ADVERTISEMENT

ಬಸನಗೌಡ ಯತ್ನಾಳ್ ಮತ್ತು ಸೂರ್ಯಗ್ರಹ: ಅಸಂಖ್ಯ ಸಾಮರ್ಥ್ಯವಿದ್ದರೂ ಹಿನ್ನಡೆ ಯಾಕೆ?

ಮಹಾಬಲಮೂರ್ತಿ ಕೊಡ್ಲೆಕೆರೆ
Published 4 ಡಿಸೆಂಬರ್ 2025, 5:35 IST
Last Updated 4 ಡಿಸೆಂಬರ್ 2025, 5:35 IST
<div class="paragraphs"><p>ಬಸನಗೌಡ ಪಾಟೀಲ್ ಯತ್ನಾಳ್</p></div>

ಬಸನಗೌಡ ಪಾಟೀಲ್ ಯತ್ನಾಳ್

   

ಸೂರ್ಯನ ಅನುಗ್ರಹದ ಕಾರಣದಿಂದಾಗಿಯೇ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕರ್ನಾಟಕದ ರಾಜಕೀಯದಲ್ಲಿ ತಮ್ಮದೇ ಆದ ಗಟ್ಟಿತನದಿಂದಾಗಿ ಶಕ್ತಿಯಾಗಿ ನಿಲ್ಲಲು ಸಾಧ್ಯವಿತ್ತು. ಈಗಲೂ ಯತ್ನಾಳ ಅವರು ಒಂಟಿ ಸಲಗವಾಗಿ ಹೋರಾಡಲು ಸಾಧ್ಯವಿಲ್ಲ ಎಂದೇನಲ್ಲ.‘ಅದರೆ..?’ ಈ ಆದರೆ ಎಂಬ ಉದ್ಗಾರವನ್ನು ಯತ್ನಾಳ ಅವರ ವಿರುದ್ಧವಾಗಿ ಚಂದ್ರನೇ ಕತ್ತಿ ಮಸೆಯುತ್ತಾ ಇರುತ್ತಾನೆ. ಸೂರ್ಯನ ವಿಚಾರದಲ್ಲಿ ತೊಂದರೆಯನ್ನು ನಿರ್ಮಿಸು ತ್ತ ಹೋಗುತ್ತಾನೆ. ಹಲವು ರೀತಿಯಲ್ಲಿ ಅಡ್ಡಡ್ಡ ರೀತಿಯಲ್ಲಿ ಕರಿ ನೆರಳು ಎದ್ದೆದ್ದು ನಿಲ್ಲುವ ಗೋಡೆಗಳನ್ನು ತಂದು ಸೂರ್ಯನನ್ನು ಮರೆ ಮಾಡುತ್ತಾನೆ. ಇದರಿಂದಾಗಿಯೇ ಮಹತ್ವದ ಇವರ ಶಕ್ತಿಯನ್ನು ಚಂದ್ರ ಇವರ ಪಾಲಿಗೆ ಬಹು ರೀತಿಯ ಉಪಯೋಗಕ್ಕೆ ಬರುವಂತೆ ಮಾಡುವುದರ ಬದಲು ಪೂರ್ತಿಯಾಗಿ ಯತ್ನಾಳರನ್ನು ಅನೇಕ ಮಿತಿಗಳಲ್ಲಿ ಕಟ್ಟಿ ಹಾಕುತ್ತಾನೆ.

ಅಸಂಖ್ಯ ಪ್ರಮಾಣದ ಇವರ ಬೆಂಬಲಿಗರಿದ್ದೂ ಇವರು ಬಳಲಿ ಬೆಂಡಾಗುವ ಸಂದರ್ಭಗಳನ್ನು ಏಕಾಏಕಿಯಾಗು ನಿರ್ಮಿಸಿ ಬಿಡುತ್ತಾನೆ.ಪ್ರಚಂಡ ಧೈರ್ಯಶಾಲಿಯಾದರೂ ಒಂಟಿಯಾಗಿ ನಡೆಸುವ ಹೋರಾಟಕ್ಕೆ ಬೆಲೆ ಇರದೇ ಹೋಗುತ್ತಿರುತ್ತದೆ. ಇದೇ ಕಾರಣದಿಂದಾಗಿ ಬಿಜೆಪಿ ಪಕ್ಷಕ್ಕೆ ಇವರೊಬ್ಬರು ಗಟ್ಟಿ ಶಕ್ತಿಯ ವ್ಯಕ್ತಿ ಆಗಿದ್ದರೂ ಪಕ್ಷದಿಂದಲೇ ಇವರನ್ನು ಉಚ್ಚಾಟಿಸುವ ವಿಚಾರ ಸಂಭವಿಸಲ್ಪಟ್ಟಿತು.

