೂ ಒಂದು ಸ್ಥಾನವಿದೆ. ಲೇಖನದಷ್ಟೇ ಛಾಯಾಚಿತ್ರಗಳೂ ಶಾರ್ಪ್‌ ಆಗಿವೆ. ಇವೆಲ್ಲವುಗಳ ಹಿಂದೆ ನೂರ್‌ ಅವರ ಕಣ್ಣುಗಳೇ ಇರುವುದು ವಿಶೇಷ. ವಿಜ್ಞಾನದ ವಿದ್ಯಾರ್ಥಿಗಳಿಗೆ ಈ ಕೃತಿ ಉಪಯುಕ್ತ.

ಕೃತಿ: ವಿಸ್ಮಯ ಕೀಟ ಪ್ರಪಂಚ–1

ADVERTISEMENT

ಲೇ: ಡಾ. ನೂರ್‌ ಸಮದ್‌ ಅಬ್ಬಲಗೆರೆ

ಪ್ರ: ಗೀತಾಂಜಲಿ ಪುಸ್ತಕ ಪ್ರಕಾಶನ

ಸಂ: 9449886390

ಪುಟ: 144

ದರ: 220

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.