ADVERTISEMENT

ಟೊಯೊಟಾ ‘ಯಾರಿಸ್‌’ ಫೇಸ್‌ಲಿಫ್ಟ್‌ ಮಾರುಕಟ್ಟೆಗೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 11:15 IST
Last Updated 6 ಸೆಪ್ಟೆಂಬರ್ 2019, 11:15 IST
ಟೊಯೊಟಾ ಯಾರಿಸ್
ಟೊಯೊಟಾ ಯಾರಿಸ್   

ಬೆಂಗಳೂರು:ಟೊಯೊಟಾ ಕಿರ್ಲೋಸ್ಕರ್ ಮೋಟರ್ ಕಂಪನಿಯು ತನ್ನ ಐಷಾರಾಮಿ ಸೆಡಾನ್ ‘ಯಾರಿಸ್‌’ನ ಫೇಸ್‌ಲಿಫ್ಟ್‌ ಅವತರಣಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಯಾರಿಸ್ ಭಾರತದ ಮಾರುಕಟ್ಟೆಗೆ ಬಂದು ಒಂದು ವರ್ಷ ತುಂಬಿದ ಸಂಭ್ರಮದಲ್ಲೇ ಕಂಪನಿಯು ಫೇಸ್‌ಲಿಫ್ಟ್‌ ಅವತರಣಿಕೆಯನ್ನು ಬಿಡುಗಡೆ ಮಾಡಿದೆ.

ಯಾರಿಸ್‌ನ ಅಂದವನ್ನು ಮತ್ತು ಯಾರಿಸ್‌ನಲ್ಲಿನ ಪ್ರಯಾಣದ ಆರಾಮವನ್ನು ಹೆಚ್ಚಿಸುವಂತಹ ಬದಲಾವಣೆಗಳನ್ನು ಮಾಡಲಾಗಿದೆ. ದೇಶದ ಎಲ್ಲಾ ಡೀಲರ್‌ಶಿಪ್‌ಗಳಲ್ಲಿ ಬುಕ್ಕಿಂಗ್‌ ಮಾಡಬಹುದು ಎಂದು ಟೊಯೊಟಾ ಹೇಳಿದೆ.

ದೇಶದ ಎಲ್ಲೆಡೆ ಮೂಲ ಮ್ಯಾನುಯೆಲ್ಅವತರಣಿಕೆಯ ಎಕ್ಸ್‌ಷೋರೂಂ ಬೆಲೆ ₹ 8.65 ಲಕ್ಷದಷ್ಟಿದೆ. ಟಾಪ್‌ಎಂಡ್‌ ಸಿವಿಟಿ ಅವತರಣಿಕೆಯ ಎಕ್ಸ್‌ಷೋರೂಂ ಬೆಲೆ ₹ 13.17 ಲಕ್ಷದಷ್ಟಿದೆ.

ADVERTISEMENT

ಫೇಸ್‌ಲಿಫ್ಟ್‌ನಲ್ಲಿ ಏನೇನಿದೆ...

* ಯಾರಿಸ್‌ನ ಹೊರಬಣ್ಣಕ್ಕೆ ‘ಡ್ಯುಯೆಲ್‌ ಟೋನ್‌’ ಸ್ಪರ್ಶ ನೀಡಲಾಗಿದೆ. ಯಾರಿಸ್‌ನ ದೇಹದ ಬಣ್ಣ ಒಂದಾಗಿದ್ದರೆ, ಅದರ ರೂಫ್‌ನ ಬಣ್ಣ ಬೇರೆಯದ್ದಾಗಿರುತ್ತದೆ. ಇದು ಯಾರಿಸ್‌ಗೆ ಆಕರ್ಷಕ ನೋಟ ನೀಡಿದೆ

