ADVERTISEMENT

ಎಂಜಿ ಮೋಟಾರ್ಸ್‌ನಿಂದ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಬಿಡುಗಡೆ

ಎಂಜಿ ಕಾಮೆಟ್ (MG Comet) ಎಂಬುದು ಹೊಸ ಇವಿ ಕಾರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಏಪ್ರಿಲ್ 2023, 15:36 IST
Last Updated 26 ಏಪ್ರಿಲ್ 2023, 15:36 IST
ಎಂಜಿ ಕಾಮೆಟ್
ಎಂಜಿ ಕಾಮೆಟ್   

ನವದೆಹಲಿ: ‘ಎಂಜಿ ಮೋಟಾರ್ಸ್ ಇಂಡಿಯಾ’ ಕಂಪನಿ ಬುಧವಾರ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಎಂಜಿ ಕಾಮೆಟ್ (MG Comet) ಎಂಬುದು ಹೊಸ ಇವಿ ಕಾರ್ ಆಗಿದ್ದು, ಇದರ ಆರಂಭಿಕ ಬೆಲೆ ಎಕ್ಸ್ ಶೋ ರೂಂ ₹ 7.98 ಲಕ್ಷ ಎಂದು ಕಂಪನಿ ತಿಳಿಸಿದೆ.

ಎಂಜಿ ಕಾಮೆಟ್ ಎಂಜಿ ಮೋಟರ್ಸ್‌ನ ಎರಡನೇ ಇವಿ ಕಾರ್ ಆಗಿದ್ದು ಇದಕ್ಕೂ ಮುನ್ನ ₹24 ಲಕ್ಷ ಬೆಲೆಯ ZS ಇವಿ ಈಗಾಗಲೇ ಮಾರುಕಟ್ಟೆಯಲ್ಲಿದೆ. ಈ ಕಾಮೆಟ್ ಇವಿ ಕಾರು, ಟಾಟಾ ಮೋಟರ್ಸ್‌ನ ಟಿಯಾಗೊ ಇವಿ ಕಾರಿಗೆ ಪ್ರತಿಸ್ಪರ್ಧಿಯಾಗಲಿದೆ ಎನ್ನಲಾಗಿದೆ. ಕಾಮೆಟ್ ಕೇವಲ ಒಂದು ಕಾರಲ್ಲ, ಅದು ಹೊಸ ಅನುಭೂತಿ ನೀಡಲಿದೆ ಎಂದು ಎಂಜಿ ಮೋಟಾರ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಚಬ್ಬಾ ಹೇಳಿದ್ದಾರೆ.

ADVERTISEMENT

ಕಾಮೆಟ್ ಒಂದು ಪರಿಪೂರ್ಣ ಜಿಎಸ್ಇವಿ ಆಗಿದ್ದು, ಜಾಗತಿಕವಾಗಿ 10 ಲಕ್ಷ ಗ್ರಾಹರಕನ್ನು ತ್ವರಿತವಾಗಿ ಕಂಡಿದೆ ಎಂದು ಚಬ್ಬಾ ಹೇಳಿದ್ದಾರೆ.

ಕಾಮೆಟ್ 17.3 KWH lithium-ion ಬ್ಯಾಟರಿ ಹೊಂದಿದ್ದು, ಒಮ್ಮೆ ಚಾರ್ಜ್ ಮಾಡಿದರೆ ಗರಿಷ್ಠ 230 ಕಿಮೀ ಪ್ರಯಾಣಿಸಬಹುದು. ಹ್ಯಾಚ್‌ಬ್ಯಾಕ್ ಮಾದರಿಯ ಈ ಕಾರಿನಲ್ಲಿ ಮುಂದುಗಡೆ 2 ಏರ್‌ಬ್ಯಾಗ್ ಇರಲಿವೆ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.