ADVERTISEMENT

ಗುರು ಗ್ರಹ ಕಾರಕತ್ವ: ಧನಸ್ಸು, ಮೀನ ರಾಶಿಯ ಅಧಿಪತಿ ಗುಣಗಳ ಬಗ್ಗೆ ತಿಳಿದುಕೊಳ್ಳಿ

ಎಲ್.ವಿವೇಕಾನಂದ ಆಚಾರ್ಯ
Published 13 ಸೆಪ್ಟೆಂಬರ್ 2025, 7:28 IST
Last Updated 13 ಸೆಪ್ಟೆಂಬರ್ 2025, 7:28 IST
   

ಜ್ಯೋತಿಷ ಶಾಸ್ತ್ರದಲ್ಲಿ ಗ್ರಹಗಳ ಕಾರಕತ್ವ ತುಂಬಾ ಮುಖ್ಯವಾದುದು. ಎಂದರೆ ಪ್ರತಿ ಗ್ರಹವೂ ಕೆಲವು ನಿರ್ದಿಷ್ಟ ಅಂಶಗಳು, ಸಂಬಂಧಗಳು ಮತ್ತು ಜೀವನದ ಘಟನೆಗಳನ್ನು ಸಂಕೇತಿಸುವುದೇ ಅದರ ಕಾರಕತ್ವ. ಉದಾಹರಣೆಗೆ, ಸೂರ್ಯನು ತಂದೆ ಅಥವಾ ರಾಜನ ಸಂಕೇತವಾದರೆ, ಚಂದ್ರನು ತಾಯಿಯ ಸಂಕೇತ. ಈ ಕಾರಕತ್ವಗಳು ಜಾತಕದ ವಿಶ್ಲೇಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಏಕೆಂದರೆ ಅವು ನಿರ್ದಿಷ್ಟ ವಿಷಯಗಳ ಸಂಭವನೀಯತೆಯನ್ನು ಮತ್ತು ಅವುಗಳ ಫಲಿತಾಂಶಗಳನ್ನು ನಿರ್ಧರಿಸಲು ಸಹಾಯ ಮಾಡುತ್ತವೆ. ಈ ಕಾರಕತ್ವದ ಆಧಾರದಲ್ಲಿ ಮತ್ತು ಜಾತಕದಲ್ಲಿ ಅನ್ಯ ರಾಶಿಗಳ ಸ್ಥಿತಿಗತಿಯ ಆಧಾರದಲ್ಲಿ ಜ್ಯೋತಿಷದ ಲೆಕ್ಕಾಚಾರ ನಡೆಯುತ್ತದೆ. ಈ ಲೇಖನದಲ್ಲಿ ಧನಸ್ಸು ಮತ್ತು ಮೀನ ರಾಶಿಯ ಅಧಿಪತಿಯಾಗಿರುವ ಗುರು ಗ್ರಹ ಕಟಕವು ಮನುಷ್ಯನ ಜಾತಕದ ಮೇಲೆ ಪ್ರಭಾವ ಬೀರಬಹುದಾದ ಗುಣಗಳನ್ನು ತಿಳಿದುಕೊಳ್ಳೋಣ.

ಗುರು ಗ್ರಹ: ಧನಸ್ಸು ಮತ್ತು ಮೀನ ರಾಶಿಗೆ ಗುರು ಗ್ರಹ ಅಧಿಪತಿಯಾಗಿದ್ದಾನೆ. ಇದು ಮೀನ ರಾಶಿಯಲ್ಲಿ ಆಕಾಶ ತತ್ವ ಹಾಗೂ ಧನುಸ್ಸವಿನಲ್ಲಿ ಅಗ್ನಿ ತತ್ವ ಹೊಂದಿದೆ. ಇಲ್ಲಿ ಧನುಸ್ಸು ರಾಶಿಯೂ ಅಗ್ನಿಗೇ ಪ್ರಾಮುಖ್ಯತೆಯನ್ನು ಕೊಡುತ್ತೇವೆ. ಇದು ದೊಡ್ಡ ಅಗ್ನಿಯಾಗಿದ್ದು, ಗಾತ್ರದಲ್ಲಿಯೂ ದೊಡ್ಡದಾಗಿದೆ. ಈ ಗ್ರಹವದರು ಗುಂಡಾಗಿ ದಪ್ಪವಾಗಿರುತ್ತಾರೆ. ಒಳ್ಳೆಯ ವಿದ್ಯಾವಂತರು ಆಗಿರುತ್ತಾರೆ. ಬಹಳ ತೇಜಸ್ವಿಗಳು, ಧರ್ಮ ಪ್ರಚಾರಕರು ಹಾಗೂ ಧರ್ಮ ಭೋದಕರು ಸಹ ಆಗಿರುತ್ತಾರೆ. ಉಪಾಧ್ಯಾಯ ವೃತ್ತಿಯಲ್ಲಿ ಇವರೇ ಜಾಸ್ತಿ ಕಾಣಿಸುತ್ತಾರೆ. ಇವರುಗಳು ಧರ್ಮ ಛತ್ರಗಳನ್ನು ಕಟ್ಟುವರು ಆಗಿದ್ದಾರೆ.

