
ಸಾಂದರ್ಭಿಕ ಚಿತ್ರ
ಚಿತ್ರ ಕೃಪೆ: ಪ್ರಜಾವಾಣಿ ಫೈಲ್
ಮಂಗಳ ದೋಷ ವ್ಯಕ್ತಿಯ ಜಾತಕಕ್ಕೆ ಅನುಸಾರವಾಗಿ ಲಗ್ನದಿಂದ ಬರುವಂತಹದ್ದು. 1, 4, 7, 8 ಮತ್ತು 12ನೇ ಮನೆಯಲ್ಲಿ ಮಂಗಳನಿದ್ದರೆ (ಕುಜ) ಮಂಗಳ ದೋಷ ಎಂದು ಹೇಳಲಾಗುತ್ತದೆ. ಅದೇ ರೀತಿ 7 ಮತ್ತು 8ನೇ ಮನೆಯಲ್ಲಿ ಮಂಗಳನಿದ್ದರೆ, ಅದನ್ನು ಮಂಗಳ ದೋಷದ ತೀವ್ರ ಪರಿಣಾಮ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಗಣಿಸಲಾಗಿದೆ.
ಜಾತಕಕ್ಕೆ ಗುರುವಿನ ದೃಷ್ಟಿ ಇದ್ದರೆ, ಮಂಗಳ ದೋಷದ ಪರಿಣಾಮ ಅಷ್ಟಾಗಿ ಇರುವುದಿಲ್ಲ ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ.
ಮಂಗಳ ದೋಷದ ಪರಿಣಾಮಗಳು:
ಮಂಗಳ ದೋಷ ಇರುವವರಿಗೆ ಮದುವೆಯಂತಹ ಶುಭಕಾರ್ಯದಲ್ಲಿ ವಿಳಂಬವಾಗುವುದು. ಮದುವೆಯಲ್ಲಿ ತೊಂದರೆ ಉಂಟಾಗುವುದು. ಸಂಬಂಧಗಳು ಮುರಿದು ಬೀಳುವುದು ಅಥವಾ ಗಂಡ ಹೆಂಡತಿಯಲ್ಲಿ ಹೊಂದಾಣಿಕೆ ಇಲ್ಲದೆ ಇರುವುದು ಹಾಗೂ ಇನ್ನೂ ಮುಂತಾದ ಸಮಸ್ಯೆಗಳು ಉದ್ಭವವಾಗುತ್ತದೆ.
ಇದಕ್ಕೆ ಪರಿಹಾರವೆಂದರೆ, ಜಾತಕದಲ್ಲಿ ಎಷ್ಟು ಪ್ರಮಾಣದಲ್ಲಿ ಮಂಗಳ ದೋಷವಿದೆ ಎಂದು ಸೂಕ್ತ ಜ್ಯೋತಿಷಿಗಳಿಂದ ತಿಳಿದುಕೊಳ್ಳಬೇಕು. ಕುಂಭ ವಿವಾಹ, ಕದಳಿ ವಿವಾಹ, ಮರು ಮಾಂಗಲ್ಯ ಧಾರಣೆ ಹಾಗೂ ಅಶ್ವತ್ಥ ವಿವಾಹ ಎಂಬ ಹಲವು ಪರಿಹಾರಗಳಿವೆ.
ವಧು ವರ ಇಬ್ಬರಲ್ಲೂ ಸಮಾನಾಂತರವಾಗಿ ಮಂಗಳ ದೋಷವಿದ್ದರೆ, ಮಂಗಳ ದೋಷದ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗುತ್ತದೆ.
ವಿವಾಹಕ್ಕೆ ಮುನ್ನ ವಧು ವರರ ಜಾತಕವನ್ನು ಸರಿಯಾಗಿ ಪರಿಶೀಲನೆ ಮಾಡಿಸುವುದು ಉತ್ತಮ.
ಈ ನಕ್ಷತ್ರಗಳಲ್ಲಿ ಜನಿಸಿದವರಿಗೆ ಮಂಗಳ ದೋಷ ಇರುವುದಿಲ್ಲ:
ಅಶ್ವಿನಿ, ಮೃಗಶಿರ, ಪುನರ್ವಸು, ಪುಷ್ಯ, ಆಶ್ಲೇಷ, ಉತ್ತರ ಪಲ್ಗುಣಿ, ಸ್ವಾತಿ, ಅನುರಾಧ, ಪೂರ್ವಾಷಾಢ, ಉತ್ತರಾಷಾಢ, ಶ್ರವಣ, ಉತ್ತರಭಾದ್ರ ಹಾಗೂ ರೇವತಿ, ನಕ್ಷತ್ರಗಳಲ್ಲಿ ಜನಸಿದವರಿಗೆ ಕುಜ ದೋಷ ಮಂಗಳ ದೋಷ ಉಂಟಾಗುವುದಿಲ್ಲ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.