ADVERTISEMENT

ಇವರ ಜಾತಕ ಕುಂಡಲಿಯಲ್ಲಿ ಕೇತು ಗ್ರಹವೂ (ಇವರು ಮಾತಿನಲ್ಲಿ fire brand ಆಗಿದ್ದರೂ) ತಾಗಬೇಕಾದ ಕಡೆಗೆ ಗುಂಡು ಕರಾರುವಕ್ಕಾದ ರೀತಿಯಲ್ಲಿ ತಾಗದೆಯೇ, ಗುರಿ ತಪ್ಪಿ ಹೋಗುವ ಉಪದ್ವ್ಯಾಪವನ್ನು ನಡೆಸುತ್ತದೆ. ಹೀಗಾಗಿ ಇವರಿಂದಲೇ ಇವರ ಮಾತು ತುಸು ಜಾಸ್ತಿಯೇ ಆಗಿ, ಆಗಬೇಕಾದ ಪರಿಣಾಮ ಸಮತೋಲನ ತಪ್ಪುವಂತೆ ವರ್ತಮಾನವನ್ನು ಇವರ ಪಾಲಿಗೆ ತುಸು ಹೆಚ್ಚೇ ಪ್ರಮಾಣದಲ್ಲಿ ಕೆಡಿಸಿಯೇ ಬಿಡುತ್ತದೆ.ನೀಚ ಸ್ಥಿತಿಯಲ್ಲಿನ ಚಂದ್ರನೂ ಇವರ ಮಹತ್ತರ ತೂಕ ಹೇಗೆ ಸೂರ್ಯನಿಂದಾಗಿ ನಿಚ್ಚಳ ಪ್ರಖರತೆಯಲ್ಲಿ,ಮಿಂಚಿ ಕಂಗೊಳಿಸಬೇಕೋ ಅದನ್ನು ಮಂಕುಗೊಳಿಸುವ ಸಂಕುಚಿದ ಸಂದರ್ಭಕ್ಕೆ ದಾರಿ ಮಾಡಿ ಬಿಡುತ್ತಾನೆ.ಆಗ ಬೇಕಾದ ಲಾಭದ ಬದಲು ಇವರಿಗೇ ನಷ್ಟವನ್ನು ಒದಗಿಸುವ ವರ್ತಮಾನವನ್ನೇ ಸೃಷ್ಟಿಸುತ್ತಾನೆ‌.ಪೂರ್ತಿ ಪರದಾಟದ ಸ್ಥಾನದಲ್ಲಿ ಇವರನ್ನು ನಿಲ್ಲಿಸಿ ಬಿಡುತ್ತಾನೆ.ವಾಸ್ತವಕ್ಕೂ ಇವರಲ್ಲಿ ಹುದುಗಿರುವ ಭಿನ್ನವಾದ ಸಕಾರಾತ್ಮಕ ಶಕ್ತಿಯ ಹೋರಾಟದ ದಿಕ್ಕು ಪರಿಣಾಮದ ದೃಷ್ಟಿಯಿಂದ ದೂರ ಸರಿದು ನಿಲ್ಲುತ್ತದೆ.