ADVERTISEMENT

ಜನತಾ ಸೇವೆ, ಸಮಾಜ ಸೇವೆ ಜೊತೆಗೆ ಸಮಾಜ ಕಲ್ಯಾಣ ಜಾಸ್ತಿ ಮಾಡುತ್ತಿರುತ್ತಾರೆ. ಇವರು ಇರುವುದೇ ಲೋಕ ಕಲ್ಯಾಣ ಹಾಗೂ ಸಮಾಜ ಕಲ್ಯಾಣಕ್ಕಾಗಿ. ಬಡ ಜನರಿಗೆ ಆಶ್ರಯಗಳನ್ನು ಕಟ್ಟಿಸಿ ಕೊಡುತ್ತಾರೆ. ಬೇರವರ ತಪ್ಪನ್ನು ತಿದ್ದುವಂತ ಕೆಲಸ ಮಾಡುತ್ತಾರೆ. ಇದೇ ಬುದ್ಧಿ ಕುಂಭ ರಾಶಿಯವರಿಗುಂಟು. ಪ್ರಪಂಚಕ್ಕೆ ಕಾನೂನನ್ನು ಬದಲಾವಣೆ ಮಾಡುವವರು. ಉದಾಹರಣೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರಂತೆ.

ಪರಮ ದೈವ ಭಕ್ತರಾಗಿದ್ದು, ಜ್ಯೋತಿಷ್ಯಗಾರರಿಗೆ ಗುರುವಿನ ಅನುಗ್ರಹ ಇದ್ದಲ್ಲಿ ಬಹಳ ಒಳ್ಳೆಯದು. ಪುರೋಹಿತ ಕೆಲಸವನ್ನು ಮಾಡುವವರು ಇವರೇ ಜಾಸ್ತಿ. ಇವರು ಹಣಕಾಸು ಸಂಸ್ಥೆಯಾದ ರಿಸರ್ವ್ ಬ್ಯಾಂಕ್, ಬ್ಯಾಕಿಂಗ್ ಕ್ಷೇತ್ರದಲ್ಲಿ ಜಾಸ್ತಿ ಕಾಣಿಸಿಕೊಳ್ಳುತ್ತಾರೆ.

ಬುಧ ಗ್ರಹ ಹಣಕಾಸಿನ ವ್ಯವಹಾರವನ್ನು ಮಾಡುತ್ತಾರೆ. ಆದರೆ ಇವರುಗಳು ಈ ಸಂಸ್ಥೆಯಲ್ಲಿ ಕೆಲಸವನ್ನ ಮಾಡುತ್ತಿರುತ್ತಾರೆ. ಇವರುಗಳು ವೈದ್ಯಕೀಯ ವೃತ್ತಿಯಲ್ಲಿ ಕೂಡ ಜಾಸ್ತಿ ಕಾಣಸಿಗುತ್ತಾರೆ. ಕಾರಣ ಜನತಾ ಸೇವೆಯೇ ಜನಾರ್ಧನ ಸೇವೆ. ಗುರು ಋಣಾತ್ಮಕವಾದಲ್ಲಿ ಬೇರೆಯವರನ್ನು ಬೈಯುತ್ತಾರೆ. ಬೇರೆಯವರಿಗೆ ಶಾಪ ಹಾಕುತ್ತಾರೆ. ಇವರಿಗೆ ಹಳದಿ ಬಣ್ಣ ಹೆಚ್ಚು ಇಷ್ಟವಾಗುತ್ತದೆ. ಹೊಟ್ಟೆ ಕಿಚ್ಚು ಪಡುತ್ತಿರುತ್ತಾರೆ. ಇನ್ನೊಬ್ಬರಿಗೆ ತೊಂದರೆಗಳನ್ನು ಕೊಡುವುದು ಜಾಸ್ತಿ. ಇವರುಗಳು ತುಂಬಾ ಲಕ್ಷಣವಂತರು ಆಗಿರುತ್ತಾರೆ.

ರತ್ನ: ಪುಷ್ಯರಾಗ

ಸಂಖ್ಯೆ: 3

ಕಾರಕತ್ವ: ಪುತ್ರ

ಉಛ್ಚ ರಾಶಿ: ಕಟಕ ರಾಶಿ

ನೀಚ ರಾಶಿ: ಮಕರ ರಾಶಿ

ಉಛ್ಚಾಂಶ: 5

ದಶಾವರ್ಷ: 16 ವರ್ಷಗಳು

ದಿಕ್ಕು: ಈಶಾನ್ಯ

ಧಾನ್ಯ: ಕಡಲೆ

ಅಂಗಾಂಗ: ಕಿವಿ

ಕಾರಕ: ಕಫ

ದೃಷ್ಟಿ: 5, 7 ಮತ್ತು 90

ಮಿತ್ರ ಗ್ರಹಗಳು: ಸೂರ್ಯ, ಚಂದ್ರ ಮತ್ತು ಕುಜ

ಶತ್ರು ಗ್ರಹಗಳು: ಶುಕ್ರ ಮತ್ತು ಬುಧ

ಸಮ ಗ್ರಹ: ಶನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.