ADVERTISEMENT

ಟಾಟಾ 'ನೆಕ್ಸಾನ್‌' ಎಲೆಕ್ಟ್ರಿಕ್‌ ಎಸ್‌ಯುವಿ ಬಿಡುಗಡೆ: ಬೆಲೆ ₹ 13.99 ಲಕ್ಷ

ಏಜೆನ್ಸೀಸ್
Published 28 ಜನವರಿ 2020, 10:30 IST
Last Updated 28 ಜನವರಿ 2020, 10:30 IST
ಟಾಟಾ ನೆಕ್ಸಾನ್‌ ಎಲೆಕ್ಟ್ರಿಕ್‌ ಎಸ್‌ಯುವಿ
ಟಾಟಾ ನೆಕ್ಸಾನ್‌ ಎಲೆಕ್ಟ್ರಿಕ್‌ ಎಸ್‌ಯುವಿ    
""

ಮುಂಬೈ: ಟಾಟಾ ಮೋಟಾರ್ಸ್‌ ಕಾಂಪ್ಯಾಕ್ಟ್‌ ಸ್ಫೋರ್ಟ್ಸ್‌ ಯುಟಿಲಿಟಿ 'ನೆಕ್ಸಾನ್‌' ಎಲೆಕ್ಟ್ರಿಕ್‌ ಕಾರು ಬಿಡುಗಡೆಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ₹ 13.99 ಲಕ್ಷ ನಿಗದಿಯಾಗಿದೆ. ಸಂಸ್ಥೆಯು ಕಳೆದ ಡಿಸೆಂಬರ್‌ನಲ್ಲಿ ಎಲೆಕ್ಟ್ರಿಕ್‌ ಆವೃತ್ತಿಯ ಕಾರು ಅನಾವರಣಗೊಳಿಸಿತ್ತು.

ಮುಂದಿನ 24 ತಿಂಗಳಲ್ಲಿ ಟಾಟಾ ಮೋಟಾರ್ಸ್‌ ಎರಡು ಎಸ್‌ಯುವಿ, ಒಂದು ಹ್ಯಾಚ್‌ಬ್ಯಾಕ್‌ ಹಾಗೂ ಸೆಡಾನ್‌ ಸೇರಿದಂತೆ ಒಟ್ಟು ನಾಲ್ಕು ಮಾದರಿಯ ಎಲೆಕ್ಟ್ರಿಕ್‌ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆ ಇರುವುದಾಗಿ ಟಾಟಾ ಸನ್ಸ್‌ ಗ್ರೂಪ್‌ನ ಅಧ್ಯಕ್ಷ ಎನ್‌.ಚಂದ್ರಶೇಕರನ್‌ ಘೋಷಿಸಿದರು.

ಜಿಪ್ಟ್ರಾನ್‌ ಟೆಕ್ನಾಲಜಿ ಅಳವಡಿಸಿಕೊಂಡಿರುವ ಎಲೆಕ್ಟ್ರಿಕ್‌ ಎಸ್‌ಯುವಿ ವೇಗದ ಚಾರ್ಜಿಂಗ್‌ ಸೌಲಭ್ಯ ಹೊಂದಿದ್ದು,ಒಮ್ಮೆ ಪೂರ್ಣ ಚಾರ್ಜ್‌ ಮಾಡಿದರೆ 312 ಕಿ.ಮೀ. ಸಂಚರಿಸಬಹುದಾಗಿದೆ.

ADVERTISEMENT

129 ಪಿಎಸ್‌ ಎಸಸಿ ಮೋಟಾರ್‌ಗೆ 30.2 ಕಿ.ವ್ಯಾಟ್‌ ಹವರ್‌ ಲಿಥಿಯಮ್‌ ಐಯಾನ್‌ ಬ್ಯಾಟರಿ ಶಕ್ತಿ ನೀಡುತ್ತದೆ. ಅಳವಡಿಸಲಾಗಿರುವ ಎಲೆಕ್ಟ್ರಿಕ್‌ ಮೋಟಾರ್‌ 245 ನ್ಯೂಟನ್‌ ಮೀಟರ್‌ ಟಾರ್ಕ್ ಬಿಡುಗಡೆ ಮಾಡುತ್ತದೆ. ಶೂನ್ಯದಿಂದ 100 ಕಿ.ಮೀ. ವೇಗವನ್ನು 9.9 ಸೆಕೆಂಡ್‌ಗಳಲ್ಲಿ ತಲುಪುವ ಸಾಮರ್ಥ್ಯ ಹೊಂದಿದೆ.

ಫಾಸ್ಟ್‌ ಡಿಸಿ ಚಾರ್ಜರ್‌ ಮೂಲಕ 60 ನಿಮಿಷಗಳಲ್ಲಿ ಬ್ಯಾಟರಿ ಶೇ 80ರಷ್ಟು ಚಾರ್ಜ್‌ ಆಗುತ್ತದೆ. ಸುದೀರ್ಘ ಬ್ಯಾಟರಿ ಬಾಳಿಕೆಹೊಂದಿದ್ದು,ಬ್ಯಾಟರಿಗೆ 8 ವರ್ಷಗಳವರೆಗೆ ಅಥವಾ 1.60 ಲಕ್ಷ ಕಿ.ಮೀವಾರಂಟಿ ನೀಡಲಾಗಿದೆ.

ಟಾಟಾ ನೆಕ್ಸಾನ್‌ ಇವಿ ಎಕ್ಸ್‌ಎಂ ಬೆಲೆ ₹ 13.99 ಲಕ್ಷ, ಎಕ್ಸ್‌ಝಡ್‌+ ಬೆಲೆ ₹ 14.99 ಲಕ್ಷ ಹಾಗೂಎಕ್ಸ್‌ಝಡ್‌+ಲಕ್ಸ್‌ ಬೆಲೆ ₹ 15.99 ಲಕ್ಷ ಇದೆ.

ಟಾಟಾ ಸನ್ಸ್‌ನ ಗೌರವ ಅಧ್ಯಕ್ಷ ರತನ್‌ ಟಾಟಾ ಕಾರು ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.