*ಯಾರಿಸ್‌ನ ಗ್ರಿಲ್‌ಗೆ ಗ್ಲಾಸ್ಸೀ ಬ್ಲ್ಯಾಕ್‌ ಸ್ಪರ್ಶ ನೀಡಲಾಗಿದೆ. ‘ಟಿ’ ಎಂಬ್ಲೆಮ್‌ಗೆ ಕ್ರೋಮ್‌ ಬಣ್ಣ ನೀಡಲಾಗಿದೆ. ಇದು ಎದ್ದು ಕಾಣುವಂತಿದೆ. ಯಾರಿಸ್‌ನ ರಿಯರ್ ವ್ಯೂ ವಿಂಗ್‌ ಮಿರರ್‌ನ ಕವಚಕ್ಕೂ ಗ್ಲಾಸ್ಸೀ ಬ್ಯ್ಲಾಕ್‌ ಬಣ್ಣ ನೀಡಲಾಗಿದೆ. ಒಟ್ಟಾರೆ ಈ ಬದಲಾವಣೆಗಳು ಯಾರಿಸ್‌ನ ಅಂದವನ್ನು ಹೆಚ್ಚಿಸಿವೆ

* ದುಬಾರಿ ಬೆಲೆಯ ಚರ್ಮದ ಹೊದಿಕೆ ಇರುವ ಸೀಟ್‌ಗಳನ್ನು ನೀಡಲಾಗಿದೆ. ಸ್ಟೀರಿಂಗ್ ವ್ಹೀಲ್ ಮತ್ತು ಗಿಯರ್ ಶಿಫ್ಟರ್‌ ನಾಬ್‌ಗೂ ಇದೇ ಗುಣಮಟ್ಟದ ಚರ್ಮದ ವ್ರ್ಯಾಪ್‌ ನೀಡಲಾಗಿದೆ. ಇದು ಸ್ಟೀರಿಂಗ್‌ ವ್ಹೀಲ್‌ ಮತ್ತು ಗಿಯರ್ ಶಿಫ್ಟರ್‌ ನಾಬ್‌ಗೆ ಮೃದುತ್ವವನ್ನು ನೀಡಿದೆ. ಇದರಿಂದ ಚಾಲನೆ ಆರಾಮದಾಯಕವಾಗಲಿದೆ ಎಂದು ಕಂಪನಿ ಹೇಳಿದೆ

*ಸೆಂಟರ್‌ ಕಣ್ಸೋಲ್‌ನ ವಿನ್ಯಾಸವನ್ನು ಬದಲಿಸಲಾಗಿದೆ. ಮೊದಲೇ ಇದ್ದ ವಾಟರ್‌ಫಾಲ್‌ ವಿನ್ಯಾಸದ ಕಾಕ್‌ಪಿಟ್‌ನ ಅಂದವನ್ನು ಹೊಸ ಸೆಂಟರ್‌ ಕನ್ಸೋಲ್‌ ಹೆಚ್ಚಿಸಿದೆ

*ಡೈಮಂಡ್‌ ಕಟ್‌ ಅಲಾಯ್‌ ವ್ಹೀಲ್‌ ನೀಡಲಾಗಿದೆ. ಇದು ಕಾರಿನ ಅಂದಕ್ಕೆ ಪ್ರೀಮಿಯಂ ಗರಿಮೆ ನೀಡುತ್ತದೆ

ಹಲವು ಮೊದಲುಗಳ ‘ಯಾರಿಸ್‌’

ವರ್ಷದ ಹಿಂದೆ ಭಾರತೀಯ ಮಾರುಕಟ್ಟೆಗೆ ಬಂದಿದ್ದ ಯಾರಿಸ್‌ ಹಲವು ಮೊದಲುಗಳ ಹೆಗ್ಗಳಿಕೆ ಪಡೆದಿತ್ತು. ಬೆಂಗಳೂರಿನ ಬಿಡದಿಯಲ್ಲಿರುವ 2ನೇ ಘಟಕದಲ್ಲಿ ತಯಾರಾಗುವ ಯಾರಿಸ್‌ ಕಂಪನಿಯ ಮೊದಲ ಪ್ರೀಮಿಯಂ ಎಂಟ್ರಿ ಲೆವೆಲ್ ಸೆಡಾನ್ ಆಗಿದೆ. ಪೆಟ್ರೋಲ್‌ ಎಂಜಿನ್‌ನಲ್ಲಿ ಮಾತ್ರ ಯಾರಿಸ್ ಲಭ್ಯವಿದೆ. 6 ಗಿಯರ್‌ಗಳ ಮ್ಯಾನುಯೆಲ್ ಮತ್ತು 7 ಗಿಯರ್‌ಗಳ ಸಿವಿಟಿ ಟ್ರಾನ್ಸ್‌ಮಿಷನ್‌ ಆಯ್ಕೆ ಲಭ್ಯವಿದೆ.

