ADVERTISEMENT

ಗೌರಿ ಹಬ್ಬ: ಆಚರಣೆ, ಪೂಜೆ ಹೇಗೆ? ಸೂಕ್ತ ಮುಹೂರ್ತ ಯಾವುದು? ಇಲ್ಲಿದೆ ವಿವರ

ಎಲ್.ವಿವೇಕಾನಂದ ಆಚಾರ್ಯ
Published 23 ಆಗಸ್ಟ್ 2025, 12:50 IST
Last Updated 23 ಆಗಸ್ಟ್ 2025, 12:50 IST
   

ಭಾದ್ರಪದ ಮಾಸದ ಆರಂಭದೊಂದಿಗೆ, 26.8. 2025 ರಂದು ಮಂಗಳವಾರ, ಗೌರಿ ಹಬ್ಬವು ಬರುತ್ತದೆ. ಈ ಹಬ್ಬವು ಮಳೆಯಿಂದ ನೆನೆದ ಧರೆಯು ಬಸಿರಾಗಿ ಹಸಿರು ಬೆಳೆಯನ್ನು ಹೊರ ತರುತ್ತದೆ ಎಂಬುವುದು ಗೌರಿ ಮಾತೆಯ ಪ್ರಕೃತಿ ಸಂಕೇತ. ಈ ಕಾರಣದಿಂದ ಗೌರಿ ದೇವಿಗೆ ಹಸಿರು ಸೀರೆಯನ್ನುಡಿಸಿ ಸಂತಾನದಾತೆ ಎಂದು ಪೂಜಿಸುತ್ತಾರೆ.

ಪುರಾಣ ಕಥೆಗಳ ಪ್ರಕಾರ ಗೌರಿಯ ಸುಬ್ರಹ್ಮಣ್ಯ ಮತ್ತು ಗಣಪತಿ ಪುತ್ರರು. ಗಣಪತಿಯನ್ನು ಶಿವನಗಣಗಳ ನಾಯಕ ಎಂದು ಕರೆಯುತ್ತಾರೆ.

ಸ್ವರ್ಣ ಗೌರಿ ಪೂಜೆ :– (ಆ. 25) ಮಂಗಳವಾರ ತದಿಗೆ ತಿಥಿ ಪ್ರಾರಂಭ ಆಗಿ, ಸೋಮವಾರ ಘಟಿಕಾ:12:42(ಹಗಲು:11:19am)ರಿಂದ, ಘಟಿಕಾ:15:1( ಹಗಲು12:15pm ರವರೆಗೆ ) 2025 ಘಟಿಕಾ:15:1( ಹಗಲು12:15pm ರವರೆಗೆ ) ಆ. 26ಕ್ಕೆ ತಿಥಿ ಮುಕ್ತಾಯವಾಗುತ್ತದೆ.

ADVERTISEMENT

ಗೌರಿ ಹಬ್ಬದ ಪೂಜಾ ಮಹೂರ್ತ :– ಬೆಳಿಗ್ಗೆ:06.08am ರಿಂದ 08.37am ರವರೆಗೆ ಇರುತ್ತದೆ. ಈ ಸಮಯದಲ್ಲಿ ಗೌರಿ ಪೂಜೆ ಮಾಡುವವರು ಬಾಗಿನ ನೀಡಿದರೇ ಒಳಿತು ಆಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.