ADVERTISEMENT

Vastu Tips: ಮನೆಯಲ್ಲಿ ಕಾಮಧೇನು ಮೂರ್ತಿ ಇದ್ದರೆ ಸಾಕು ವಾಸ್ತುದೋಷ ಪರಿಹಾರ

ಎಲ್.ವಿವೇಕಾನಂದ ಆಚಾರ್ಯ
Published 20 ಡಿಸೆಂಬರ್ 2025, 12:40 IST
Last Updated 20 ಡಿಸೆಂಬರ್ 2025, 12:40 IST
<div class="paragraphs"><p>ಚಿತ್ರ: ಎಐ</p></div>
   

ಚಿತ್ರ: ಎಐ

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕಾಮಧೇನು ಮೂರ್ತಿ ಇದ್ದರೆ, ಮಾನಸಿಕ ಶಾಂತಿ ನಿಮ್ಮದಾಗಲಿದೆ ಎಂಬ ನಂಬಿಕೆ ಇದೆ. ಕಾಮಧೇನು ಶಾಂತಿಯ ಸಂಕೇತವಾಗಿದ್ದು, ದೇವಲೋಕದಿಂದ ಭೂಮಿಗೆ ಬಂದ ದೈವಾಂಶವೆಂದು ಪುರಾಣ ಕಥೆಗಳು ಹೇಳುತ್ತವೆ. ಈ ಮೂರ್ತಿ ಮನೆಯಲ್ಲಿದ್ದರೆ, ಆರ್ಥಿಕ ನಷ್ಟ ದೂರವಾಗಿ, ಆರೋಗ್ಯ ಹಾಗೂ ಲಕ್ಷ್ಮೀ ನೆಲೆಸುತ್ತಾಳೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. 

ಕಾಮಧೇನು ಮೂರ್ತಿ ಮನೆಯಲ್ಲಿರುವುದರಿಂದಾಗುವ ಉಪಯೋಗಗಳು

ADVERTISEMENT
  • ಕಾಮಧೇನು ಮೂರ್ತಿ ಇರುವ ಮನೆಗೆ ಯಾವುದೇ ತಾಂತ್ರಿಕ ದೋಷ ಉಂಟಾಗುವುದಿಲ್ಲ. ಮಾಠ–ಮಂತ್ರ ಹಾಗೂ ತಂತ್ರಗಳು ತಟ್ಟುವುದಿಲ್ಲ ಎಂಬ ನಂಬಿಕೆ ಇದೆ.

  • ಮನೆಯಲ್ಲಿ ಆಹಾರದ ಕೊರತೆ  ಇರುವುದಿಲ್ಲ. ಧನ, ಧಾನ್ಯ ಹೇರಳವಾಗಿ ಒದಗಿಬರುತ್ತದೆ. ಮನೆಯ ಸದಸ್ಯರುಗಳಲ್ಲಿ ಸಾಮರಸ್ಯ ಹೆಚ್ಚಾಗುತ್ತದೆ.

  • ಕಾಮಧೇನುವಿನ ಮೂರ್ತಿಯನ್ನು ಬೆಳಿಗ್ಗೆ ಎದ್ದ ತಕ್ಷಣ ನೋಡುವುದರಿಂದ ದೀರ್ಘಾಯುಷ್ಯ ನಿಮ್ಮದಾಗುತ್ತದೆ. 

  • ಸ್ವರ್ಗಾಧಿಪತಿಯಾದ ಇಂದ್ರನ ಆಸ್ಥಾನದಲ್ಲಿ ಕಾಮಧೇನುವಿದೆ ಎಂದು ಪುರಾಣ ಕಥೆಗಳು ಹೇಳುತ್ತವೆ.  

  • ವಾಸ್ತು ಶಾಸ್ತ್ರದ ಪ್ರಕಾರ ಕಾಮಧೇನುವಿನಲ್ಲಿ ಮುಕ್ಕೋಟಿ ದೇವತೆಗಳು ನೆಲೆಸಿರುತ್ತಾರೆ. ಆದ್ದರಿಂದ ನಮ್ಮ ಹಿಂದೂ ಧಾರ್ಮಿಕ ಪದ್ಧತಿಯ ಪ್ರಕಾರ ನಾವು ಕಾಮಧೇನುವನ್ನು ದೇವರೆಂದು ಪೂಜಿಸುತ್ತೇವೆ.

  • ಕಾಮಧೇನುವಿನಿಂದ ನಮಗೆ ಅಮೃತ ಸಮಾನವಾದ ಹಾಲು ದೊರೆಯುತ್ತದೆ.

  • ಕಾಮಧೇನುವಿನ ಗಂಜಲ, ಗಂಗಾ ಜಲದಷ್ಟು ಪವಿತ್ರವಾದದ್ದು ಎಂಬ ನಂಬಿಕೆ ಇದೆ.  

  • ಕಾಮಧೇನುವಿನ ಸಗಣಿಯಿಂದ ದೀಪ ತಯಾರಿಸಿ ದೇವರಿಗೆ ಬೆಳಗಿಸುವುದರಿಂದ ಶುಭಫಲಗಳು ಪ್ರಾಪ್ತಿಯಾಗುತ್ತವೆ ಎಂಬ ನಂಬಿಕೆ ಇದೆ. 

  • ಮನೆಯಲ್ಲಿ ಕಾಮಧೇನುವಿನ ಮೂರ್ತಿಯನ್ನು ಇಟ್ಟು ಪೂಜಿಸುವುದರಿಂದ ನಮ್ಮೆಲ್ಲಾ ದೋಷಗಳು ನಿವಾರಣೆ ಆಗುತ್ತದೆ ಎಂದು ಹೇಳಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.