* ಟಾಪ್‌ಎಂಡ್‌ ಅವತರಣಿಕೆಯಲ್ಲಿ 7 ಏರ್‌ಬ್ಯಾಗ್‌ಗಳಿವೆ. ಇದು ಈ ವರ್ಗದಲ್ಲೇ ಹೆಚ್ಚು. ಪ್ರವೇಶಮಟ್ಟದ ಅವತರಣಿಕೆಯಲ್ಲಿ ಮೂರು ಏರ್‌ಬ್ಯಾಗ್‌ಗಳಿವೆ. ಇದೂ ಸಹ ಈ ವರ್ಗದಲ್ಲಿ ಮೊದಲು

* ಯಾರಿಸ್‌ನ ಐದೂ ಸೀಟ್‌ಗಳಿಗೆ ಮೂರು ಪಾಯಿಂಟ್‌ಗಳ ಸೀಟ್‌ಬೆಲ್ಟ್‌ ನೀಡಲಾಗಿದೆ

* ಎಲೆಕ್ಟ್ರಿಕಲ್ ಬ್ರೇಕ್‌ ಡಿಸ್ಟ್ರುಬ್ಯೂಷನ್ (ಎಬಿಡಿ), ಆ್ಯಂಟಿಲಾಕ್ ಬ್ರೇಕ್‌ ಸಿಸ್ಟಂ (ಎಬಿಎಸ್‌) ಮತ್ತು ಬ್ರೇಕ್‌ ಅಸಿಸ್ಟ್‌ (ಬಿಎ) ಲಭ್ಯವಿದೆ

* ಹಿಲ್‌ ಸ್ಟಾರ್ಟ್‌ ಅಸಿಸ್ಟ್, ವೆಹಿಕಲ್‌ ಸ್ಟೆಬಿಲಿಟ್ ಕಂಟ್ರೋಲ್‌

* ಟೈರ್‌ ಪ್ರೆಷರ್ ಮ್ಯಾನೇಜ್‌ಮೆಂಟ್‌ ಸಿಸ್ಟಂ

* ಹಿಂಬದಿ ಮತ್ತು ಮುಂಬದಿಯಲ್ಲಿ ಪರ್ಕಿಂಗ್ ಸೆನ್ಸಾರ್‌ಗಳು

* ಅತಿವೇಗದ ಎಚ್ಚರಿಕೆ ಸವಲತ್ತು

* ಧ್ವನಿ ನಿಯಂತ್ರಣದ ಸವಲತ್ತು ಇರುವ ಇನ್ಫೊಟೈನ್‌ಮೆಮಟ್‌ ಸಿಸ್ಟಂ

* ರೂಫ್‌ ಎ.ಸಿ. ವೆಂಟ್‌

* 8 ರೀತಿಯಲ್ಲಿ ಸಂಯೋಜಿಸಿಕೊಳ್ಳಬಹುದಾದ ಚಾಲಕನ ಪವರ್ ಸೀಟ್‌

* ಮಳೆ ಸಂದರ್ಭದಲ್ಲಿ ತನ್ನಿಂದ ತಾನೇ ಚಾಲೂ ಆಗುವ ವೈಪರ್‌

* ಕ್ರೂಸ್‌ ಕಂಟ್ರೋಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.