ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಕಾರಕತ್ವ ತುಂಬಾ ಮುಖ್ಯವಾದುದು. ಎಂದರೆ ಪ್ರತಿ ಗ್ರಹವೂ ಕೆಲವು ನಿರ್ದಿಷ್ಟ ಅಂಶಗಳು, ಸಂಬಂಧಗಳು ಮತ್ತು ಜೀವನದ ಘಟನೆಗಳನ್ನು ಸಂಕೇತಿಸುವುದೇ ಅದರ ಕಾರಕತ್ವ. ಉದಾಹರಣೆಗೆ, ಸೂರ್ಯನು ತಂದೆ ಅಥವಾ ರಾಜನ ಸಂಕೇತವಾದರೆ, ಚಂದ್ರನು ತಾಯಿಯ ಸಂಕೇತ. ಈ ಕಾರಕತ್ವಗಳು ಜಾತಕದ ವಿಶ್ಲೇಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ
ಏಕೆಂದರೆ ಅವು ನಿರ್ದಿಷ್ಟ ವಿಷಯಗಳ ಸಂಭವನೀಯತೆಯನ್ನು ಮತ್ತು ಅವುಗಳ ಫಲಿತಾಂಶಗಳನ್ನು ನಿರ್ಧರಿಸಲು ಸಹಾಯ ಮಾಡುತ್ತವೆ. ಈ ಕಾರಕತ್ವದ ಆಧಾರದಲ್ಲಿ ಮತ್ತು ಜಾತಕದಲ್ಲಿ ಅನ್ಯ ರಾಶಿಗಳ ಸ್ಥಿತಿಗತಿಯ ಆಧಾರದಲ್ಲಿ ಜ್ಯೋತಿಷ್ಯದ ಲೆಕ್ಕಾಚಾರ ನಡೆಯುತ್ತದೆ. ಕಳೆದ ಲೇಖನದಲ್ಲಿ ಮಿಥುನ ಮತ್ತು ಕನ್ಯಾ ರಾಶಿಯ ಅಧಿಪತಿಯಾಗಿರುವ ಬುಧ ಗ್ರಹ ಮನುಷ್ಯನ ಜಾತಕದ ಮೇಲೆ ಪ್ರಭಾವ ಬೀರಬಹುದಾದ ಗುಣಗಳನ್ನು ತಿಳಿದುಕೊಳ್ಳೋಣ.
ಬುಧ ಗ್ರಹ ಮಿಥುನ ಮತ್ತು ಕನ್ಯಾ ರಾಶಿಗಳಿಗೆ ಅಧಿಪತಿಯಾಗಿರುತ್ತಾನೆ. ಈ ರಾಶಿಯವರು ಪಾದರಸದಂತೆ ಬಹಳ ಚುರುಕು ಸ್ವಭಾವದವರು. ಎಲ್ಲವುದರಲ್ಲಿ ಚುರುಕುತನ. ಕೇವಲ 5 ನಿಮಿಷಗಳಲ್ಲಿ ಇವರ ಸ್ನಾನ ಮುಗಿಯುತ್ತದೆ. ಕೇವಲ 3 ನಿಮಿಷಗಳಲ್ಲಿ ಇವರ ಊಟ ಮುಗಿಯುತ್ತೆ. ಮಾತು ಕೂಡ ಹಾಗೆಯೇ, ಒಳ್ಳೆಯ ಅರಳು ಉರಿದಂತೆ ಮಾತನಾಡುತ್ತಾರೆ. ಕಾರಣ ಬುಧನು ಸಂಪರ್ಕ ಗ್ರಹವಾಗಿದೆ. ಮಿಥುನದಲ್ಲಿ ಬುಧ ಗ್ರಹ ಧನಾತ್ಮಕ (+ವ್) ಮತ್ತು ಕನ್ಯಾದಲ್ಲಿ ಋಣಾತ್ಮಕ (-ವ್). ಮಿಥುನ ರಾಶಿ ವಾಯು ತತ್ವಕ್ಕೆ ಪ್ರಾಧಾನ್ಯ ಜಾಸ್ತಿ. ಕನ್ಯಾ ರಾಶಿ ಪೃಥ್ವಿ ತತ್ವಕ್ಕೆ ಅಷ್ಟಾಗಿ ಪ್ರಾಧಾನ್ಯ ಕೊಡುವುದಿಲ್ಲ. ಎಲ್ಲಾ ಪುರುಷ ರಾಶಿಗಳಲ್ಲಿ ಬುಧ ಗ್ರಹ ಶಕ್ತಿಶಾಲಿಯಾಗಿರುತ್ತಾರೆ. ಎಲ್ಲಾ ಸ್ತ್ರೀ ರಾಶಿಗಳಲ್ಲಿ ಬುಧ ಗ್ರಹ ಋಣಾತ್ಮಕವಾಗಿರುತ್ತವೆ. ಬುಧ ಗ್ರಹಣ ರಾಶಿಗಳಲ್ಲಿ ಸದಾ ಎನಾದರೊಂದು ಕಲಿಯುವ ಚಟ ಜಾಸ್ತಿ ಇರುತ್ತದೆ. ಆದರೆ ಬುಧನದ್ದು ಮಕ್ಕಳ ಸ್ವಭಾವ. ಎಷ್ಟೇ ವಯಸ್ಸಾದರೂ ಚಿಕ್ಕ ಮಕ್ಕಳಂತೆ ವರ್ತಿಸುತ್ತಾರೆ. ಒಳ್ಳೆಯ ಶೇಪ್ ಇರುವಂತಹವರು ಬುಧ ಗ್ರಹ.
ಬುಧ ಗ್ರಹನ ರಾಶಿಗಳಲ್ಲಿ ಕಾಲು ಮತ್ತು ದೇಹ ಒಂದೇ ಅಳತೆಯದ್ದಾಗಿರುತ್ತದೆ. ವ್ಯಾಪಾರ ಮನೋಭಾವ ಪ್ರತಿಯೊಂದರಲ್ಲಿಯೂ, ವರದಕ್ಷಿಣೆ ವಿಚಾರದಲ್ಲಿಯೂ ಕೂಡ ವ್ಯಾಪಾರ ಭಾವನೆ ಜಾಸ್ತಿ. ಬುಧ ಗ್ರಹವು ಬಹು ಬುದ್ಧಿವಂತ ಗ್ರಹವಾಗಿದೆ. ಗೂಢ ವಿದ್ಯಗಳನ್ನು ಅಧ್ಯಯನ ಮಾಡುವುದು ಬುಧ ಗ್ರಹನ ರಾಶಿಗಳಲ್ಲಿ ಜಾಸ್ತಿ ಕಾಣಬಹುದು. ಇವರಿಗೆ ಸಂಶೋಧನಾ ಮನೋಭಾವನೆ ಜಾಸ್ತಿಯಾಗುತ್ತದೆ. ಬುಧ ಗ್ರಹನ ರಾಶಿಗಳಲ್ಲಿ ಹಣ ಕಾಸಿನ ವ್ಯವಹಾರಗಳನ್ನ ಮಾಡುವವರು, ಅದೇ ಗುರು ಗ್ರಹ ಹಣ ಕಾಸಿನ ಸಂಸ್ಥೆಯಲ್ಲಿ ಕೆಲಸವನ್ನ ಮಾಡುವವರು. ಯಾವಾಗಲೂ ಹೊಸತನ್ನೇ ಬಯಸುತ್ತಾ ಇರುತ್ತಾರೆ. ಹಳೆಯದನ್ನು ನೆನಪಿಸಿಕೊಳ್ಳಲು ಇಷ್ಟಪಡುವುದಿಲ್ಲ. ಎಲ್ಲಾ ಕಲೆಗಳಲ್ಲಿ (ನೃತ್ಯ, ಸಂಗೀತ, ಇತ್ಯಾದಿ) ಜಾಸ್ತಿ ಅಭಿರುಚಿ ಇರುತ್ತದೆ. ಸಾಹಿತ್ಯದಲ್ಲಿಯೂ ಇವರುಗಳು ಅಭಿರುಚಿಯನ್ನ ತೋರಿಸುವವರು ಆಗಿರುತ್ತಾರೆ. ಒಳ್ಳೆಯ ಬರವಣಿಗೆಗಾರರು, ಒಳ್ಳೆಯ ಜ್ಯೋತಿಷ್ಯಗಾರರು ಆಗಿರುತ್ತಾರೆ. ಯಾವುದೇ ಕ್ರೀಡೆಯಾದರು ಇವರುಗಳು ಮುಂದಿರುತ್ತಾರೆ. ಈ ಆಟಗಳಿಗೆ ಬೇಕಾಗುವ ಎನರ್ಜಿಯನ್ನ ಕೊಡುವ ಗ್ರಹ ಮಾತ್ರ ಕುಜ. ಇವರು ಕಾಣಲು ಸಣ್ಣಕ್ಕೆ, ಉದ್ದಕ್ಕೆ ಇರುತ್ತಾರೆ. ಸೊರಗಿ ಹೋದವರಂತೆ ಕಾಣಿಸುತ್ತಾರೆ. (ಇವುಗಳಲ್ಲಿ ಬುಧ ಮತ್ತು ಶುಕ್ರನ ಪಾತ್ರ ಬಹುದೊಡ್ಡದು.) ಇವರೊಬ್ಬರು ಉತ್ತಮ ಪ್ರಾಧ್ಯಾಪಕರು ಆಗಿರುತ್ತಾರೆ.
