
ಬೆಳಿಗ್ಗೆ ಬೇಗ ಏಳುವ ಅಭ್ಯಾಸ ಹತ್ತಾರು ಲಾಭಗಳನ್ನು ತಂದುಕೊಡುತ್ತದೆ. ಜ್ಯೋತಿಷದ ಪ್ರಕಾರ ಸೂರ್ಯೋದಯಕ್ಕೆ ಮುನ್ನ ಬರುವ ಮುಹೂರ್ತವನ್ನು ಬ್ರಾಹ್ಮಿ ಮುಹೂರ್ತ ಎಂದು ಕರೆಯಲಾಗುತ್ತದೆ. ಈ ಮುಹೂರ್ತವು ಬೆಳಿಗ್ಗೆ ಏಳಲು ಅತ್ಯಂತ ಶುಭಕರ.
ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ದಿನಚರಿಯನ್ನು ಪ್ರಾರಂಭಿಸುವುದರಿಂದ ಜೀವನದಲ್ಲಿ ಯಶಸ್ಸು ಲಭಿಸುತ್ತದೆ.
ಸೂರ್ಯೋದಯದ ವಾತಾವರಣವು ಆಕರ್ಷಕವಾಗಿದ್ದು, ಹಕ್ಕಿಗಳ ಚಿಲಿಪಿಲಿಯಿಂದ ಕೂಡಿರುತ್ತದೆ. ಇದು ಹೊಸ ದಿನದ ಆರಂಭಕ್ಕೆ ಸ್ಫೂರ್ತಿ ನೀಡುತ್ತದೆ.
ಈ ಮುಹೂರ್ತದಲ್ಲಿ ಏಳುವುದರಿಂದ ಸಕಾರಾತ್ಮಕ ಶಕ್ತಿಯನ್ನು ಪಡೆದುಕೊಳ್ಳಬಹುದೆಂದು ಹೇಳಲಾಗುತ್ತದೆ.
ಹಿಂದೂ ಧರ್ಮದ ಗ್ರಂಥಗಳ ಪ್ರಕಾರ, ಬ್ರಾಹ್ಮಿ ಮುಹೂರ್ತದಲ್ಲಿ ಮಲಗುವುದು ಆರೋಗ್ಯದ ದೃಷ್ಟಿಯಿಂದ ಹಾನಿಕಾರಕ ಎಂದು ಹೇಳಲಾಗಿದೆ.
ಬ್ರಾಹ್ಮಿ ಮುಹೂರ್ತದಲ್ಲಿ ವ್ಯಕ್ತಿ ತನ್ನ ಜೀವನಕ್ಕೆ ಸಂಬಂಧಿಸಿದ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವುದರ ಕಡೆಗೆ ಯೋಚಿಸಿ ಆದರ ಕಾರ್ಯ ಸಾಧನೆಗೆ ಶ್ರಮಿಸಿದರೆ ಒಳಿತಾಗುತ್ತದೆ.
ಈ ಸಮಯದಲ್ಲಿ ಮನುಷ್ಯನ ಮಿದುಳು ಹೆಚ್ಚು ಸಕ್ರಿಯವಾಗಿದ್ದು, ಆಲೋಚನೆ ಹಾಗೂ ಅಭ್ಯಾಸಗಳಿಗೆ ಸೂಕ್ತ ಸಮಯಯವಾಗಿದೆ.
ಈ ಮುಹೂರ್ತದಲ್ಲಿ ಸ್ನಾನ ಮಾಡಿ ದೇವರನ್ನು ಪೂಜಿಸಿದರೆ ಶುಭಫಲ ದೊರೆಯುತ್ತವೆ ಎಂಬ ನಂಬಿಕೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.