
ಎಐ ಚಿತ್ರ
ರಾಶಿಫಲಗಳ ಪ್ರಕಾರ ಜನವರಿ 4ರಂದು (ಇಂದು) ರವಿ ಪುಷ್ಯ ಯೋಗವಿದೆ. ಈ ಯೋಗದಿಂದಾಗಿ ಕೆಲವು ರಾಶಿಗಳಿಗೆ ಶುಭಫಲ ಕೂಡಿ ಬರಲಿದೆ. ಜ್ಯೋತಿಷ್ಯದ ಪ್ರಕಾರ ಈ ದಿನ ಸೂರ್ಯನ ಅನುಗ್ರಹ ದೊರೆಯಲಿದೆ. ಯಾವೆಲ್ಲಾ ರಾಶಿಗಳಿಗೆ ಶುಭಯೋಗ ಕೂಡಿ ಬರಲಿದೆ ಎಂಬುದನ್ನು ತಿಳಿಯೋಣ.
ವೃಷಭ ರಾಶಿ: ರವಿ ಪುಷ್ಯ ಯೋಗದಿಂದ ವೃಷಭ ರಾಶಿಯವರಿಗೆ ಆರ್ಥಿಕ ಸಂಕಷ್ಟ ಪರಿಹಾರವಾಗಲಿದೆ. ನಿಮ್ಮ ಕುಟುಂಬದೊಂದಿಗೆ ಸಂತೋಷದ ಸಮಯವನ್ನು ಕಳೆಯುವೀರಿ. ಉದ್ಯೋಗದಲ್ಲಿ ಏರುಪೇರಾಗುವ ಸಾಧ್ಯತೆ ಹೆಚ್ಚು. ಸೂರ್ಯನಿಗೆ ಅರ್ಘ್ಯ ನೀಡುವುದರಿಂದ ಶುಭಫಲ ಪಡೆಯಬಹುದು.
ಕಟಕ ರಾಶಿ: ಈ ರಾಶಿಯವರಿಗೆ ಉದ್ಯೋಗಾವಕಾಶ ದೊರೆಯಲಿದೆ. ಕುಟುಂಬದಲ್ಲಿ ಕಲಹ ಅಥವಾ ಗಂಡ ಹೆಂಡತಿಯ ನಡುವೆ ಜಗಳವಾಗುವ ಸಾಧ್ಯತೆ ಇದೆ. ಆದಷ್ಟು ತಾಳ್ಮೆ, ಸಂಯಮದಿಂದ ಇರಿ. ಹೊಸ ಕೆಲಸ ಆರಂಭಿಸಿದರೆ ಯಶಸ್ಸು ಲಭಿಸುತ್ತದೆ. ಹಿರಿಯರ ಆಶೀರ್ವಾದ ಪಡೆದು ಮುಂದೆ ಹೋಗುವುದು ಸೂಕ್ತ. ಶಿವನಿಗೆ ಜೇನು ತುಪ್ಪದ ಅಭಿಷೇಕ ಮಾಡುವುದು ಉತ್ತಮ.
ಕನ್ಯಾ ರಾಶಿ: ಈ ರಾಶಿಯವರಿಗೆ ಹೊಸ ಭರವಸೆ ಮೂಡಲಿವೆ. ಸಕಾರಾತ್ಮಕ ಬದಲಾವಣೆಗಳನ್ನು ಹೊಂದುವಿರಿ. ಆಸ್ತಿ ಹಾಗೂ ಗೃಹ ನಿರ್ಮಾಣಕ್ಕೆ ಶುಭಯೋಗವಿದೆ. ವಿದೇಶ ಪ್ರಯಾಣ ಸಾಧ್ಯತೆ ಇದೆ. ಈ ದಿನ ಗಣೇಶನಿಗೆ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡುವುದರಿಂದ ಇನ್ನಷ್ಟು ಶುಭವಾಗಲಿದೆ.
ವೃಶ್ಚಿಕ ರಾಶಿ: ಈ ರಾಶಿಯವರಿಗೆ ರವಿ ಪುಷ್ಯ ಯೋಗದಿಂದ ಗೌರವ, ಖ್ಯಾತಿ ಹಾಗೂ ಪ್ರತಿಷ್ಠೆ ಹೆಚ್ಚಾಗಲಿದೆ. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ. ಸ್ನೇಹಿತರ ಸಂಪೂರ್ಣ ಬೆಂಬಲವನ್ನು ಪಡೆಯುವಿರಿ. ಆರೋಗ್ಯದ ಸಮಸ್ಯೆ ದೂರವಾಗುತ್ತವೆ. ಮನೆಯಲ್ಲಿ ನಾರಾಯಣನಿಗೆ ಪೂಜೆ ಸಲ್ಲಿಸಿದರೆ ಇನ್ನಷ್ಟು ಶುಭಪ್ರಾಪ್ತಿಯಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.