ADVERTISEMENT

ಇಂದಿನಿಂದ ಈ 4 ರಾಶಿಗಳಿಗೆ ಅಶುಭ ಯೋಗ ಆರಂಭವಾಗಲಿದೆ

ಎಲ್.ವಿವೇಕಾನಂದ ಆಚಾರ್ಯ
Published 6 ಜನವರಿ 2026, 8:24 IST
Last Updated 6 ಜನವರಿ 2026, 8:24 IST
<div class="paragraphs"><p>ಚಿತ್ರ: ಎಐ</p></div>
   

ಚಿತ್ರ: ಎಐ

ಜ್ಯೋತಿಷ್ಯ ಶಾಸ್ತ್ರಕ್ಕೆ ಅನುಸಾರವಾಗಿ ಜನವರಿ 6ರಂದು ಶುಕ್ರ ಹಾಗೂ ಮಂಗಳ ಗ್ರಹಗಳು ಮಕರ ರಾಶಿಗೆ ಹತ್ತಿರವಾಗಲಿವೆ. ಇದು ಜನವರಿ 10 ರವರೆಗೆ ಇರಲಿದೆ. ಗ್ರಹಗಳ ಸೇನಾಧಿಪತಿಯಾದ ಮಂಗಳ ಮತ್ತು ಶುಕ್ರರ ಈ ಸಂಯೋಗದಿಂದ ನಾಲ್ಕು ರಾಶಿಯವರಿಗೆ ಅಶುಭ ಫಲಗಳು ಉಂಟಾಗುತ್ತದೆ ಆ ರಾಶಿಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

ಮೇಷ ರಾಶಿ

ADVERTISEMENT

ಮೇಷ ರಾಶಿಯವರಿಗೆ ಶುಕ್ರ ಮತ್ತು ಮಂಗಳನ ಸಂಯೋಗವು ಪ್ರಭಾವ ಬೀರಲಿದ್ದು. ಮೇಷ ರಾಶಿಯವರಿಗೆ ಅತಿಯಾದ ಕೋಪ, ಆತುರದಲ್ಲಿ ನಿರ್ಧಾರ ತೆಗೆದುಕೊಳ್ಳುವುದು. ಸಂಬಂಧಗಳಲ್ಲಿ ಬಿರುಕು ಹಾಗೂ ಆರೋಗ್ಯದಲ್ಲಿ ಏರಿಳಿತ ಕಂಡು ಬರುತ್ತದೆ.

ವೃಷಭ ರಾಶಿ

ವೃಷಭ ರಾಶಿಯವರು ಕುಟುಂಬದಲ್ಲಿ ಒತ್ತಡ ಎದುರಿಸಬೇಕಾಗುತ್ತದೆ. ಸಣ್ಣ ವಿಷಯಗಳಿಗೆ ಮನಸ್ತಾಪ ಉಂಟಾಗಲಿದೆ. ಹಣಕಾಸಿನ ವಿಚಾರದಲ್ಲಿ ಜವಾಬ್ದಾರಿ ತೆಗೆದುಕೊಳ್ಳುವುದು ಉತ್ತಮ. ಖರ್ಚು ವೆಚ್ಚಗಳು ಹೆಚ್ಚಾಗುತ್ತವೆ.

ತುಲಾ ರಾಶಿ

ಈ ರಾಶಿಯವರಿಗೆ ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಸಂಬಂಧಿಕರಿಂದ ನಿಂದನೆ, ಅಶಾಂತಿ, ಬೇರೆಯವರ ವಿಚಾರದಲ್ಲಿ ಮೂಗು ತೂರಿಸದೇ ಇರುವುದು ಉತ್ತಮ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ತಮ್ಮ ಕೋಪವನ್ನು ನಿಯಂತ್ರಿಸಿಕೊಳ್ಳುವುದು ಉತ್ತಮ. ಕೆಲಸದಲ್ಲಿ ಅಡೆತಡೆ ಉಂಟಾಗುವ ಸಾಧ್ಯತೆ ಇದೆ. ನಿರೀಕ್ಷಿತ ಫಲಿತಾಂಶ ಸಿಗದೆ ನಿರಾಸೆ ಉಂಟಾಗಬಹುದು. ವೈವಾಹಿಕ ಜೀವನದಲ್ಲಿ ಒತ್ತಡ ಹೆಚ್ಚಾಗಬಹುದು. ಕುಟುಂಬದ ವಿಚಾರದಲ್ಲಿ ಶಾಂತಿಯಿಂದ ವರ್ತಿಸುವುದು ಉತ್ತಮ. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.