
ಚಿತ್ರ: ಗೆಟ್ಟಿ
ಮಗುವಿಗೆ ಕಿವಿ ಚುಚ್ಚುವುದು, ತಲೆ ಕೂದಲು ತೆಗೆಯುವುದು ಸಾಮಾನ್ಯ ಕಾರ್ಯಕ್ರಮ. ಜ್ಯೋತಿಷದ ಅನುಸಾರವಾಗಿ, ಮಗು ಜನಿಸಿದ ಎಷ್ಟು ದಿನಗಳ ಬಳಿಕ ಕೂದಲು ತೆಗೆಸಬೇಕು ಹಾಗೂ ಕಿವಿ ಚುಚ್ಚಬೇಕು? ಎಂಬುದನ್ನು ತಿಳಿಯೋಣ.
ಮಗು ಜನಿಸಿದ 12ನೇ ದಿನ ಅಥವಾ 16ನೇ ದಿನಕ್ಕೆ ಕಿವಿ ಚುಚ್ಚುವುದು ಅಥವಾ ಕರ್ಣವೇದನ ಮಾಡಿಸುವುದು ಶ್ರೇಷ್ಠ ಎಂದು ಹೇಳಲಾಗುತ್ತದೆ. ಇದು ತಪ್ಪಿದ್ದಲ್ಲಿ 7ನೇ ಅಥವಾ 8ನೇ ತಿಂಗಳಲ್ಲಿ ಕಿವಿ ಚುಚ್ಚಿಸಬಹುದು.
ಚೌಳ, ಚೋಡಾಕರ್ಮ ಅಥವಾ ಕೂದಲು ತಗಿಸುವ ಪದ್ಧತಿ ಮಗುವಿಗೆ ಮೊದಲಿಗೆ ಬಾರಿಗೆ ಒಂದು ವರ್ಷದ ಒಳಗಾಗಿ ಕೂದಲು ತೆಗೆಸಬೇಕು ಎಂದು ಹೇಳಲಾಗುತ್ತದೆ. ಆದರೆ ಇದು ತಪ್ಪು ಆಚರಣೆ ಎಂದು ಜ್ಯೋತಿಷ ಹೇಳುತ್ತದೆ. ಮಗುವಿನ ಮೊದಲ ಕೂದಲ ತೆಗಿಸುವುದಕ್ಕೆ 3ನೇ ವರ್ಷ ಅಥವಾ 5ನೇ ವರ್ಷದ ಉತ್ತರಾಯಣದ ಪುಣ್ಯ ಕಾಲ ಸೂಕ್ತ ಎಂದು ಹೇಳಲಾಗುತ್ತದೆ. ದಕ್ಷಿಣಾಯಣದಲ್ಲಿ ಕೂದಲು ತೆಗೆಸಬಾರದು ಎಂದು ಶಾಸ್ತ್ರಗಳಲ್ಲಿ ಹೇಳಲಾಗುತ್ತದೆ.
ಇದರ ಜೊತೆಗೆ ಮಗು 5ನೇ ವರ್ಷದಲ್ಲಿದ್ದಾಗ ಶಾರದಾ ದೇವಿಯ ಸನ್ನಿಧಿಯಲ್ಲಿ ಉತ್ತರಾಯಣ ಪುಣ್ಯ ಕಾಲದಲ್ಲಿ ಅಕ್ಷರಭ್ಯಾಸವನ್ನು ಮಾಡಿಸಬೇಕು. ದಕ್ಷಿಣಾಯಣದಲ್ಲಿ ಅಕ್ಷರಾಭ್ಯಾಸವನ್ನು ಮಾಡಿಸಬಾರದು.
ಹೆಣ್ಣು ಮಗುವಾದರೆ, 5, 7, 9 ಹಾಗೂ 11ನೇ ತಿಂಗಳಿನಲ್ಲಿ ಅನ್ನದಾನ ಮಾಡಿಸುವುದು ಶ್ರೇಷ್ಠವೆಂದು ಹೇಳಲಾಗುತ್ತದೆ.
ಮಗುವಿಗೆ ತೊಟ್ಟಿಲು ತೂಗಿಸುವುದು 1, 3 ಅಥವಾ 5ನೇ ತಿಂಗಳಿನಲ್ಲಿ ತೊಟ್ಟಿಲು ಶಾಸ್ತ್ರ ಮಾಡಿಸುವುದು ಶಾಸ್ತ್ರ ಸಮ್ಮತವೆಂದು ಹೇಳಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.