ಇವರ ಕುಂಡಲಿಯಲ್ಲಿ ಶುಕ್ರ ಗ್ರಹ ಕೂಡ ಮಂಗಳನ ಯೋಗಕಾರಕ ಮಹಾ ಶಕ್ತಿಯನ್ನು ದುರ್ಬಲವಾಗಿಸುವ ನಕಾರಾತ್ಮಕ ನೆಲೆಯಲ್ಲಿ ಕ್ಷಿಪ್ರವಾಗಿ ತಂದು ಗೊಂದಲಕ್ಕೆ ಕಾರಣನಗುತ್ತಾನೆ. ಹೀಗೆಂದ ಮಾತ್ರಕ್ಕೆ ಯತ್ನಾಳ್ ಕೇವಲ ನಿಷ್ಪ್ರಯೋಜಕವಾದ ಧಾತುಗಳನ್ನು ಒಗ್ಗೂಡಿಸಿಕೊಂಡ ಒಬ್ಬ ದುರದೃಷ್ಟಕರ ಜನ ಪ್ರತಿನಿಧಿಯಲ್ಲ. ಇವರಲ್ಲಿ ಶನಿ ಮಹಾರಾಜನ ಮೂಲಕವಾಗಿ ಸಂಚಯಿಸಿದ ಎದುರಾಳಿಗಳನ್ನು ತತ್ತರಿಸುವಂತೆ ಮಾಡುವ ಅಪರೂಪದ ದೈತ್ಯ ಶಕ್ತಿಯಂತೂ ಇದೆ. ಆದರೆ ಯತ್ನಾಳ ಅವರ ಹೆಗಲ ಮೇಲೆ ಬೇರೆ ಯಾರೋ ಬಂದೂಕನ್ನು ಇರಿಸಿ ಯಾರ ವಿರುದ್ಧವೋ ಗುಂಡು ಹೊಡೆಯುವ ಕೆಲಸಕ್ಕೆ ಅಡಗಿ ನಿಂತಿರುತ್ತಾರೆ. ಹಾಗೆ ತನ್ನನ್ನು ಉಪಯೋಗಿಸಿಕೊಳ್ಳುವ ಹಾಗೆ, ಮಗದೊಬ್ಬರ ಬಗೆಗಾಗಿ ತನ್ನ ಹೆಗಲು ಕೊಡುವ ಕೆಲಸಕ್ಕೆಇವರು ಬರಿ ನೆಪ ಮಾತ್ರ.

ಹೀಗೆ ನಿಂತಾಗ ಹೊಡೆದ ಗುಂಡು ಮಾಡಬೇಕಾದ ತನ್ನ ಕೆಲಸದ ಪರಿಣಾಮವನ್ನು ಸರಿಯಾಗಿ ಮಾಡಿದರೂ ಅದರ ಕೀರ್ತಿ ಯತ್ನಾಳರಿಗೆ ಸಿಗದಂತಿರುತ್ತದೆ.ಗುರಿ ತಪ್ಪಿದರೆ ಮಾತ್ರ ಯತ್ನಾಳ ವ್ಯರ್ಥವಾಗಿ ತಾವೇ ಆ ಸಂದರ್ಭದ ಗಳಿಗೆಯಲ್ಲಿ ಬಲಿ ಪಶುವಾಗುವ ದುರ್ಭರ ಸ್ಥಿತಿ ತಲುಪಿ ಬಿಡುತ್ತಾರೆ.ಸದ್ಯಕ್ಕೆ ಇವರು ಈ ರೀತಿ ದುರ್ಭರ ಸ್ಥಿತಿ ತಲುಪಿದ್ದಾರೇನೋ ಎಂಬ ಸ್ಥಿತಿ ಸ್ಪಷ್ಟವಾಗಿದೆ.

ಶುಕ್ರ ಗ್ರಹನೂ ಖಳ ನಾಯಕ

ಯತ್ನಾಳರ ಜನ್ಮ ಕುಂಡಲಿಯಲ್ಲಿ ಚಂದ್ರ ಇವರಿಗೆ ಬೇಕಿರದ ಅವಸರದ ನಿರ್ಣಯ ತಾಳುವಂತೆ, ಹಾಗೆಯೇ ಆಡಿದ ಮಾತುಗಳ ಸೂಕ್ತ ನಿಯಂತ್ರಣ ಸಂಯೋಜನೆ ತಪ್ಪಿ ಇವರಿಗೆ ವಿಹ್ವಲತೆ ತಂದಿಡುವಂತೆ, ಪಕ್ಷದ ಜನರೇ ಸಂಪೂರ್ಣ ಇವರ ವಿರೋಧಿಗಳಾಗುವಂತೆ ಸನ್ನಿವೇಶಗಳನ್ನು ಆಗಾಗ ಹೆಚ್ಚೇ ತರುತ್ತಿರುತ್ತಾನೆ.ನಿಯಂತ್ರಣ ತಪ್ಪದಂತೆ ಹದವಾಗಿ ಇವರು ಗುಡುಗಿದರೆ ಬಹು ಉನ್ನತ ಮಟ್ಟದ ನಾಯಕರಾಗುವ ಮಹಾ ಬಲವನ್ನು ರಾಹು ಗ್ರಹವು ಇವರಿಗೆ

