ADVERTISEMENT

ನಿಮ್ಮ ತೋಟದಲ್ಲಿ ಈ ಗಿಡಗಳನ್ನು ಬೆಳೆಸಿ: ಅದೃಷ್ಟ ನಿಮ್ಮದಾಗುತ್ತೆ

ಎಲ್.ವಿವೇಕಾನಂದ ಆಚಾರ್ಯ
Published 24 ಅಕ್ಟೋಬರ್ 2025, 8:46 IST
Last Updated 24 ಅಕ್ಟೋಬರ್ 2025, 8:46 IST
   

ಮನೆಯಲ್ಲಿ ಕೆಲವು ವಸ್ತುಗಳು ಇದ್ದರೆ ಶುಭ ಎಂದು ಜ್ಯೋತಿಷ ಹೇಳುತ್ತದೆ. ಅದರಂತೆ ಮನೆಯ ಮುಂದೆ ಅಥವಾ ಮನೆಯ ಕೈತೋಟದಲ್ಲಿ ಕೆಲವು ಗಿಡಗಳನ್ನು ಬೆಳೆಸುವುದರಿಂದ ಶುಭ ಪ್ರಾಪ್ತಿಯಾಗಲಿದೆ ಎಂದು ಜ್ಯೋತಿಷಿಗಳಾದ ಎಲ್‌. ವಿವೇಕಾನಂದ ಆಚಾರ್ಯ ಅವರು ಹೇಳುತ್ತಾರೆ. ಹಾಗಾದರೆ ಅವು ಯಾವ ಮರಗಳು ಎಂಬುದನ್ನು ನೋಡೋಣ. 

ಹಲಸಿನ ಮರ:

ಹಲಸಿನ ಮರ ಬಾವಿಯ ಬಳಿ ಇದ್ದರೆ ಒಳ್ಳೆಯದು ಎಂದು ಜ್ಯೋತಿಷ ಹೇಳುತ್ತದೆ. ಹಲಸಿನ ಮರದ ಎಲೆಗಳು ಬಾವಿಯೊಳಗೆ ಬಿದ್ದರೆ ಅವು ಪಿಂಡಗಳಾಗಿ ಪರಿವರ್ತನೆ ಆಗುತ್ತವೆ. ಇದರಿಂದ ಪಿತೃ ದೇವತೆಗಳ ಆಶೀರ್ವಾದ ದೊರೆಯುತ್ತದೆ. ಆ ಕುಟುಂಬಕ್ಕೆ ಪಿತೃ ದೋಷ ಉಂಟಾಗುವುದಿಲ್ಲ ಎಂದು ಹೇಳಲಾಗುತ್ತದೆ. ಜೊತೆಗೆ ಹಲಸಿನ ಮರದಿಂದ ಬಾಗಿಲು, ಕಿಟಕಿಗಳನ್ನು ಮನೆಗೆ ಅಳವಡಿಸುವುದರಿಂದ ವಾಸ್ತುದೋಷ ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ.

ಅಮಾವಾಸ್ಯೆಯ ದಿನ ಹಲಸಿನ ಮರವನ್ನು ಪೂಜಿಸುವುದರಿಂದ ಸುಖ, ಸಂತೋಷ ಹಾಗೂ ಶಾಂತಿ ಲಭಿಸುತ್ತದೆ ಎಂದು ಹೇಳಲಾಗುತ್ತದೆ. 

ADVERTISEMENT

ನೆಲ್ಲಿಕಾಯಿ ಮರ:

ಮನೆಯ ಅಂಗಳದಲ್ಲಿ ನೆಲ್ಲಿಕಾಯಿ ಮರ ಇದ್ದರೆ, ಆಕಾಲಿನ ಮೃತ್ಯುವಿನಿಂದ ಪಾರಾಗುತ್ತಿರ ಎಂದು ನಂಬಲಾಗಿದೆ.

ನೆಲ್ಲಿಕಾಯಿ ತಿನ್ನುವುದರಿಂದ ದೀರ್ಘಕಾಲದಲ್ಲಿ ರೋಗದಿಂದ ಗುಣಮುಖರಾಗಬಹುದು. 

ನೆಲ್ಲಿಕಾಯಿಯ ನೀರಿನಿಂದ ಸ್ನಾನ ಮಾಡಿದರೆ ದರಿದ್ರ ನಿವಾರಣೆಯಾಗಿ, ಸಕಲ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ಜ್ಯೋತಿಷ ಹೇಳುತ್ತದೆ

ನೆಲ್ಲಿಕಾಯಿ ಮರ ಮನೆಯವರನ್ನು ಭೂತ, ಪ್ರೇತಾ ಹಾಗೂ ಪಿಚಾಚಿಗಳಿಂದ ರಕ್ಷಿಸುತ್ತದೆ ಎಂದು ನಂಬಲಾಗಿದೆ.  

ಏಕಾದಶಿಯ ತಿಥಿಯಂದು ನೆಲ್ಲಿಕಾಯಿ ಗಿಡದ ಕೆಳಗೆ ದೀಪ ಹಚ್ಚುವುದರಿಂದ ನಮ್ಮೆಲ್ಲ ಪಾಪಗಳು ನಾಶವಾಗುತ್ತವೆ.

ದಾಸವಾಳ ಗಿಡ:

ದಾಸವಾಳದ ಗಿಡ ನೆಡುವುದರಿಂದ ಸೋಮಾರಿತನ ನಾಶವಾಗಿ ಮನೆಯ ಮಕ್ಕಳು ಚುರುಕು ಬುದ್ಧಿ ಉಳ್ಳವರಾಗುತ್ತಾರೆ ಎಂದು ಹೇಳಲಾಗುತ್ತದೆ. 

ಬೇವಿನಮರ:

ಮನೆಯ ಅಂಗಳದಲ್ಲಿ ಬೇವಿನಮರವಿದ್ದರೆ ಶುಭವೆಂದು ಪರಿಗಣಿಸಲಾಗಿದೆ. ಇದನ್ನು ಸೂರ್ಯನಾರಾಯಣನ ಮರ ಎಂದು ಹೇಳಲಾಗುತ್ತದೆ. ಇದರಿಂದ ಸೂರ್ಯದೇವನ ಆಶೀರ್ವಾದ ಲಭಿಸುವುದರ ಜೊತೆಗೆ ಜಾತಕದಲ್ಲಿನ ರವಿದೋಷ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ. 

ಬಾಳೆ ಗಿಡ:

ಬಾಳೆ ಗಿಡವನ್ನು ಬೃಹಸ್ಪತಿ ಗಿಡವೆಂದು ಕರೆಯಲಾಗುತ್ತದೆ. ಇದರಿಂದ ಗುರುವಿನ ಆಶೀರ್ವಾದ ಹಾಗೂ ಮನೆ ಮಕ್ಕಳಿಗೆ ಜ್ಞಾನ ಲಭಿಸುತ್ತದೆ ಎಂದು ನಂಬಲಾಗಿದೆ. 

ತುಳಸಿ ಗಿಡ:

ತುಳಸಿ ಗಿಡ ಮನೆಯಲ್ಲಿದ್ದರೆ ಆ ಮನೆಗೆ ಲಕ್ಷ್ಮೀಯ ಕೃಪೆ ದೊರೆಯುತ್ತದೆ ಎಂಬ ಜ್ಯೋತಿಷಿ ಎಲ್‌. ವಿವೇಕಾನಂದ ಆಚಾರ್ಯ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.