ಅಧಿಕ ಭೂಮಿ, ಹಣ, ಒಡವೆಗಳ ಸಂಗ್ರಹ ಜಾಸ್ತಿ ಇರುತ್ತದೆ. ವಾಹನಗಳನ್ನೂ ಸಂಗ್ರಹ ಮಾಡುವಲ್ಲಿ ಎತ್ತಿದ ಕೈ. ಮ್ರಧು ಭಾಷೆಗಳು, ಜಗಳ ಆಡೋದಕ್ಕೆ ಇಷ್ಟ ಪಡುವುದಿಲ್ಲ. ಕಾರಣ ಇದು ನಪುಂಸಕ ಗ್ರಹವಾಗಿದೆ. ಆದರೆ ಮೋಸ ಮಾಡುವುದರಲ್ಲಿ ಎತ್ತಿದ ಕೈ. ಇವರ ಮುಖದಲ್ಲಿ ಮುಗ್ಧತೆ ಜಾಸ್ತಿ ಇರುತ್ತದೆ. ಇದೇ ಬುಧನು ಋಣಾತ್ಮಕನಾಗಿದ್ದಲ್ಲಿ ಚರ್ಮ ರೋಗ, ಅಜೀರ್ಣತೆ ಜಾಸ್ತಿ ಇರುತ್ತದೆ. ಬುಧನು ಅವರನ್ನ ಕುಂತಲ್ಲೇ ಕುಳಿತಿರುವಂತೆ ಮಾಡುತ್ತಾನೆ.
ಬಣ್ಣ: ಗಿಳಿ, ಹಸಿರು.
ರತ್ನ: ಪಚ್ಚೆ ಅಥವಾ ಪನ್ನ.
ದೊಡ್ಡ ತರದ: ಮೋಡೆಲಿಂಗಿಗೆ ಬುಧನೇ ಅಧಿಪತಿ.
ಸಂಖ್ಯೆ: 5
ಕಾರಕತ್ವ: ಕರ್ಮ
ಉಛ್ಚ ಕ್ಷೇತ್ರ: ಕನ್ಯಾ ರಾಶಿ.
ಉಛ್ಚಾಂಶ: 15.
ನೀಚ ಕ್ಷೇತ್ರ: ಮೀನ ರಾಶಿ.
ದಶಾ ವರ್ಷ: 17 ವರ್ಷ ಗಳು
ಮೂಲ ತ್ರಿಕೋಣ: ಕನ್ಯಾ ರಾಶಿ.
ಅಂಗಾಂಗ: ಚರ್ಮ.
ಒಂದು ರಾಶಿಯಿಂದ ಇನ್ನೊಂದು ರಾಶಿಗೆ 1 ತಿಂಗಳು.
ಧಾನ್ಯ: ಹೆಸರು ಕಾಳು.
ದಿಕ್ಕು: ಉತ್ತರ.
ಕಾರಕ: ತ್ರಿದೋಷ.
ಲೋಹ: ಸೀಸ
ಮಿತ್ರ ಗ್ರಹಗಳು: ಸೂರ್ಯ ಮತ್ತು ಶುಕ್ರ
ಶತ್ರು: ಚಂದ್ರ
ಸಮ ಗ್ರಹ: ಶನಿ, ಕುಜ ಮತ್ತು ಗುರು ಗ್ರಹ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.