ಒದಗಿಸಲು ಸಶಕ್ತವಾಗಿ ಇವರ ಬೆಂಬಲಕ್ಕೆ ಇದ್ದೇ ಇರುತ್ತದೆ.ರಾಹು ಬೆಂಬಲ ಇದೆಯಾದರೂ,ಶುಕ್ರ ಗ್ರಹವೂ, ಚಂದ್ರ ಗ್ರಹದಂತೆ ಇವರಿಗೆ ಕುತ್ತು ತರುವ ವಿಚಾರಗಳಿಗೆ ವೇದಿಕೆ ಒದಗಿಸುತ್ತದೆ. ಕುಜ ಗ್ರಹದ ಬಲವೂ ಇವರಿಗೆ ಸೂಕ್ತವಾಗಿ ಸಿಗದಂತೆ ದುಷ್ಟ ಕೇತುವಿನಿಂದ ಹಲವಾರು ಸ್ವರೂಪದ ವಿಷದ ಕೊಂಡಿಗಳನ್ನು ಚಂದ್ರ ಹಾಗೂ ಶುಕ್ರ ಗ್ರಹಗಳುಸೃಷ್ಟಿಸುತ್ತಲೇ ಇರುತ್ತವೆ.

ಇದು ಸೃಷ್ಟಿ ಆಗದಂತೆ ಯತ್ನಾಳರು ವಿಶೇಷವಾಗಿ ವಾಸ್ತವವಾಗಿ ತನ್ನದೇ ಆದ ವಿಶೇಷ ಬಲ ಯಾವುದು ಎಂಬುದನ್ನು ಸ್ಪಷ್ಟವಾಗಿ ಗುರುತಿಸಿಕೊಳ್ಳಬೇಕು. ಈ ಮಾತು ವಿಶಿಷ್ಟವಾಗಿ ಮತದಾರರು,ಇವರು ನಂಬಿದ ಹಿಂದುತ್ವವನ್ನು, ಹಾಗೆಯೇ ಈ ಹಿಂದುತ್ವ ಭಾರತಕ್ಕೆ ಯಾಕೆ ಹೆಚ್ಚು ಅನಿವಾರ್ಯ ಎಂಬುದನ್ನು ಜನರಿಗೆ, ಮತದಾರರಿಗೆ ಸೂಕ್ತವಾಗಿ ತಿಳಿಸಿ ಹೇಳುವ ತಾಳ್ಮೆಯ ಮಾತುಗಳಿಂದ ಇವರಿಗೆ ಸಾಧ್ಯ ಆಗುವಂತಿರಬೇಕು.

