
ಚಿತ್ರ: ಗೆಟ್ಟಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಶಿಗಳಿಗೆ ಅನುವಾಗಿ ಕೆಲವು ಬಣ್ಣಗಳು ಅದೃಷ್ಟ ತಂದುಕೊಡುತ್ತವೆ. ಹಾಗೆ ಬಣ್ಣಗಳು ಅದೃಷ್ಟದ ಸಂಕೇತ ಎಂಬ ನಂಬಿಕೆಯೂ ಇದೆ.
ಮೇಷ ರಾಶಿ: ಕೆಂಪು, ಕಿತ್ತಲೆ ಮತ್ತು ಹಳದಿ ಬಣ್ಣಗಳು ಮೇಷ ರಾಶಿಯವರಿಗೆ ಅದೃಷ್ಟವನ್ನು ತಂದುಕೊಡುತ್ತವೆ. ಈ ಬಣ್ಣಗಳು ಶಕ್ತಿ, ಉತ್ಸಾಹ ಮತ್ತು ಧೈರ್ಯವನ್ನು ಪ್ರತಿನಿಧಿಸುತ್ತದೆ.
ವೃಷಭ ರಾಶಿ: ಹಸಿರು ಮತ್ತು ಗುಲಾಬಿ ಬಣ್ಣಗಳು ಈ ರಾಶಿಯವರಿಗೆ ಶುಭಕರವಾಗಿವೆ. ಇವು ಸಮೃದ್ಧಿ, ಶಾಂತಿ ಮತ್ತು ಪ್ರೀತಿಯನ್ನು ಪ್ರತೀಕವಾಗಿವೆ.
ಮಿಥುನ ರಾಶಿ: ಹಳದಿ ಮತ್ತು ತಿಳಿ ನೀಲಿ ಬಣ್ಣಗಳು ಈ ರಾಶಿಯವರಿಗೆ ಅದೃಷ್ಟವನ್ನು ನೀಡುತ್ತವೆ. ಇವು ಬುದ್ದಿವಂತಿಕೆಯ ಮಾತುಗಾರಿಕೆ ಮತ್ತು ಹೊಂದಿಕೊಳ್ಳುವಿಕೆಯನ್ನು ಪ್ರತಿನಿಧಿಸುತ್ತದೆ.
ಕಟಕ ರಾಶಿ: ಬಿಳಿ ಮತ್ತು ಬೆಳ್ಳಿ ಬಣ್ಣ ಈ ರಾಶಿಯವರಿಗೆ ಶುಭಕರವಾಗಿದೆ. ಇವು ಶುದ್ಧ ಭಾವನೆ ಮತ್ತು ಅಂತ ಪ್ರಜ್ಞೆಯನ್ನು ಸೂಚಿಸುತ್ತದೆ.
ಸಿಂಹ ರಾಶಿ: ಕಿತ್ತಲೆ, ಕೆಂಪು ಮತ್ತು ಚಿನ್ನದ ಬಣ್ಣಗಳು ಈ ರಾಶಿಯವರಿಗೆ ಅದೃಷ್ಟ ತಂದುಕೊಡುವ ಬಣ್ಣಗಳಾಗಿವೆ. ಶಕ್ತಿ, ನಾಯಕತ್ವ ಮತ್ತು ಆತ್ಮವಿಶ್ವಾಸವನ್ನು ಈ ಬಣ್ಣಗಳು ಪ್ರತಿನಿಧಿಸುತ್ತವೆ.
ಕನ್ಯಾ ರಾಶಿ: ಹಸಿರು ಮತ್ತು ಕಂದು ಅದೃಷ್ಟ ತರುವ ಬಣ್ಣಗಳಾಗಿವೆ. ಇವು ಪ್ರಾಯೋಗಿಕ ವಿಶ್ಲೇಷಣೆ ಮತ್ತು ಅಭಿವೃದ್ಧಿಯನ್ನು ಸೂಚಿಸುತ್ತದೆ.
ತುಲಾ ರಾಶಿ: ಗುಲಾಬಿ ಮತ್ತು ತ್ರಿಮೀಧಿ ಬಣ್ಣಗಳು ಈ ರಾಶಿಯವರಿಗೆ ಅದೃಷ್ಟವನ್ನು ತಂದುಕೊಡುತ್ತವೆ. ಇವು ಸಮತೋಲನ, ಸಾಮರಸ್ಯ ಮತ್ತು ಪ್ರೀತಿಯನ್ನು ಪ್ರತಿನಿಧಿಸುತ್ತದೆ.
ವೃಶ್ಚಿಕ ರಾಶಿ: ಕೆಂಪು ಮತ್ತು ಕಪ್ಪು ಬಣ್ಣಗಳು ಈ ರಾಶಿಯವರಿಗೆ ಶುಭಕರವಾಗಿವೆ. ತೀವ್ರತೆ, ಶಕ್ತಿ ಮತ್ತು ರಹಸ್ಯವನ್ನು ಇವು ಸೂಚಿಸುತ್ತದೆ.
ಧನಸ್ಸು ರಾಶಿ: ಹಳದಿ ಮತ್ತು ನೇರಳೆ ಬಣ್ಣಗಳು ಈ ರಾಶಿಯವರಿಗೆ ಅದೃಷ್ಟದಾಯಕವಾಗಿವೆ. ಈ ಬಣ್ಣಗಳು ಅದೃಷ್ಟ, ಜ್ಞಾನ ಮತ್ತು ಆಧ್ಯಾತ್ಮಿಕತೆಯನ್ನು ಪ್ರತಿನಿಧಿಸುತ್ತದೆ.
ಮಕರ ರಾಶಿ: ಕಂದು ಮತ್ತು ಕಪ್ಪು ಬಣ್ಣಗಳು ಈ ರಾಶಿಯವರಿಗೆ ಶುಭ ಬಣ್ಣಗಳಾಗಿವೆ. ಇವು ಶಿಸ್ತು, ಜವಾಬ್ದಾರಿ ಮತ್ತು ಸ್ಥಿರತೆಯನ್ನು ಸೂಚಿಸುತ್ತದೆ.
ಕುಂಭ ರಾಶಿ: ಈ ರಾಶಿಯವರಿಗೆ ನೀಲಿ ಮತ್ತು ಹಸಿರು ಬಣ್ಣಗಳು ಅದೃಷ್ಟ ತಂದುಕೊಡುತ್ತವೆ. ಇವು ನಾವೀನ್ಯತೆ ಸ್ವಾತಂತ್ರ್ಯ ಮತ್ತು ಮಾನವೀಯತೆಯನ್ನು ಪ್ರತಿನಿಧಿಸುತ್ತದೆ.
ಮೀನ ರಾಶಿ: ತಿಳಿ ಹಸಿರು ಮತ್ತು ನೇರಳೆ ಬಣ್ಣಗಳು ಈ ರಾಶಿಯವರಿಗೆ ಶುಭಕರ. ನಿರ್ವಹಣೆಯ ಕಲ್ಪನೆ ಮತ್ತು ಆಧ್ಯಾತ್ಮಿಕತೆಯನ್ನು ಸೂಚಿಸುತ್ತವೆ ಎಂದು ಜ್ಯೋತಿಷ ಶಾಸ್ತ್ರದಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.