ಆದರೆ ಶುಕ್ರ ಗ್ರಹವು, ಮಂಗಳ ಗ್ರಹವನ್ನು ಇವರ ಜಾತಕ ಕುಂಡಲಿಯಲ್ಲಿ ಇವರನ್ನು ಆವೇಶಕ್ಕೆ ನೂಕುವ ಉಪದ್ರವವನ್ನು ಎಡಬಿಡದೆ ನಡೆಸುತ್ತಿರುತ್ತದೆ. ಈ ಕಾರಣದಿಂದಾಗಿ ಉದ್ಭವಿಸಿಯೇ ತೀರುವ ಒತ್ತಡವನ್ನು ಯತ್ನಾಳ್ ಸೂಕ್ತವಾಗಿ ನಿಭಾಯಿಸಲೇ ಬೇಕಾಗಿದೆ. ವೈರಿಗಳಿಂದ ಅನೇಕ ರೀತಿಯ ಕಿರಿಕಿರಿಗಳನ್ನು ಎದುರಿಸಲೇ ಬೇಕಾದ ಸಂದರ್ಭ ಇವರ ಕುಂಡಲಿಯಲ್ಲಿ ಗರಿಷ್ಟ ಪ್ರಮಾಣದಲ್ಲಿ ಇದ್ದರೂ ವೈರಿಗಳಿಂದಲೇ ಇವರು ಮೇಲೇರುವ ಏಣಿಯನ್ನೂ ಪಡೆಯಲು ಸಾಧ್ಯವಿದೆ.ಅಂದರೆ ಮಾತು,ಇವರಿಗೆ ದೌರ್ಬಲ್ಯವಾಗದ ಸಂಯಮ ಸಂಯುಕ್ತ ಬಲಾಢ್ಯತೆ ಪಡೆಯಲು ಅವಕಾಶ ನೀಡಿರುವಾಗ ವೈರಿಗಳನ್ನು ಶಾಂತವಾಗಿ ನಿಭಾಯಿಸುವ ಚಾತುರ್ಯ ತೋರಿಸಬೇಕು.ಶಕ್ತಿಯುತ ಮಾತು,ವ್ಯವಧಾನದೊಡನೆ ಹರಳುಗಟ್ಟಿದರೆ ಯತ್ನಾಳ್ ಅವರ ಭವಿಷ್ಯ ಉಜ್ವಲವಿದೆ. ಇದೇ ಶಕ್ತಿಯುತ ಮಾತುಗಳಿಂದ ಇವರು ಭವಿಷ್ಯವನ್ನು ರೂಪಿಸಿಕೊಂಡರೆ ದೊಡ್ಡ ರೀತಿಯಲ್ಲಿ ಇವರು ಬೆಳೆದು ನಿಲ್ಲಬಹುದಾಗಿದೆ.

ಬುಧ ಗ್ರಹದಿಂದ ಹಲವು ಲಾಭಗಳು

ಬುಧ ಗ್ರಹವು ಇವರಿಗೆ ವಾಜಪೇಯಿಯವರು ಪ್ರಧಾನ ಮಂತ್ರಿಯಾಗಿದ್ದಾಗ ಕೇಂದ್ರ ಸರ್ಕಾರದ ಮಂತ್ರಿಯಾಗಿ ನಿಯುಕ್ತವಾಗುವ ಅವಕಾಶವನ್ನು ಸಣ್ಣ ವಯಸ್ಸಿನಲ್ಲಿಯೇ ಅನುಗ್ರಹಿಸಿತು. ಆದರೆ ಆಗಲೇ ಸಿಕ್ಕಿದ ಅಪೂರ್ವ ಅವಕಾಶವನ್ನು ವಿಸ್ತಾರವಾಗಿ ಬೆಳೆಸಿಕೊಳ್ಳಲು ಕೇತು ಗ್ರಹ ಅವಕಾಶ ಕೊಡಲಿಲ್ಲ. ಇದೀಗ ಜಾಗರೂಕತೆಯಿಂದ ಹೆಜ್ಜೆ ಇರಿಸಿದರಾದರೆ ಅನೇಕ ಸಕಾರಾತ್ಮಕ ಬಲವನ್ನು ಸದ್ಯ ಒಂಟಿ ಸಲಗವಾಗಿ ಯತ್ನಾಳರು ಪಡೆದು ಬೀಗಲು ಕಾಲ ಪಕ್ವವಾಗಿದೆ.ಕಾರಣಾಂತರಗಳಿಂದ ಬಿಜೆಪಿಯಿಂದ ಹೊರಕ್ಕೆ ಉಚ್ಚಾಟಿಸಲ್ಪಟ್ಟರೂ ಜನರಿಗೆ ಯತ್ನಾಳರ ಬಗ್ಗೆ ಅನ್ಯ ಕಾರಣಗಳಿಗಾಗಿನ ಬಲ ಇದೆ ಎಂಬುದು ಅನೇಕ ಸಂದರ್ಭಗಳಲ್ಲಿ ಸಾಬೀತಾಗಿದೆ.

‌ಜೀವನದಲ್ಲಿ ಹಾಸ್ಯ ಬೇಕು. ಆದರೆ ಅದೇ ಜೀವನ ಆಗಬಾರದು. ವಜ್ರದ ಕಾಠಿಣ್ಯತೆ ಇದೆ. ಕುಸುಮದ ಕೋಮಲತೆ ಕೂಡಾ ಇದೆ. ಇವನ್ನು ಬಳಸಿಕೊಂಡ ಮಾತು ಇವರು ಎಲ್ಲಿಯೇ ನಿಂತಿರಲಿ ಅಲ್ಲಿ ಶಕ್ತಿ ಆಗುತ್ತಾರೆ. ಇದು ಬುಧ ಗ್ರಹದ ಅನುಪಮ ಕಾರುಣ್ಯದ ಫಲವಾಗಿದೆ.

ಯತ್ನಾಳ್ ಒಮ್ಮೆ ಜೆಡಿಎಸ್ ಪಕ್ಷ ಕೂಡ ಸೇರಿದ್ದರು. ಅಲ್ಲಿಯೂ ಇವರಿಗೆ ಸರಿ ಬರಲಿಲ್ಲ. ಬಿಜೆಪಿ ಸೇರಿದರು ಆದರೆ ಬಿಜೆಪಿಯ ವಿನಾ ಒಂದು ಶಕ್ತಿ ಆಗದ ಯತ್ನಾಳ್, ಬಿಜೆಪಿಗೂ ತಾನು ಅನಿವಾರ್ಯ ಎಂಬುದನ್ನು ಮನದಟ್ಟಾಗಿಸಲು ಸಾಧ್ಯವಾಗಿಸಬೇಕು. ಇವರಿಗಿರುವ ಬುಧ ಬಲದ ಕಾರಣದಿಂದ ಈ ಅಂಶವನ್ನು ಸಾಬೀತು ಮಾಡಲು ಸಾಧ್ಯವಿದೆ. ಪೂರ್ತಿಯಾಗಿ ಕಾಲ ಪಕ್ವವಾಗುವವರೆಗೆ ಕೆಲವು ಮಟ್ಟದ ಹೊಂದಾಣಿಕೆಗೆ ಇವರು ಬದ್ಧಗೊಳ್ಳಲೆ ಬೇಕು.

ಇಲ್ಲದೇ ಹೋದರೆ ಸುಮಾರು ಇನ್ನೂ ಎರಡೂವರೆ ವರ್ಷಗಳ ಕಾಲ ಪಂಚಮ ಶನಿ ಕಾಟ ಎದುರಿಸುತ್ತಿರುವ ಯತ್ನಾಳ ಅವರು ಚಲಾವಣೆಗೆ ಇರದ ಶೂನ್ಯ ಸ್ಥಿತಿ ತಲುಪಕೂಡದು. ಗುರು ಗ್ರಹದ ಮತ್ತು ಬುಧ ಗ್ರಹದ ಅನುಗ್ರಹವಾದ ಮಾತಿನ ಬಲ ಕುಜ ಮತ್ತು ಶುಕ್ರ ಗ್ರಹದ ಕೇತು ಸರ್ಪ ಬಾಧಿತ ಸಂಯೋಜನೆಯ ಫಲವಾಗಿ ಹೇಗೆ ಬೇಕಾದಂತೆ ಆಡುವ ಮಾತಾಗಿ ಶಾಪವಾಗಬಾರದು.ಬದಲು ಅತುಳ ಬಲ ಶಕ್ತಿಯ ರಾಹುವಿನ ಅಂದರೆ ವಿಷ್ಣು ಮಾಯೆಯ ಶಕ್ತಿಯನ್ನು ಯತ್ನಾಳ್ ಪಡೆದರೆ ಇದೇ ಇವರ ಬಲ ಸಂಚಯನಕ್ಕೆ ಸಂಜೀವಿನಿಯಾಗುವ ಕಾರಣವಾಗಿ ರಾಜಕೀಯ ಕ್ಷಿತಿಜದಲ್ಲಿ ಇನ್ನೂ ಇಷ್ಟು ಎತ್ತರಕ್ಕೇರಲು ಸಾಧ್ಯ.

ನಾಯಕನಾಗಿ ಸ್ಥಾನ–ಮಾನ ಪಡೆಯಲು ಇವರ ಕುಂಡಲಿಯ ರಾಜ ಯೋಗವು ಸಾಕಷ್ಟು ಫಲದಾಯಕವಿದೆಯಾದ್ದರಿಂದ ಇವರಿಗೆ ಶುಭವು ಒದಗಿ ಬರಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.